ಬೆಂಗಳೂರು: ರಾಜ್ಯದಲ್ಲಿಂದು ಕೊರೊನಾ ಸೋಂಕಿತರ ಸಂಖ್ಯೆ ಇಳಿಕೆ ಕಂಡಿದ್ದು, 16,604 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 26,04,431 ಕ್ಕೆ ಏರಿದೆ.
-
Karnataka records 16,604 new #COVID19 cases, 44,473 discharges, and 411 deaths in the last 24 hours; active cases at 3,13,730 pic.twitter.com/Sq3V0Wzkt1
— ANI (@ANI) May 31, 2021 " class="align-text-top noRightClick twitterSection" data="
">Karnataka records 16,604 new #COVID19 cases, 44,473 discharges, and 411 deaths in the last 24 hours; active cases at 3,13,730 pic.twitter.com/Sq3V0Wzkt1
— ANI (@ANI) May 31, 2021Karnataka records 16,604 new #COVID19 cases, 44,473 discharges, and 411 deaths in the last 24 hours; active cases at 3,13,730 pic.twitter.com/Sq3V0Wzkt1
— ANI (@ANI) May 31, 2021
ಇನ್ನು ಗಣನೀಯವಾಗಿ ಸೋಂಕಿತರು ಗುಣಮುಖರಾಗುತ್ತಿದ್ದು, 44,473 ಮಂದಿ ಡಿಸ್ಚಾರ್ಜ್ ಆಗಿದ್ದು, 22,61,590 ಜನರು ಗುಣಮುಖರಾಗಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳು 3,13,730 ರಷ್ಟು ಇವೆ.
ರಾಜ್ಯದಲ್ಲಿ ಸೋಂಕಿತರ ಪ್ರಕರಣಗಳ ಶೇಕಡವಾರು 13.57 ರಷ್ಟು ಇದ್ದು, ಸಾವಿನ ಶೇಕಡವಾರು ಪ್ರಮಾಣ 2.47 ರಷ್ಟು ಇದೆ. ಕೋವಿಡ್ಗೆ 411 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 29,090ಕ್ಕೆ ಏರಿದೆ.
ಇನ್ನು ಯುಕೆಯಿಂದ 139 ಮಂದಿ ಪ್ರಯಾಣಿಕರು ಆಗಮಿಸಿದ್ದಾರೆ. ಇನ್ನು ರಾಜ್ಯಕ್ಕೆ ಮತ್ತಷ್ಟು ಬ್ಲ್ಯಾಕ್ ಫಂಗಸ್ ಔಷಧ ಪೂರೈಕೆ ಆಗ್ತಿದ್ದು, ದೇಶಾದ್ಯಂತ ಒಟ್ಟು 30,100 ವಯಲ್ಸ್ ಪೂರೈಕೆ ಆಗಿದೆ. ಕರ್ನಾಟಕಕ್ಕೆ 1930 ವಯಲ್ಸ್ ಆಂಪೊಟೊರಿಸಿನ್ ಬಿ ಔಷಧ ಪೂರೈಕೆ ಆಗಿದೆ. ರಾಜ್ಯಕ್ಕೆ ಇಲ್ಲಿವರೆಗೆ ಒಟ್ಟು 12,710 ವಯಲ್ಸ್ ಪೂರೈಕೆ ಮಾಡಲಾಗಿದೆ. (ಕೊರೊನಾ ರೋಗಿಗಳ ಮುಂದೆ ಕುಣಿದು ರಂಜಿಸಿದ ಹರ್ಷಿಕಾ ಹಾಗೂ ಭುವನ್ ಪೊನ್ನಣ್ಣ!)