ETV Bharat / city

ಬಿಜೆಪಿ ಪದಾಧಿಕಾರಿಗಳಿಗೆ ಜಾಲಿ ಟ್ರಿಪ್.. ರೆಸಾರ್ಟ್​​ನಲ್ಲಿ ಕಟೀಲ್ ಅಂಡ್‌ ಟೀಂ ರಿಲ್ಯಾಕ್ಸ್.. - Jolly trip for BJP officials in Karnataka

ಸದ್ಯದಲ್ಲೇ ಬಸವಕಲ್ಯಾಣ, ಮಸ್ಕಿ ವಿಧಾನಸಭೆ, ಬೆಳಗಾವಿ ಲೋಕಸಭಾ ಚುನಾವಣೆ, ಬಿಬಿಎಂಪಿ, ಜಿಪಂ ಮತ್ತು ತಾಪಂ ಚುನಾವಣೆ ಎದುರಾಗಲಿವೆ. ಈ ಎಲ್ಲಾ ಚುನಾವಣೆಗೆ ಸಿದ್ದತೆ ಆರಂಭಿಸುವ ಮೊದಲು ಒಂದು ಸಣ್ಣ ವಿಶ್ರಾಂತಿಗಾಗಿ ಟ್ರಿಪ್​​ ಆಯೋಜಿಸಲಾಗಿದೆ..

BJP
ಬಿಜೆಪಿ
author img

By

Published : Jan 20, 2021, 8:41 PM IST

ಬೆಂಗಳೂರು : ಸಂಘಟನಾತ್ಮಕ ಚಟುವಟಿಕೆಯಲ್ಲಿ ನಿರಂತರವಾಗಿ ತೊಡಗಿಕೊಂಡಿದ್ದ ರಾಜ್ಯ ಪದಾಧಿಕಾರಿಗಳ ವಿಶ್ರಾಂತಿಗಾಗಿ ಒಂದು ದಿನದ ಜಾಲಿ ಟ್ರಿಪ್‌ನ ಬಿಜೆಪಿ ಆಯೋಜಿಸಿದೆ.

15 ವಿಧಾನಸಭಾ ಕ್ಷೇತ್ರಗಳಿಗೆ ನಡೆದಿದ್ದ ಉಪ ಚುನಾವಣೆ, ಇತ್ತೀಚೆಗೆ ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆದಿದ್ದ ಉಪ ಚುನಾವಣೆ, ಗ್ರಾಮ ಪಂಚಾಯತ್ ಚುನಾವಣೆ ಎಂದು ಅವಿತರವಾಗಿ ಸಂಘಟನಾತ್ಮಕ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದ ರಾಜ್ಯ ಘಟಕದ ಪದಾಧಿಕಾರಿಗಳು ಇಂದು ಪ್ರವಾಸ ಕೈಗೊಂಡಿದ್ದಾರೆ.

ಇದನ್ನೂ ಓದಿ...ಕೇಂದ್ರದ ವಿರುದ್ಧ ರಾಜ್ಯ ಕಾಂಗ್ರೆಸ್‌ ನಾಯಕರ ಸಾಂಘಿಕ ಶಕ್ತಿ.. 'ಕೈ'ಗೊಂದಿಷ್ಟು ಕಸುವು, ಹೊಸ ಹುರುಪು..

ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಚಂದಾಪುರ ಸಮೀಪದ ರೆಸಾರ್ಟ್‌ವೊಂದರಲ್ಲಿ ಜಾಲಿ ಟ್ರಿಪ್ ಕೈಗೊಂಡಿರುವ ರಾಜ್ಯ ಪದಾಧಿಕಾರಿಗಳು ವಿಶ್ರಾಂತಿ ಪಡೆಯುತ್ತಿದ್ದಾರೆ. ಸಂಘಟನಾತ್ಮಕ ಚಟುವಟಿಕೆ ಹೊರತುಪಡಿಸಿ ಒಂದು ದಿನದ ವಿಶ್ರಾಂತಿ ಪಡೆಯುವಂತೆ ರಾಜ್ಯ ಘಟಕಕ್ಕೆ ಹೈಕಮಾಂಡ್ ನಿರ್ದೇಶಿಸಿದೆ.

ಸದ್ಯದಲ್ಲೇ ಬಸವಕಲ್ಯಾಣ, ಮಸ್ಕಿ ವಿಧಾನಸಭೆ, ಬೆಳಗಾವಿ ಲೋಕಸಭಾ ಚುನಾವಣೆ, ಬಿಬಿಎಂಪಿ, ಜಿಪಂ ಮತ್ತು ತಾಪಂ ಚುನಾವಣೆ ಎದುರಾಗಲಿವೆ. ಈ ಎಲ್ಲಾ ಚುನಾವಣೆಗೆ ಸಿದ್ದತೆ ಆರಂಭಿಸುವ ಮೊದಲು ಒಂದು ಸಣ್ಣ ವಿಶ್ರಾಂತಿಗಾಗಿ ಟ್ರಿಪ್​​ ಆಯೋಜಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.