ETV Bharat / city

ಮಿಲಿಟರಿ ವೇಷ ಧರಿಸಿ ಗೂಢಚಾರಿಕೆ ಕೇಸ್​​: ಸೇನೆಗೆ ಸೇರಲು ವಿಫಲ ಯತ್ನ ನಡೆಸಿದ್ದ ಬಟ್ಟೆ ವ್ಯಾಪಾರಿ!

ಜಿತೇಂದರ್ ಮಿಲಿಟರಿ ಸಮವಸ್ತ್ರ ಧರಿಸಿ ಆಗಾಗ ಫೇಸ್‌ಬುಕ್‌ನಲ್ಲಿ ಫೋಟೋ ಅಪ್‌ಲೋಡ್ ಮಾಡುತ್ತಿರುವುದನ್ನು ಗಮನಿಸಿದ್ದ ಐಎಸ್‌ಐ ಏಜೆಂಟ್‌ಗಳು ಈತ ನಿಜವಾಗಿಯೂ ಸೇನಾ ಅಧಿಕಾರಿಯಾಗಿರಬಹುದು ಎಂದು ಭಾವಿಸಿದ್ದರು.

isi-agent-arrest-case-ccb-handover-the-case-to-atc
ಮಿಲಿಟರಿ ವೇಷ ಧರಿಸಿ ಐಎಸ್ಐ ಗೂಢಚಾರಿ ಆರೋಪ: ಸೇನೆಗೆ ಸೇರಲು ವಿಫಲ ಯತ್ನ ನಡೆಸಿದ್ದ ಬಟ್ಟೆ ವ್ಯಾಪಾರಿ
author img

By

Published : Sep 23, 2021, 2:45 AM IST

Updated : Sep 23, 2021, 2:59 AM IST

ಬೆಂಗಳೂರು: ಮಿಲಿಟರಿ ಸಮವಸ್ತ್ರ ಧರಿಸಿ ದೇಶದ ಪ್ರಮುಖ ಸೇನಾ ಪ್ರದೇಶಗಳ ಪೋಟೊಗಳನ್ನು ಪಾಕಿಸ್ತಾನದ ಐಎಸ್‌ಐಗೆ ರವಾನಿಸಿ ಗೂಢಾಚಾರಿಕೆ ಮಾಡುತ್ತಿದ್ದ ಪ್ರಕರಣ ಸಂಬಂಧ ಸಿಸಿಬಿಯಿಂದ ಭಯೋತ್ಪಾದನ ನಿಗ್ರಹ ದಳ (ಎಟಿಸಿ) ವರ್ಗಾವಣೆಯಾಗಿದೆ.

ಕಳೆದ ಮೂರು ದಿನಗಳ ಹಿಂದೆ ರಾಜಸ್ತಾನ‌ ಮೂಲದ ಬಟ್ಟೆ ವ್ಯಾಪಾರಿ ಜೀತೆಂದರ್​​​ನನ್ನು ಕಾಟನ್ ಪೇಟೆ ಬಳಿ ಸಿಸಿಬಿ ಪೊಲೀಸರು ಬಂಧಿಸಿ ,12 ದಿನಗಳ ಕಾಲ ಪೊಲೀಸ್ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದರು. ಇದೀಗ ಪ್ರಕರಣ ಹಸ್ತಾಂತರವಾದ ಹಿನ್ನೆಲೆ, ಎಟಿಸಿ ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ.

ಬಟ್ಟೆ ವ್ಯಾಪಾರಿ ಸೇನೆಗೆ ಸೇರಲು ವಿಫಲ ಯತ್ನ ನಡೆಸಿದ್ದ ಎಂಬ ಸಂಗತಿ ತನಿಖೆಯಲ್ಲಿ ಗೊತ್ತಾಗಿದೆ. ಜೀತೇಂದರ್ ಸಿಂಗ್ ಪಾಕಿಸ್ತಾನದ ಐಎಸ್‌ಐಗೆ ಗೂಢಚಾರಿ ನಡೆಸುತ್ತಿದ್ದ ಸಂಗತಿ ತನಿಖೆಯಲ್ಲಿ ದೃಢಪಟ್ಟಿದೆ.

