ETV Bharat / city

ಆರ್‌ ಎಲ್ ಜಾಲಪ್ಪ ಅವರು ಹೆಗಡೆ ಬಳಿಕ ಸಿಎಂ ಆಗ್ಬೇಕಿತ್ತು.. ರಾಜಕೀಯ ಮಹತ್ವಾಕಾಂಕ್ಷೆಗೆ ಆ ಪ್ರಕರಣ ಅಡ್ಡಿಯಾಯ್ತು.. - ಮಾಜಿ ಕೇಂದ್ರ ಸಚಿವ ಆರ್.ಎಲ್. ಜಾಲಪ್ಪ ನಿಧನ

ಜಾಲಪ್ಪನವರ ರಾಜಕೀಯ ಜೀವನದಲ್ಲಿ ಅಷ್ಟಾಗಿ ಏರುಪೇರು ಆಗದಿದ್ದರೂ 1986-87ರಲ್ಲಿ ಗೃಹ ಸಚಿವರಾಗಿದ್ದ ಅವಧಿಯಲ್ಲಿಯೇ ದೇವರಾಜ ಅರಸು‌ ವೈದ್ಯಕೀಯ ಕಾಲೇಜಿಗೆ ಸಂಬಂಧಿಸಿದ ಒಂದು ಘಟನೆ ನಡೆಯದೇ ಇದ್ದಿದ್ದರೆ ರಾಮಕೃಷ್ಣ ಹೆಗಡೆ ನಂತರ ಕರ್ನಾಟಕದ‌ ಮುಖ್ಯಮಂತ್ರಿಯಾಗುವ‌ ಎಲ್ಲಾ ಅವಕಾಶ ಅವರಿಗಿತ್ತು. ಆ ಘಟನೆ ಅವರ ರಾಜಕೀಯ ಬದುಕಿನ ಒಂದು ಕಪ್ಪುಚುಕ್ಕೆಯಾಗಿ ಅವರ ರಾಜಕೀಯ ಭವಿಷ್ಯವನ್ನು ಮಸುಕು ಮಾಡಿತು..

political career of RL Jalappa
ರಾಜಕಾರಣದಲ್ಲಿ ಜಾಲಪ್ಪರ ರೋಚಕ ಹೆಜ್ಜೆ
author img

By

Published : Dec 18, 2021, 3:45 PM IST

ಬೆಂಗಳೂರು : ನೇರ, ನಿಷ್ಠುರ ರಾಜಕಾರಣಿಯಾಗಿದ್ದ ಕಾಂಗ್ರೆಸ್​​ನ ಹಿರಿಯ ರಾಜಕಾರಣಿ ಆರ್.ಎಲ್. ಜಾಲಪ್ಪನವರು ಜನತಾ ಪರಿವಾರದ ಕೊಂಡಿಯಾಗಿದ್ದರು. ಅವರ ರಾಜಕೀಯ ಇತಿಹಾಸವೇ ಒಂದು ರೀತಿಯ ರೋಚಕವಾಗಿತ್ತು.

ಜಾಲಪ್ಪ ಅವರ ತಂದೆ ಮೂಲತಃ ರಾಜಾನುಕುಂಟೆಯವರು. ಆಗಲೇ ರಾಜಾನುಕುಂಟೆ ತೊರೆದು ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಗ್ರಾಮಕ್ಕೆ ವಲಸೆ ಬಂದರು.

ಪ್ರಾಥಮಿಕ ವಿದ್ಯಾಭ್ಯಾಸವನ್ನು ರಾಜಾನುಕುಂಟೆಯಲ್ಲಿ ಮುಗಿಸಿದ್ದ ಜಾಲಪ್ಪ, ಬಿಎ ಪದವಿಯನ್ನು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಮುಗಿಸಿದರು. ಕಾಲೇಜ್​​ನಲ್ಲಿ ಓದುತ್ತಿರುವಾಗಲೇ ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್.ಎಂ. ಕೃಷ್ಣ ಅವರ ಒಡನಾಡಿಯಾಗಿದ್ದರು.

