ETV Bharat / city

ಯೋಗ ಶಾರೀರಿಕ ವ್ಯಾಯಾಮವಷ್ಟೇ‌ ಅಲ್ಲ, ಅದು ಜೀವನ ಪದ್ಧತಿ: ಮಾಜಿ ಸಚಿವ ಸುರೇಶ್ ಕುಮಾರ್

author img

By

Published : Jun 21, 2022, 7:35 PM IST

ಇಪ್ಪತ್ತರ ಹರೆಯದಲ್ಲಿದ್ದಾಗ ತಾವು ತುರ್ತು ಪರಿಸ್ಥಿತಿಯ ಜೈಲುವಾಸದ‌ ಸಂದರ್ಭದಲ್ಲಿ ಯೋಗಾಭ್ಯಾಸವನ್ನು ರೂಢಿಸಿಕೊಂಡ ವಿಷಯವನ್ನು ಸ್ಮರಿಸಿದ ಮಾಜಿ ಸಚಿವ ಸುರೇಶ್​ ಕುಮಾರ್, ಆ ಜೀವನಕ್ರಮವು ಇಂದಿಗೂ ತಮ್ಮ ಚೈತನ್ಯದ ಮೂಲವಾಗಿದೆ ಎಂದಿದ್ದಾರೆ.

Suresh Kumar
ಸುರೇಶ್ ಕುಮಾರ್

ಬೆಂಗಳೂರು: ಮನುಷ್ಯನ ಮನಸ್ಸು ದೇಹಗಳು ಸಮನ್ವಯದಿಂದ‌ ಕಾರ್ಯ ನಿರ್ವಹಿಸಲು ಯೋಗದ ಮಹತ್ವ ದೊಡ್ಡದು. ಯೋಗಾಭ್ಯಾಸ ಜೀವನ ಕ್ರಮ. ಲೋಕಕಲ್ಯಾಣಕ್ಕೆ ಅವಶ್ಯಕವಾದ ಉಪಕರಣ. ಭಾರತ ಈ ಮಹತ್ತರ ಉಪಕರಣವನ್ನು ಲೋಕಕ್ಕೆ ಕೊಡುಗೆ ನೀಡುವ ಮೂಲಕ ತನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದೆ‌ ಎಂದು ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ಅಭಿಪ್ರಾಯಪಟ್ಟರು.

ಅಂತಾರಾಷ್ಟ್ರೀಯ ಯೋಗದಿನದ‌ ಅಂಗವಾಗಿ ರಾಜಾಜಿನಗರದ ಭಾಷ್ಯಂ ವೃತ್ತದಲ್ಲಿ ಆಯೋಜಿಸಲಾಗಿದ್ದ ಬೃಹತ್ ಯೋಗ ಪ್ರದರ್ಶನದ ಸಂದರ್ಭದಲ್ಲಿ ಮಾತನಾಡಿದ ಅವರು, ಇಂದು 192 ದೇಶಗಳು ಯೋಗದಿನವನ್ನು ಆಚರಿಸುತ್ತಿರುವುದು ಭಾರತದ ಪಾಲಿಗೆ ಹೆಮ್ಮೆಯಾಗಿದೆ‌. ಇಂದು ನಮ್ಮ ಯೋಧರು ಸಿಯಾಚಿನ್ ನಂತಹ ಅತಿಶೀತ ಪ್ರದೇಶದಲ್ಲಿಯೂ ಯೋಗದಿನವನ್ನು ಆಚರಿಸುವ ಮೂಲಕ ನಮ್ಮ ದೇಶದ ಹಿರಿಮೆಯನ್ನು ಎತ್ತಿ ಹಿಡಿದಿದ್ದಾರೆಂದರು.

international yoga day celebration from ex minister Suresh Kumar
ರಾಜಾಜಿನಗರದ ಭಾಷ್ಯಂ ವೃತ್ತದಲ್ಲಿ ಅಂತಾರಾಷ್ಟ್ರೀಯ ಯೋಗದಿನ ಆಚರಣೆ

ತುರ್ತುಪರಿಸ್ಥಿತಿಯ ಜೈಲುವಾಸದ‌ ಸಂದರ್ಭದಲ್ಲಿ ಯೋಗಾಭ್ಯಾಸ: ಇಪ್ಪತ್ತರ ಹರೆಯವಿದ್ದಾಗ ತಾವು ತುರ್ತುಪರಿಸ್ಥಿತಿಯ ಜೈಲುವಾಸದ‌ ಸಂದರ್ಭದಲ್ಲಿ ಯೋಗಾಭ್ಯಾಸವನ್ನು ರೂಢಿಸಿಕೊಂಡ ವಿಷಯವನ್ನು ಸ್ಮರಿಸಿ. ಆ ಜೀವನಕ್ರಮವು ಇಂದಿಗೂ ತಮ್ಮ ಚೈತನ್ಯದ ಮೂಲವಾಗಿದೆ ಎಂದು ತಿಳಿಸಿದರು.

ಒಂದು ಸಾವಿರ ಜನರಿಂದ ಯೋಗ ಪ್ರದರ್ಶನ: ಭಾಷ್ಯಂ ವೃತ್ತದಲ್ಲಿ ರಾಜಾಜಿನಗರ‌ ನಿವಾಸಿಗಳು, ವಿವಿಧ‌ ಇಲಾಖೆ‌ಗಳ ಅಧಿಕಾರಿಗಳು, ಸಿಬ್ಬಂದಿ, ಸಾರ್ವಜನಿಕರೂ ಸೇರಿದಂತೆ ಒಂದು ಸಾವಿರಕ್ಕೂ ಹೆಚ್ಚು ಜನ‌ ಯೋಗ ಪ್ರದರ್ಶನ‌ ಮಾಡಿದರು.

ಇದನ್ನೂ ಓದಿ: ಐತಿಹಾಸಿಕ ಸ್ಮಾರಕ ಗೋಲಗುಮ್ಮಟ ಆವರಣದಲ್ಲಿ ಯೋಗ ದಿನಾಚರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.