ಮಹದೇವಪುರ (ಬೆಂಗಳೂರು): ಮುಗಿಲು ಹೊಸ ಆಲ್ಬಮ್ ಸಾಂಗ್ ವೀಕ್ಷಿಸಲು ಮುಗಿಬಿದ್ದ ಪ್ರೇಕ್ಷಕರು. ಕನ್ನಡದಲ್ಲಿ ಹೊಸ ಆಲ್ಬಮ್ ಸಾಂಗ್ಗಳು ಸದ್ಯದ ಮಟ್ಟಿಗೆ ಸದ್ದು ಮಾಡುತ್ತಿದ್ದು, ಅಂಥದರ ಪೈಕಿ ಮುಗಿಲು ಎಂಬ ನೂತನ ಆಲ್ಬಮ್ ಸಾಂಗ್ ಸೇರ್ಪಡೆಗೊಂಡಿದೆ.
ಮೂಲತಃ ಟ್ರೋಲ್ ಪೇಜ್, ಸೋಷಿಯಲ್ ಮೀಡಿಯಾಗಳಲ್ಲಿ ಗುರುತಿಸಲ್ಪಟ್ಟ ಯುವ ಪ್ರತಿಭೆಗಳೇ ನಟಿಸಿರುವ ಸಾಂಗ್ ಇದಾಗಿದ್ದು, ಇದೇ ಮೊದಲ ಬಾರಿಗೆ ಕನ್ನಡದ ಆಲ್ಬಮ್ ಸಾಂಗ್ವೊಂದು ಥಿಯೇಟರ್ನಲ್ಲಿ ಪ್ರದರ್ಶನ ಕಂಡಿದೆ.
ಬೆಂಗಳೂರಿನ ಕಾಡುಗುಡಿ ಸಮೀಪದ ಕಿನೋ ಥಿಯೇಟರ್ನಲ್ಲಿ ಆಲ್ಬಮ್ ಸಾಂಗ್ನ್ನು ಬಿಡುಗಡೆ ಮಾಡಲಾಗಿದ್ದು ಮತ್ತು ಇದನ್ನು ವೀಕ್ಷಿಸಲು ಅಭಿಮಾನಿಗಳ ದಂಡು ಆಗಮಿಸಿ, ಥಿಯೇಟರ್ ಹೌಸ್ ಫುಲ್ ಆಗಿತ್ತು. ಹೊಸ ಪ್ರತಿಭೆಗಳು ನಟಿಸಿರುವ ಈ ಹಾಡಿನಲ್ಲಿ ಅನಿಲ್ ಅಥರ್ವ, ಶುಭಾ, ಮನು, ಗಿರಿ ಮತ್ತು ಅರ್ಪಿತಾ ಅವರು ಅಭಿನಯಿಸಿದ್ದಾರೆ. ಮೂಲತಃ ಸೋಶಿಯಲ್ ಮೀಡಿಯಾ, ಟ್ರೋಲ್ ಪೇಜ್ಗಳಿಂದ ಹೆಸರು ಮಾಡಿದ ಈ ಕಲಾವಿದರು ಮೊದಲ ಬಾರಿಗೆ ದೊಡ್ಡ ಪರದೆಯ ಮೇಲೆ ಕಾಣಿಸಿಕೊಂಡಿದ್ದಾರೆ.
ಫಸ್ಟ್ ಕ್ಲಾಸ್ ಸ್ಟುಡಿಯೋಸ್ನ ಅಪ್ಪು ಬಡಿಗೇರ್ ಮತ್ತು ಡಿ ಎಸ್ ಕೆ ಸಿನಿಮಾಸ್ನ ಡಾ. ಸುನೀಲ್ ಕುಂಬಾರ ಅವರು ಜೊತೆಯಾಗಿ ನಿರ್ಮಾಣ ಮಾಡಿದ್ದು, ಹೊಸ ಕಲಾವಿದರನ್ನು ಪ್ರೋತ್ಸಾಹಿಸಿದ್ದಾರೆ. ಇದಕ್ಕೆ ಮಧು. ಜಿ. ಗೌಡ ನಿರ್ದೇಶನ, ಗಗನ್ ಗೌಡ ಸಂಕಲನ ಮತ್ತು ಕ್ಯಾಮರಾ ಕೈಚಳಕವಿದೆ.
- " class="align-text-top noRightClick twitterSection" data="">
ಬಸವಂತ ರಾವ್ ಧ್ವನಿಯಲ್ಲಿ ಈ ಹಾಡು ಮೂಡಿ ಬಂದಿದ್ದು ಹಾಸನ ಸುತ್ತುಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಚೇತನ್ ಡ್ರ್ಯಾಗ್ ಅವರ ಸಾಹಿತ್ಯಕ್ಕೆ ರೋಷ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಇದನ್ನು ಓಂ ಕ್ರಿಯೇಷನ್ಸ್ನ ಯೂಟ್ಯೂಬ್ ಚಾನಲ್ನಲ್ಲಿ ವೀಕ್ಷಿಸಬಹುದು. ಕಾರ್ತಿಕ ರುವಾರಿ ರೆಡ್ಡಿ ಅವರು ತಂಡಕ್ಕೆ ಬೆಂಬಲ ಕೊಟ್ಟಿದ್ದಾರೆ. ಯುವ ನಾಯಕ ನಟ ಅಖಿಲ್ ಅವರು ಹಾಡನ್ನು ಬಿಡುಗಡೆಗೊಳಿಸಿ ತಂಡಕ್ಕೆ ಶುಭಕೋರಿದರು.
ಇದನ್ನೂ ಓದಿ: ದೊಡ್ಮನೆ ಕುಟುಂಬಕ್ಕೆ ಮತ್ತೊಂದು ಆಘಾತ: ಅಶ್ವಿನಿ ಪುನೀತ್ ರಾಜ್ಕುಮಾರ್ ತಂದೆ ನಿಧನ