Interesting political career of RL Jalappa
ರಾಮಕೃಷ್ಣ ಹೆಗಡೆ ಸಂಪುಟದಲ್ಲಿ ಸಚಿವರಾಗಿದ್ದ ಜಾಲಪ್ಪ

ಎಡಪಂಥೀಯ ವಿಚಾರಧಾರೆಗಳನ್ನು ಹೊಂದಿದ್ದ ಜಾಲಪ್ಪನವರು ಯುವಕರಾಗಿದ್ದಾಗಲೇ ಕಮ್ಯೂನಿಸ್ಟ್‌ ಪಕ್ಷದ ಸದಸ್ಯರಾಗಿದ್ದರು. ರೈತಪರ ಹೋರಾಟದಲ್ಲಿ ತೊಡಗಿದ್ದರು. 1958ರಲ್ಲಿ ನಡೆದ ತಾಲೂಕು ಬೋರ್ಡ್ ಚುನಾವಣೆಯಲ್ಲಿ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿಯಾಗಿ ತೂಬಗೆರೆಯಿಂದ ಸ್ಪರ್ಧಿಸಿ ಸೋತರು.

ಆ ನಂತರ 1962ರ ಸಾರ್ವತ್ರಿಕ ಚುನಾವಣೆ ವೇಳೆಗೆ ಅವರು ಪ್ರಬಲ ರಾಜಕಾರಣಿಯಾಗಿದ್ದ ಜಿ. ರಾಮೇಗೌಡರ ಅನುಯಾಯಿಯಾಗಿ ಕಾಂಗ್ರೆಸ್ ಸೇರ್ಪಡೆಯಾದರು.

ನಂತರ ದೊಡ್ಡಬಳ್ಳಾಪುರ ತಾಲೂಕು ಬೋರ್ಡ್ ಅಧ್ಯಕ್ಷರಾಗಿ, ರಾಜ್ಯ ಭೂ ಅಭಿವೃದ್ಧಿ ಬ್ಯಾಂಕ್‌, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಅಧ್ಯಕ್ಷರಾಗಿಯೂ ಕೆಲಸ ಮಾಡಿದ ಜಾಲಪ್ಪನವರು ಹಂತ ಹಂತವಾಗಿ ರಾಜಕೀಯದ ಮೆಟ್ಟಿಲು ಏರುತ್ತಾ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾದರು. ಅಲ್ಲಿಂದೀಚೆಗೆ ಅವರು ರಾಜಕಾರಣದಲ್ಲಿ ಹಿಂದಿರುಗಿ ನೋಡಲೇ ಇಲ್ಲ.

ಡಾ.ರಾಜ್​ಕುಮಾರ್​ ಜೊತೆ ಜಾಲಪ್ಪ

ಇದನ್ನೂ ಓದಿ: ಮುತ್ಸದ್ದಿ ರಾಜಕಾರಣಿ ಆರ್​.ಎಲ್.ಜಾಲಪ್ಪ ನಡೆದು ಬಂದ ಹಾದಿ..

ಪ್ರಸ್ತುತ ರಾಜಕಾರಣ ಜಾತಿ, ಹಣ ಮತ್ತು ತೋಳ್ಬಲದ ಮೇಲೆ ನಿಂತಿದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಆದರೆ, ಆಗಿನ ಕಾಲಕ್ಕೆ ಅದ್ಯಾವುದೇ ಬೆಂಬಲ ಇಲ್ಲದೆ ಸಾಧನೆ ಮಾಡಿದ್ದು ಜಾಲಪ್ಪನವರ ಸಂಘಟನಾ ಚತುರತೆಗೆ ಸಾಕ್ಷಿಯಾಗಿದೆ.

ಇನ್ನು, ಅವರ ಜಾತಿಯ (ಈಡಿಗ) ಮತಗಳು ಸಹ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಡಿಮೆ ಇದ್ದವು. ಆದರೆ, ಜಾಲಪ್ಪ ಅವರ ಜನಪರ ಕಾಳಜಿ, ಸಹಕಾರ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಯೇ ಅವರ ರಾಜಕೀಯ ಕ್ಷೇತ್ರದಲ್ಲಿನ ಯಶಸ್ಸಿಗೆ ಭದ್ರ ಬುನಾದಿಯಾಯಿತು ಎಂದೇ ಹೇಳಬಹುದು.

