ಬೆಂಗಳೂರು: ನಗರದಲ್ಲಿ ಎದ್ದಿರುವ ಉದ್ವಿಗ್ನ ಸನ್ನಿವೇಶಕ್ಕೆ ಗುಪ್ತಚರ ಇಲಾಖೆಯ ವೈಫಲ್ಯವೇ ಕಾರಣವಾಯ್ತಾ ಎಂಬ ಪ್ರಶ್ನೆ ಎದ್ದಿದೆ.
ಶಾಸಕ ಅಖಂಡ ಶ್ರೀನಿವಾಸಮೂರ್ತಿ ಸಂಬಂಧಿಯೊಬ್ಬರು ಫೇಸ್ಬುಕ್ನಲ್ಲಿ ಧರ್ಮವೊಂದರ ಕುರಿತು ಅವಹೇಳನಕಾರಿ ಪೋಸ್ಟ್ ಹಾಕಿದ್ದ ಕಾರಣ ನಗರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಸದ್ಯ ಗುಪ್ತಚರ ಇಲಾಖೆ ವೈಫಲ್ಯ ಇಷ್ಟು ಗಲಾಟೆಗೆ ಕಾರಣವಾಯ್ತಾ ಅನ್ನೋ ಪ್ರಶ್ನೆ ಎದ್ದಿದೆ.
ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಅಲರ್ಟ್ ಆಗಿರಬೇಕಾದ ಪೊಲೀಸರು, ಶಾಸಕರ ಸಂಬಂಧಿಕ ಉದ್ರೇಕಗೊಳಿಸುವಂತಹ ಪೋಸ್ಟ್ ಹಾಕಿದ್ದನ್ನು ಸೈಬರ್ ಕ್ರೈಂ ಪೊಲೀಸರಾಗಲಿ ಅಥವಾ ಗುಪ್ತಚರ ಇಲಾಖೆಯಾಗಲಿ ಗಮನಿಸಿಲ್ಲ. ಶಾಸಕರ ಮನೆ ಮುಂದೆ ಗಲಾಟೆ ಮಾಡುವಾಗಲೇ ಗುಂಪನ್ನು ಚದುರಿಸಿ ಗಲಾಟೆ ನಿಯಂತ್ರಣಕ್ಕೆ ತರಬಹುದಿತ್ತು. ಆದರೆ, ಸದ್ಯ ಗಲಾಟೆ ವಿಕೋಪಕ್ಕೆ ತೆರಳಿದ ನಂತರ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಹೀಗಾಗಿ ಗುಪ್ತಚರ ಇಲಾಖೆಯ ಮಾಹಿತಿ ನೀಡುವಲ್ಲಿ ವಿಫಲವಾಯ್ತಾ ಅನ್ನೋ ಪ್ರಶ್ನೆ ಕೂಡ ಎದ್ದಿದೆ.
ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ವೇಳೆ ಪಾದರಾಯನಪುರ ಬಳಿ ಕೂಡ ಇದೇ ರೀತಿಯಾದ ವಾತಾವರಣ ನಿರ್ಮಾಣಾವಾಗಿತ್ತು. ಸದ್ಯ ಪೂರ್ವ ವಿಭಾಗ ವ್ಯಾಪ್ತಿಯಲ್ಲಿ ಕೂಡ, ಪಾದರಾಯನಪುರಕ್ಕಿಂತ ದೊಡ್ಡ ಮಟ್ಟದಲ್ಲಿ ಗಲಾಟೆ ನಡೆಯುತ್ತಿದ್ದು, ಕಾನೂನು ಸುವ್ಯವಸ್ಥೆಯತ್ತ ಎಲ್ಲರೂ ಕೈ ತೋರಿಸುವಂತಾಗಿದೆ.