ಜಿತೇಂದರ್ ದೂರದ ಸಂಬಂಧಿಯೊಬ್ಬರು ಸೇನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ಕಂಡು ಈತನೂ ಮಿಲಿಟರಿಗೆ ಸೇರುವ ಆಕಾಂಕ್ಷೆ ಹೊಂದಿದ್ದ. ಜವಾನ ಹುದ್ದೆಗೂ ಅರ್ಜಿ ಹಾಕಿದ್ದ. ಆದರೆ, ಪರೀಕ್ಷೆಯಲ್ಲಿ ಅನುತೀರ್ಣನಾಗಿದ್ದ. ಮಿಲಿಟರಿಯಲ್ಲಿ ಸೈನಿಕನಾಗಲು ಕನಿಷ್ಠ 10ನೇ ತರಗತಿ ವ್ಯಾಸಂಗ ಮಾಡಿರಬೇಕು. ಆದರೆ, ಜಿತೇಂದರ್ ಓದಿದ್ದು ಕೇವಲ 6ನೇ ತರಗತಿ ಮಾತ್ರ. ಹೀಗಾಗಿ ಸೇನೆಯಲ್ಲಿ ಖಾಲಿಯಿದ್ದ ಸಣ್ಣ-ಪುಟ್ಟ ಹುದ್ದೆಗಳಾದ ಬಾಣಸಿಗ, ದೋಬಿ ಹುದ್ದೆಗಳನ್ನು ಗಿಟ್ಟಿಸಿಕೊಳ್ಳಲು ವಿಫಲ ಯತ್ನ ನಡೆಸಿದ್ದನು.

ಇಂತಹ ಹುದ್ದೆಗಳಿಗೆ ಯಾವುದೇ ರೀತಿಯ ಶಿಕ್ಷಣ ಬೇಕಾಗಿರಲಿಲ್ಲ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವೇಳೆ ಮಿಲಿಟರಿ ನೆಲೆಯ ಒಳಗಡೆ ಹೋಗುತ್ತಿದ್ದ. ಆಗ ಅಲ್ಲಿನ ಸೇನಾನೆಲೆಗಳ ಬಂಕರ್, ಮಿಲಿಟರಿ ವಾಹನಗಳು ಹಾಗೂ ಸುತ್ತಮುತ್ತಲಿರುವ ಪ್ರದೇಶಗಳನ್ನು ಯಾರಿಗೂ ತಿಳಿಯದಂತೆ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದ. ಅದೇ ಪೋಟೊಗಳನ್ನು ಐಎಸ್‌ಐ ಏಜೆಂಟ್‌ಗಳಿಗೆ ಕಳುಹಿಸುತ್ತಿದ್ದ.

ಐಎಸ್​ಐ ಕೂಡಾ ನಂಬಿತ್ತು..!

ವೃತ್ತಿಯಲ್ಲಿ ಬಟ್ಟೆ ವ್ಯಾಪಾರಿಯಾಗಿದ್ದ ಜೀತೆಂದರ್ ಸಿಂಗ್‌ಗೆ ಮೂರು ತಿಂಗಳ ಹಿಂದೆಯಷ್ಟೇ ಐಎಸ್‌ಐ ಏಜೆಂಟ್‌ಗಳು ಯುವತಿಯ ಸೋಗಿನಲ್ಲಿ ಗಾಳ ಹಾಕಿದ್ದರು. ಜಿತೇಂದರ್ ಮಿಲಿಟರಿ ಸಮವಸ್ತ್ರ ಧರಿಸಿ ಆಗಾಗ ಫೇಸ್‌ಬುಕ್‌ನಲ್ಲಿ ಫೋಟೋ ಅಪ್‌ಲೋಡ್ ಮಾಡುತ್ತಿರುವುದನ್ನು ಗಮನಿಸಿದ್ದ ಐಎಸ್‌ಐ ಏಜೆಂಟ್‌ಗಳು ಈತ ನಿಜವಾಗಿಯೂ ಸೇನಾ ಅಧಿಕಾರಿಯಾಗಿರಬಹುದು ಎಂದು ಭಾವಿಸಿದ್ದರು.

