ಬೆಂಗಳೂರು: ಸಚಿವರಾಗಿ ಪದಗ್ರಹಣ ಮಾಡುತ್ತಿರುವ ಡಾ.ಕೆ ಸುಧಾಕರ್ ಅಭಿಮಾನಿಗಳು ಕಡೆಯ ಕ್ಷಣಗಳಲ್ಲಿ ಬಲವಂತವಾಗಿ ರಾಜಭವನದ ಒಳಗೆ ಪ್ರವೇಶಿಸಿದರು.
ರಾಜಭವನದ ಒಳಗೆ ಪದಗ್ರಹಣ ಸಮಾರಂಭಕ್ಕೆ ತೆರಳಲು ಅರ್ಧ ಗಂಟೆ ಮೊದಲೇ ಆಗಮಿಸಬೇಕಿದ್ದ, ಅಭಿಮಾನಿಗಳು ತಡವಾಗಿ ಬಂದರು. ಇವರನ್ನು ಒಳಗೆ ಬಿಡಲು ಪೊಲೀಸರು ನಿರಾಕರಿಸಿದ ವೇಳೆ ಆಕ್ರೋಶ ವ್ಯಕ್ತಪಡಿಸಿದರು. ಅಂತಿಮವಾಗಿ ಇವರ ಬಲವಂತಕ್ಕೆ ಮಣಿದು ಪ್ರವೇಶಕ್ಕೆ ಅವಕಾಶ ನೀಡಲಾಯಿತು.
ಒಳಗೆ ತೆರಳುವ ಮುನ್ನ 12ಕ್ಕೂ ಹೆಚ್ಚು ಸಂಖ್ಯೆಯಲ್ಲಿದ್ದ ಅಭಿಮಾನಿಗಳು ರಾಜಭವನದ ಮುಖ್ಯ ದ್ವಾರದ ಮೂಲಕ ಪ್ರವೇಶಕ್ಕೆ ಪ್ರಯತ್ನಿಸಿ, ಅಲ್ಲಿಯೇ ಬ್ಯಾನರ್ಗಳನ್ನು ಹಿಡಿದು ಘೋಷಣೆ ಕೂಗಿ ಸಂಭ್ರಮಿಸಿದರು. ರಾಜಭವನ ಮುಖ್ಯದ್ವಾರದಿಂದ ಪ್ರವೇಶಕ್ಕೆ ಅವಕಾಶ ಇಲ್ಲ ಎಂದು ತಿಳಿದ ಬಳಿಕ ಪಕ್ಕದ ಪಾದಚಾರಿ ಮಾರ್ಗದ ಮೂಲಕ ಆಗಮಿಸಿ ಒತ್ತಾಯ ಪೂರ್ವಕವಾಗಿ ಒಳನಡೆದರು.
ಬಳಿಕ ಸಾಕಷ್ಟು ಮಂದಿ ಹೂ ಗುಚ್ಚ ಹಿಡಿದು ರಾಜಭವನದ ಒಳಗೆ ಪ್ರವೇಶಿಸಲು ಆಗಮಿಸಿದ ಸಂದರ್ಭ, ತಡವಾಗಿದೆ ಹಾಗೂ ಸ್ಥಳವಕಾಶದ ಕೊರತೆ ಇದೆ ಎಂಬ ಕಾರಣ ನೀಡಿ ಪೊಲೀಸರು ವಾಪಸ್ ಕಳುಹಿಸಿದರು. ಮಧ್ಯಾಹ್ನ 2 ಗಂಟೆಯವರೆಗೂ ಪ್ರವೇಶ ಅವಕಾಶ ಕಲ್ಪಿಸಲಾಗಿತ್ತು. 800 ಮಂದಿ ಪೂರ್ವ ಸ್ಥಳಾವಕಾಶವಿರುವ ರಾಜಭವನದ ಗಾಜಿನ ಮನೆಯಲ್ಲಿ ಸುಮಾರು ಎರಡು ಸಾವಿರದಷ್ಟು ಅಭಿಮಾನಿಗಳು ತೆರಳಿ ಸಮಾರಂಭ ವೀಕ್ಷಿಸಿದರು.
ಪೊಲೀಸರು ರಾಜಭವನ ರಸ್ತೆಯ ಪ್ರವೇಶ ದ್ವಾರದಲ್ಲಿಯೇ ಸಾಕಷ್ಟು ಜನರನ್ನು ವಾಪಸ್ ಕಳುಹಿಸಿದ್ದರಿಂದ ರಾಜಭವನ ಅಭಿಮಾನಿಗಳಲ್ಲಿದೆ ಬಿಕೋ ಎನ್ನುತ್ತಿತ್ತು. ತಮ್ಮ ಕ್ಷೇತ್ರದ ಪ್ರತಿನಿಧಿಗಳು ಸಚಿವರಾಗುವ ಸಂಭ್ರಮದ ಕ್ಷಣವನ್ನು ವೀಕ್ಷಿಸುವ ಅವಕಾಶ ನಿಯಮಾವಳಿ ಹಿನ್ನೆಲೆ ಸಾಕಷ್ಟು ಅಭಿಮಾನಿಗಳಿಗೆ ದೊರೆಯಲಿಲ್ಲ.
ಇದನ್ನೂ ಓದಿ: ಬೊಮ್ಮಾಯಿ ಸಂಪುಟದಲ್ಲಿ ಜಾರಕಿಹೊಳಿ ಬ್ರದರ್ಸ್‌ಗೆ ಒಲಿಯಲಿಲ್ಲ ಮಂತ್ರಿಸ್ಥಾನ