ETV Bharat / city

ಕನ್ನಡ ರಾಜ್ಯೋತ್ಸವ ಜನೋತ್ಸವ ಆಗಲಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ - CM Basavaraj Bommai

ಭಾಷೆ ಎಷ್ಟು ಶ್ರೀಮಂತವಾಗಿರುತ್ತದೆಯೋ ಅಷ್ಟೇ ಶ್ರೀಮಂತವಾಗಿ ಆ ನಾಡು ಇರುತ್ತದೆ. ಕನ್ನಡವನ್ನ ಎಲ್ಲ ಆಯಾಮಗಳಲ್ಲಿ ವಿಸ್ತರಣೆ ಮಾಡುವ ಅವಶ್ಯಕತೆ ಇದೆ. ದೇಶದಲ್ಲಿ ಅತ್ಯಂತ ಪುರಾತನವಾದ ಭಾಷೆಗಳಲ್ಲಿ ಕನ್ನಡ ಕೂಡ ಒಂದು. ಸಿಂಧೂ ನಾಗರಿಕತೆಗಿಂತ ಮೊದಲು ಕನ್ನಡ ಭಾಷೆ ಬಳಿಕೆಯಲ್ಲಿತ್ತು. ಇದಕ್ಕೆ ಇಲ್ಲಿ ಐತಿಹಾಸಿಕ ಗುರುತುಗಳಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Kannada Rajyotsava Celebration In Bangalore
66ನೇ ಕನ್ನಡ ರಾಜ್ಯೋತ್ಸವ: ಸಿಎಂ ಬೊಮ್ಮಾಯಿ ಚಾಲನೆ
author img

By

Published : Nov 1, 2021, 11:51 AM IST

ಬೆಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಕಂಠೀರವ ಕ್ರೀಡಾಂಗಣದಲ್ಲಿ 66ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಡದೇವಿ ಭುವನೇಶ್ವರಿಗೆ ಪುಷ್ಪನಮನ‌ ಸಲ್ಲಿಸಿ ಧ್ವಜಾರೋಹಣ ನೆರವೇರಿಸಿದರು.

ಕನ್ನಡ ಕಡ್ಡಾಯಕ್ಕೆ ನಮ್ಮವರೇ ಅಡ್ಡಾಗಲು: ಕನ್ನಡದ ನೆಲದಲ್ಲಿ ಕನ್ನಡವೇ ಮುಖ್ಯವಾಗಬೇಕು. ಕನ್ನಡ ಕಡ್ಡಾಯಕ್ಕೆ ನಮ್ಮವರೇ ಅಡ್ಡಾಗಲು ಹಾಕುತ್ತಿದ್ದಾರೆ ಎಂದು ರಿಜ್ವಾನ್ ಹರ್ಷದ್ ಹೇಳಿದರು. ಬೇರೆ ರಾಜ್ಯದಲ್ಲಿ ಭಾಷೆ ಕಡ್ಡಾಯ ಮಾಡಲು ನ್ಯಾಯಾಲಯದ ಮೊರೆ ಹೋಗ್ತಾರೆ‌‌.‌ ಆದರೆ ಕರ್ನಾಟಕದಲ್ಲಿ ಕನ್ನಡ ಕಡ್ಡಾಯ ಮಾಡಲು ನಮ್ಮವರೇ ಅಡ್ಡಗಾಲು ಹಾಕಿರುವುದು ನಿಜಕ್ಕೂ ದುರಂತ ಎಂದರು.