ಭಾರತೀಯ ಸೇನಾ ನೆಲೆಗಳು, ಶಸ್ತ್ರಾಸಗಳ ಬಗ್ಗೆ ಮಾಹಿತಿ ಕಲೆ ಹಾಕುವ ಉದ್ದೇಶದಿಂದ ಮೂರು ತಿಂಗಳ ಹಿಂದೆ ಫೇಸ್‌ಬುಕ್‌ನಲ್ಲಿ ಜಿತೇಂದರ್‌ಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದರು. ಇತ್ತ ತಾನು ಮಿಟಲಿಟರಿಯಲ್ಲಿ ಕೆಲಸ ಮಾಡುತ್ತಿಲ್ಲ ಎಂಬುದು ಗೊತ್ತಾದರೆ ಎಲ್ಲಿ ಯುವತಿ ತನ್ನ ಬಳಿ ಮಾತನಾಡುವುದನ್ನು ನಿಲ್ಲಿಸುತ್ತಾಳೋ ಎಂದುಕೊಂಡು ಜಿತೇಂದರ್ ಸಹ ತನ್ನ ಹಿನ್ನೆಲೆಯನ್ನು ಯುವತಿಯ ಸೋಗಿನಲ್ಲಿದ್ದವರಿಗೆ ಬಿಟ್ಟುಕೊಟ್ಟಿರಲಿಲ್ಲ.

ಯುವತಿಯ ಸೋಗಿನಲ್ಲಿ ಐಎಸ್‌ಐ ಏಜೆಂಟ್‌ಗಳು ‘ತಾನು ಶಿಮ್ಲಾ ಮೂಲದವಳಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಗಂಡನಿಂದ ದೂರವಾಗಿದ್ದೇನೆ. ನನಗೆ ಭಾರತ ಕಂಡರೆ ಇಷ್ಟ. ಅದರಲ್ಲೂ ಸೈನಿಕರ ಬಗ್ಗೆ ಅಪಾರ ಗೌರವವಿದೆ ಎಂದು ಹೇಳಿದ್ದರು. ಆರಂಭದಲ್ಲಿ ಚಾಟಿಂಗ್ ಮಾಡುತ್ತಿದ್ದ ಐಎಸ್‌ಐ ಏಜೆಂಟ್‌ಗಳು ನಂತರ ಯುವತಿಯ ಸೋಗಿನಲ್ಲೇ ಜಿತೇಂದರ್‌ಗೆ ಕರೆ ಮಾಡಿ ಸೇನೆಯ ಬಗ್ಗೆ ಮಾಹಿತಿ ಕಲೆ ಹಾಕಲು ಯತ್ನಿಸಿದ್ದರು.

ಯುವತಿಯ ಮೋಹಕ್ಕೆ ಸಿಲುಕಿದ ಆರೋಪಿ ಸೇನಾ ನೆಲೆಗಳ ಪೋಟೊಗಳನ್ನು ಕಳುಹಿಸುತ್ತಿದ್ದ. ಜಿತೇಂದರ್ ಮೊಬೈಲ್ ರಿಟ್ರೀವ್ ಮಾಡಿದಾಗ ಐಎಸ್‌ಐ ಜತೆಗೆ ಈತ ಯಾವೆಲ್ಲಾ ಮಾಹಿತಿ ಹಂಚಿಕೊಂಡಿದ್ದಾನೆ ಎಂಬುದು ತಿಳಿದು ಬಂದಿದೆ. ಸೆ.5ರ ಮೊದಲು ಐಎಸ್‌ಐ ಜತೆಗೆ ಚಾಟ್ ಮಾಡಿರುವುದು ಹಾಗೂ ಮೆಸೇಜ್ ಕಳುಹಿಸಿರುವ ವಿವರಗಳನ್ನು ಜಿತೇಂದರ್ ಮೊಬೈಲ್‌ನಿಂದ ಡಿಲಿಟ್ ಮಾಡಿದ್ದ ಎನ್ನಲಾಗಿದೆ.

ಇದನ್ನೂ ಓದಿ: ಐಎಸ್​ಐಗೆ ಸೇನೆ ಮಾಹಿತಿ ಸೋರಿಕೆ ಪ್ರಕರಣ: ಆರೋಪಿ ಮೊಬೈಲ್ ಎಫ್​ಎಸ್​​ಎಲ್​ಗೆ ರವಾನೆ

Last Updated : Sep 23, 2021, 2:59 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.