ETV Bharat / city

ಬೆಂಗಳೂರು ಕರಗ ಉತ್ಸವಕ್ಕೆ ಅದ್ಧೂರಿ ತೆರೆ.. ರಾಜಬೀದಿಗಳಲ್ಲಿ ಗೋವಿಂದ ಗೋವಿಂದ ಎಂಬ ಜೈಕಾರ..‌

ವಿಶ್ವ‌ವಿಖ್ಯಾತ ಬೆಂಗಳೂರು ಕರಗ ಉತ್ಸವ ಅದ್ಧೂರಿಯಾಗಿ ತೆರೆಕಂಡಿದೆ. ದೇವಾಲಯದಿಂದ ತೆರಳಿದ ಕರಗ ರಾಜಬೀದಿಯಲ್ಲಿ ಸಂಚಾರ ನಡೆಸಿತು. ಈ ಸಂದರ್ಭದಲ್ಲಿ ದರ್ಶನ ನೀಡಿದ ದ್ರೌಪದಿ ತಾಯಿಗೆ ವೀರಕುಮಾರರು ಅಲಗು ಸೇವೆಯನ್ನು ಸಲ್ಲಿಸಿದರು.

karaga-festival-held-at-banglore
ರಾಜಬೀದಿಗಳಲ್ಲಿ ಸಂಚರಿಸಿದ ಬೆಂಗಳೂರು ಕರಗ; ಎಲ್ಲೆಲ್ಲೂ ಗೋವಿಂದ ಗೋವಿಂದ ಎಂಬ ಜೈಕಾರ..‌
author img

By

Published : Apr 17, 2022, 10:46 AM IST

ಬೆಂಗಳೂರು: ರಾಜಧಾನಿ ಬೆಂಗಳೂರಿನ‌ ಹೆಮ್ಮೆಯ ವಿಶ್ವ‌ವಿಖ್ಯಾತ ಬೆಂಗಳೂರು ಕರಗ ಉತ್ಸವ ಅದ್ಧೂರಿಯಾಗಿ ತೆರೆಕಂಡಿದೆ. ಪೂಜಾ ವಿಧಿವಿಧಾನಕ್ಕೆ ಮಳೆರಾಯ ಅಡ್ಡಿಯಾದ ಹಿನ್ನೆಲೆ ಮಧ್ಯರಾತ್ರಿ ಎರಡು ಗಂಟೆಯವೆರೆಗೂ ಕರಗ ದರ್ಶನ ಆಗಲಿಲ್ಲ.‌ ಮಳೆಯ ಕಾರಣದಿಂದಾಗಿ ಕರಗದ ಕುಂಟೆ ಪೂಜೆಯು ತಡವಾಯಿತು. ಸುಮಾರು 2-40 ಕ್ಕೆ ಕರಗ ಹೊತ್ತ ಜ್ಞಾನೇಂದ್ರ, ದೇವಾಲಯದಲ್ಲಿ ಮೂರು ಪ್ರದಕ್ಷಿಣೆ ಹಾಕಿ ಹೊರ ಬಂದರು.

ಸರಿಯಾಗಿ ನಸುಕಿನಜಾವ 3-08 ದೇವಾಲಯದಿಂದ ತೆರಳಿದ ಕರಗ ರಾಜಬೀದಿಯಲ್ಲಿ ಸಂಚರಿಸಿತು. ಇತ್ತ ಕುಣಿಯುತ್ತ ಭಕ್ತರಿಗೆ ದರ್ಶನ ನೀಡಿದ ದ್ರೌಪದಿ ತಾಯಿಗೆ ಅಲಗು ಸೇವೆಯನ್ನು ವೀರ ಕುಮಾರರು ಸಲ್ಲಿಸಿದರು. ಸಾವಿರಾರು ಭಕ್ತರು ಈ ಸಲದ ಅದ್ಧೂರಿ ಕರಗ ಮಹೋತ್ಸವಕ್ಕೆ ಸಾಕ್ಷಿಯಾದರು. ಎಲ್ಲೆಡೆ ಗೋವಿಂದ ಗೋವಿಂದ ಎಂಬ ನಾಮಸ್ಮರಣೆ ಕೇಳಿ ಬಂತು. ಮಲ್ಲಿಗೆ ಹೂಗಳನ್ನ ಹೂವಿನ ಕರಗಕ್ಕೆ ಎರಚುತ್ತಾ ಭಕ್ತರು ಜೈಕಾರ ಹಾಕಿದರು. ಕರಗ ಶಕ್ತ್ಯೋತ್ಸವಕ್ಕೆ ಸ್ಥಳೀಯ ಶಾಸಕ ಉದಯ್ ಗರುಡಚಾರ್ ಹಾಗೂ ಸಂಸದ ತೇಜಸ್ವಿ ಸೂರ್ಯ ಆಗಮಿಸಿ ಉತ್ಸವವನ್ನು ಕಣ್ತುಂಬಿಕೊಂಡರು.

ಬೆಂಗಳೂರಿನಲ್ಲಿ ಅದ್ಧೂರಿ ಕರಗ ಉತ್ಸವ

ಪುನೀತ್ ಭಾವಚಿತ್ರ ಹಿಡಿದು ಬಂದ ವೀರ ಕುಮಾರರು: ಇನ್ನು ಕರಗ ಉತ್ಸವದಲ್ಲಿ ವೀರ ಕುಮಾರರ ನಡುವೆ ದಿವಂಗತ ನಟ ಪುನೀತ್ ರಾಜ್ ಕುಮಾರ್ ಫೋಟೋ ಕಂಗೊಳಿಸಿತು.‌ ಅಪ್ಪು ಫೋಟೋ ಹಿಡಿದು ಬಂದ ವೀರ ಕುಮಾರರ ತಂಡ ಅಪ್ಪುಗೆ ಜೈಕಾರ ಹಾಕಿ ಅಭಿಮಾನ ವ್ಯಕ್ತಪಡಿಸಿದ್ದಾರೆ.‌

ಮಸ್ತಾನ್ ಸಾಬ್ ದರ್ಗಾಗೂ ಭೇಟಿ: ಧರ್ಮ ದಂಗಲ್ ನಡುವೆ ಹಲವರು ಬೆಂಗಳೂರು ಕರಗ ದರ್ಗಾಕ್ಕೆ ಹೋಗಬಾರದು ಎಂದು ಒತ್ತಾಯಿಸಿದರು. ಆದರೆ ಹಿಂದಿನ ಸಂಪ್ರದಾಯದಂತೆ ಬೆಂಗಳೂರು ಕರಗ ಅಕ್ಕಿಪೇಟೆಯಲ್ಲಿರುವ ಮಸ್ತಾನ್ ಸಾಬ್ ದರ್ಗಾಕ್ಕೆ ಭೇಟಿ ನೀಡಿತು. ಸರ್ವ ಧರ್ಮ ಸಮ್ಮೇಳನಕ್ಕೆ ಬೆಂಗಳೂರು ಕರಗ ಸಾಕ್ಷಿಯಾಯಿತು.

ಓದಿ : ಬೆಂಗಳೂರಲ್ಲಿ ಮುಂದಿನ 24 ಗಂಟೆ ಗುಡುಗು ಸಹಿತ ಮಳೆ.. ಇಲ್ಲಿದೆ ಹವಾಮಾನ ವರದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.