ಬೆಂಗಳೂರು: ನಟ ಪುನೀತ್ ರಾಜ್‌ಕುಮಾರ್ ಅವರ ಸಾವಿನ ತನಿಖೆಗೆ ಆಗ್ರಹಿಸಿ ಸದಾಶಿವನಗರ ಪೊಲೀಸ್ ಠಾಣೆಗೆ ನೀಡಿರುವ ಎರಡು ದೂರುಗಳ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪುನೀತ್ ಅಕಾಲಿಕ ಸಾವಿನ ವಿವರ, ಆಸ್ಪತ್ರೆಯ ಸಿಸಿಟಿವಿ ದೃಶ್ಯಾವಳಿಗಳನ್ನು ನೀಡಬೇಕು ಎಂದು ಕುರುಬರಹಳ್ಳಿಯ ಅರುಣ್ ಪರಮೇಶ್ವರ್ ಎನ್ನುವವರು ಸದಾಶಿವನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಡಾ.ರಮಣ್ ರಾವ್ ತಮ್ಮ ಕ್ಲಿನಿಕ್‌ನಲ್ಲಿ ಪುನೀತ್ ಅವರಿಗೆ ಯಾವ ರೀತಿ ಆರೋಗ್ಯ ತಪಾಸಣೆ ನಡೆಸಿದರು. ವಿಕ್ರಂ ಆಸತ್ರೆಗೆ ಹೋಗಲು ಏಕೆ ತಡವಾಯಿತು?. ಈ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಇದಕ್ಕೆ ವಿವರಣೆ ಬೇಕಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.
ಪುನೀತ್ ರಾಜ್‌ಕುಮಾರ್ ಸಾವಿನ ಕುರಿತು ಅನುಮಾನವಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಡಾ.ರಾಜ್‌ಕುಮಾರ್ ಸೇನೆಯ ಅಧ್ಯಕ್ಷ ವಿ.ತ್ಯಾಗರಾಜ್ ಎಂಬುವವರು ಸದಾಶಿವನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: ವೈದ್ಯರ ವಿರುದ್ಧ ಅಪ್ಪು ಅಭಿಮಾನಿಯಿಂದ ಪೊಲೀಸರಿಗೆ ಕಂಪ್ಲೇಂಟ್; ದೂರಿನಲ್ಲಿ ಏನಿದೆ?