ಹಿಂದಿ ಹೇರಿಕೆಯನ್ನ ನಾವು ಎಂದಿಗೂ ಸಹಿಸುವುದಿಲ್ಲ. ಭಾರತದಲ್ಲಿ ಕೇವಲ 34ರಷ್ಟು ಭಾಗದಲ್ಲಿ ಮಾತ್ರ ಹಿಂದಿ ಮಾತನಾಡುತ್ತಾರೆ ಅಷ್ಟೇ. ಶೇ.66 ರಷ್ಟು ಹಿಂದಿ ಮಾತನಾಡುವುದಿಲ್ಲ. ಆದರೆ ಎಲ್ಲೆಡೆ ಹಿಂದಿ ಹೇರಿಕೆಯಾಗುತ್ತಿದೆ. ತ್ರೀ ಭಾಷಾ ಕಲಿಕೆಗೆ ವಿರೋಧವಿಲ್ಲ, ಹಿಂದಿ ಒಂದು ಭಾಷೆಯಾಗಿ ಕಲೆಯಲು ವಿರೋಧವಿಲ್ಲ. ಆದ್ರೆ ಹಿಂದಿ ಹೇರಿಕೆ ಸಲ್ಲದು. ಕನ್ನಡದ ನೆಲದಲ್ಲಿ ಕನ್ನಡವೇ ಮುಖ್ಯವಾಗಬೇಕು ಎಂದು ಒತ್ತಾಯಿಸಿದರು.

ಬಳಿಕ ಮಾತಾನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೋವಿಡ್ ಹಿನ್ನೆಲೆ ರಾಜ್ಯೋತ್ಸವವನ್ನ ಸೀಮಿತವಾಗಿ ಆಚರಿಸಲಾಗುತ್ತಿದೆ. ಕನ್ನಡ ರಾಜ್ಯೋತ್ಸವ ಜನೋತ್ಸವ ಆಗಲಿ. ಭಾಷೆ ಎಷ್ಟು ಶ್ರೀಮಂತವಾಗಿರುತ್ತದೆಯೋ ಅಷ್ಟೇ ಶ್ರೀಮಂತವಾಗಿ ಆ ನಾಡು ಇರುತ್ತದೆ. ಕನ್ನಡವನ್ನ ಎಲ್ಲ ಆಯಾಮಗಳಲ್ಲಿ ವಿಸ್ತರಣೆ ಮಾಡುವ ಅವಶ್ಯಕತೆ ಇದೆ. ಭಾರತ ದೇಶದಲ್ಲಿ ಅತ್ಯಂತ ಪುರಾತನವಾದ ಭಾಷೆಗಳಲ್ಲಿ ಕನ್ನಡ ಕೂಡ ಒಂದು. ಸಿಂಧೂ ನಾಗರಿಕತೆಗಿಂತ ಮೊದಲು ಕನ್ನಡ ಭಾಷೆ ಬಳಿಕೆಯಲ್ಲಿತ್ತು. ಇದಕ್ಕೆ ಇಲ್ಲಿ ಐತಿಹಾಸಿಕ ಗುರುತುಗಳಿವೆ. ಕನ್ನಡಕ್ಕೆ ತನ್ನದೇ ಅಂತರ್ಗತ ಶಕ್ತಿ ಇದೆ. ಸೂರ್ಯ ಚಂದ್ರ ಇರುವವರೆಗೂ ಈ ಶಕ್ತಿ ಕಡಿಮೆ ಮಾಡಲು ಸಾಧ್ಯವಿಲ್ಲ ಎಂದರು.

ಈಗಲೂ ಮುಂಬೈ ಕರ್ನಾಟಕ ಎಂದರೆ ಹೇಗೆ?: ಗಡಿ ವಿವಾದ ಈಗಾಗಲೇ ಎಲ್ಲಾ ಬಗೆಹರಿದಿದೆ. ಆದರೂ ಅಲ್ಲಲ್ಲಿ ಕ್ಯಾತೆ ಶುರುವಾಗಿದೆ. ಈಗಲೂ ನಾವು ಮುಂಬೈ ಕರ್ನಾಟಕ ಎಂದರೆ ಹೇಗೆ?. ಹಾಗಾಗಿ ನಾನು ಮೊನ್ನೆ ಕಿತ್ತೂರು ಕರ್ನಾಟಕ ಎಂದು ಘೋಷಣೆ ಮಾಡಿದ್ದೇನೆ. ಮುಂದಿನ‌ ಸಂಪುಟ ಸಭೆಯಲ್ಲಿ ಕಿತ್ತೂರು ಕರ್ನಾಟಕಕ್ಕೆ ಅನುಮೋದನೆ ಸಿಗಲಿದೆ. ಬರೀ ಹೆಸರು ಬದಲಾವಣೆ ಮಾತ್ರವಲ್ಲ, ಆಡಳಿತ ಯಂತ್ರವನ್ನೂ ಬದಲಾವಣೆ ಮಾಡುತ್ತೇವೆ. ಮುಂದಿನ ಬಜೆಟ್​​​ನಲ್ಲಿ ಕಿತ್ತೂರು ಕರ್ನಾಟಕಕ್ಕಾಗಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡುತ್ತೇವೆ. ಮುಂದಿನ ಬಜೆಟ್​​​ನಲ್ಲಿ ಕಲ್ಯಾಣ ಕರ್ನಾಟಕಕ್ಕಾಗಿ 3 ಸಾವಿರ ಕೋಟಿ ರೂ. ಪ್ಯಾಕೇಜ್ ನೀಡಲಿದ್ದೇವೆ ಎಂದು ಸಿಎಂ ಭರವಸೆ ನೀಡಿದರು.

ನೂತನ ಶಿಕ್ಷಣ ನೀತಿಯಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ: ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಪ್ರಸ್ತಾಪಿಸಿದ ಸಿಎಂ, ನೂತನ ಶಿಕ್ಷಣ ನೀತಿಯಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ನೀಡಲಾಗುವುದು.‌ ತಾಂತ್ರಿಕ ಶಿಕ್ಷಣವನ್ನೂ ಕನ್ನಡದಲ್ಲಿ ನೀಡಲು ನಮ್ಮ ಸರ್ಕಾರ ನಿರ್ಧರಿಸಿದೆ. ಕೋರ್ಟ್​ನಲ್ಲಿ ಕರ್ನಾಟಕದ ಶಿಕ್ಷಣ ನೀತಿ ಬಗ್ಗೆ ಪ್ರಶ್ನೆ ಮಾಡಲಾಗಿದೆ. ಸುಪ್ರೀಂಕೋರ್ಟ್ ವರೆಗೂ ಹೋಗಿ ಪ್ರಶ್ನೆ ಮಾಡಲಾಗಿದೆ. ನಾವು ತೆಗೆದುಕೊಂಡ‌ ನಿರ್ಣಯವನ್ನು ಎಲ್ಲ ವೇದಿಕೆಗಳಲ್ಲಿಯೂ ಸಮರ್ಥಿಸಿಕೊಳ್ಳಲಿದ್ದೇವೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

ಇದೇ ವೇಳೆ ಮಾತಾನಾಡಿದ ಶಿಕ್ಷಣ ಸಚಿವ ನಾಗೇಶ್, ನಮ್ಮ ನಾಡು, ನುಡಿ, ಸಂಸ್ಕೃತಿಯ ಬೆಳವಣಿಗೆಯಲ್ಲಿ ಶಾಲೆಗಳು ಅತ್ಯಂತ ಮಹತ್ವದ ಪಾತ್ರ ವಹಿಸುತ್ತವೆ. ರಾಜ್ಯದ ಶಾಲೆಗಳಲ್ಲಿ ಭೌತಿಕ ತರಗತಿ ಮತ್ತು ಮಧ್ಯಾಹ್ನದ ಬಿಸಿ ಊಟ ವ್ಯವಸ್ಥೆಯನ್ನು ಪುನಾರಂಭಿಸಿರುವುದು ಮಕ್ಕಳಲ್ಲಿ ಮತ್ತು ಪೋಷಕರಲ್ಲಿ ಸಂತಸ ಮೂಡಿಸಿದೆ ಎಂದರು.

ಸ್ವಚ್ಛತೆಯ ಕಡೆ ಗಮನಹರಿಸಿ: ವಿದ್ಯಾರ್ಥಿಗಳ ಕಲಿಕಾ ನಿರಂತರತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ನಮ್ಮ ಶಾಲಾ ಶಿಕ್ಷಕರು ಮತ್ತು ಇಲಾಖೆ ಅತ್ಯಂತ ಶ್ಲಾಘನೀಯ ಕಾರ್ಯವನ್ನು ಮಾಡಿದೆ. ಇಲಾಖೆ ನೀಡಿರುವ ಎಸ್​​​ಒಪಿ ಯಂತೆ ಶಾಲೆಗಳಲ್ಲಿ ಗರಿಷ್ಠ ಸುರಕ್ಷತಾ ಕ್ರಮಗಳನ್ನು ಪಾಲಿಸುವುದು ಹಾಗು ನಾವು ವಾಸಿಸುವ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ. ಇದರಿಂದ ನಾವು ಒಳಗಾಗಬಹುದಾದ ಹಲವು ಮಾರಕ ಸೋಂಕಿನ ಸರಪಳಿಯನ್ನು ಆರಂಭದಲ್ಲಿಯೇ ತುಂಡರಿಸಬಹುದಾಗಿದೆ. ಆದ್ದರಿಂದ ಪ್ರತಿಯೊಬ್ಬರು ಸ್ವಚ್ಛತೆಯ ಕಡೆ ಗಮನಹರಿಸಲು ಕೋರುತ್ತೇನೆ ಎಂದು ತಿಳಿಸಿದರು.

ನುಡಿಯ ಸಂರಕ್ಷಣೆಗೆ ಸದಾ ಕಟಿಬದ್ಧರಾಗಿರೋಣ: ಸರ್ಕಾರಿ ಶಾಲೆಗಳನ್ನು ಸಬಲೀಕರಣಗೊಳಿಸುವುದು ನಮ್ಮೆಲ್ಲರ ಆದ್ಯತೆಯಾಗಿದೆ. ರಾಜ್ಯದ ಒಟ್ಟು 20,718 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ 14,236 ಶಾಲೆಗಳಲ್ಲಿ 30ಕ್ಕಿಂತ ಕಡಿಮೆ ಮಕ್ಕಳ ದಾಖಲಾತಿ ಇದೆ. ಅದೇ ರೀತಿ ಒಟ್ಟು 22,501 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 2421 ಶಾಲೆಗಳಲ್ಲಿ 35 ಕ್ಕಿಂತ ಕಡಿಮೆ ಮಕ್ಕಳ ದಾಖಲಾತಿ ಇದೆ.

ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ 2020ರ ಶಿಫಾರಸ್ಸಿನಂತೆ ಗ್ರಾಮ ಪಂಚಾಯತ್​ ಮಟ್ಟದಲ್ಲಿ ಉತ್ತಮ ಮೂಲಭೂತ ಸೌಕರ್ಯಗಳನ್ನು ಹೊಂದಿದ ಶಾಲಾ ಸಂಕೀರ್ಣಗಳನ್ನು ಸ್ಥಾಪಿಸಲು ಯೋಜಿಸಲಾಗುತ್ತಿದೆ. ಸರ್ಕಾರಿ ಶಾಲೆಗಳ ಸರ್ವತೋಮುಖ ಅಭಿವೃದ್ಧಿಯಲ್ಲಿ ಇದು ಮೈಲಿಗಲ್ಲಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಅದಕ್ಕಾಗಿ ಈ ಕಾರ್ಯಕ್ರಮವನ್ನು ಒಂದು ಆಂದೋಲನದ ರೂಪದಲ್ಲಿ ಸಮುದಾಯದ ಮುಂದೆ ಪ್ರಸ್ತುತ ಪಡಿಸಬೇಕಿದೆ. ಈ ಹಿನ್ನೆಲೆಯಲ್ಲಿ ನಾವೆಲ್ಲರೂ ಸರ್ಕಾರಿ ಶಾಲೆಗಳನ್ನು ಸಬಲೀಕರಣಗೊಳಿಸುವುದೂ ಸೇರಿದಂತೆ ನಾಡು ನುಡಿಯ ಸಂರಕ್ಷಣೆಗೆ ಸದಾ ಕಟಿಬದ್ಧರಾಗಿರೋಣ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ನಟ ಪುನೀತ್ ನಿಧನಕ್ಕೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಇದನ್ನೂ ಓದಿ: ಕುಂದಾನಗರಿಯಲ್ಲಿ ಸರಳ ಕನ್ನಡ ರಾಜ್ಯೋತ್ಸವ: ನಾಡದೇವಿಗೆ ಪೂಜೆ ಸಲ್ಲಿಸಿದ ಸಚಿವ ಗೋವಿಂದ ಕಾರಜೋಳ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.