ಜಾಲಪ್ಪನವರ ರಾಜಕೀಯ ಜೀವನ ಹೇಗಿತ್ತು?

ಅಂದಿನ ಕಾಲಕ್ಕೆ ರಾಜ್ಯದಲ್ಲಿ ಲಿಕ್ಕರ್ ಲಾಬಿ ರಾಜಕಾರಣವನ್ನು‌ ನಿಯಂತ್ರಿಸುವಷ್ಟು ಶಕ್ತಿ ಹೊಂದಿತ್ತು. ಆ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ನಾಯಕರೂ ಆಗಿದ್ದ ಎಸ್‌. ಬಂಗಾರಪ್ಪ ಮತ್ತು ಎಂ. ವೀರಪ್ಪ ಮೊಯಿಲಿ ಅವರು ಆರ್. ಗುಂಡೂರಾವ್ ಸರ್ಕಾರದಲ್ಲಿ ಸಚಿವರಾಗಿದ್ದರು. ಆ ವೇಳೆಗೆ ಜಾಲಪ್ಪ ಹೆಸರು ಅಷ್ಟಾಗಿ ಮುನ್ನೆಲೆಗೆ ಬಂದಿರಲಿಲ್ಲ. ದೇವರಾಜ ಅರಸು ಅವರು, ಜಾಲಪ್ಪ ಅವರನ್ನು ವಿಧಾನ ಪರಿಷತ್ತಿಗೆ ಆಯ್ಕೆ ಮಾಡಿದರು. ಇದು ಆ ಕಾಲಕ್ಕೆ ಹಲವಾರು ನಾಯಕರ ಹುಬ್ಬೇರಿಸುವಂತೆ ಮಾಡಿತ್ತು.

Interesting political career of RL Jalappa
ರಾಜಕಾರಣದಲ್ಲಿ ಜಾಲಪ್ಪರ ರೋಚಕ ಹೆಜ್ಜೆ

ಜಾಲಪ್ಪ ಪರಿಷತ್ತಿನ ಸದಸ್ಯರಾಗುವ ಪೂರ್ವದಲ್ಲಿ ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಅಧ್ಯಕ್ಷರಾಗಿದ್ದರು. ಬಹಳ ಕಾಲ ಆ ಹುದ್ದೆ ಅಲಂಕರಿಸಿದ್ದ ದೊಡ್ಡಬಳ್ಳಾಪುರದ‌ ಜಿ. ರಾಮೇಗೌಡ ಅವರು 1975ರಲ್ಲಿ ಸಚಿವರಾದಾಗ ಆ ಸ್ಥಾನವನ್ನು ತಮ್ಮ ರಾಜಕೀಯ ಶಿಷ್ಯ ಜಾಲಪ್ಪ ಅವರಿಗೆ ಬಿಟ್ಟುಕೊಟ್ಟರು. ಅಲ್ಲಿಯವರೆಗೆ ‌ದೊಡ್ಡಬಳ್ಳಾಪುರಕ್ಕೆ‌ ಸೀಮಿತವಾಗಿದ್ದ‌ ಜಾಲಪ್ಪ ಅವರ ರಾಜಕೀಯ ಚಟುವಟಿಕೆ ರಾಜ್ಯದ ರಾಜಧಾನಿವರೆಗೂ ವಿಸ್ತಾರಗೊಂಡಿತು.

ದೇವರಾಜ ಅರಸು ಅವರೊಂದಿಗೆ 1980ರಲ್ಲಿ ಜನತಾ ಪಾರ್ಟಿಗೆ ಸೇರ್ಪಡೆಯಾದ ಬಳಿಕ ಜಾಲಪ್ಪನವರು 1989ರಲ್ಲಿ ಜನತಾದಳಕ್ಕೆ ಸೇರಿದ್ದರು. 1983ರ ವೇಳೆಗೆ ಗುಂಡೂರಾವ್ ಸರ್ಕಾರ ಜನಪ್ರಿಯತೆ ಕಳೆದುಕೊಂಡಿತ್ತು. ಅಲ್ಲದೆ ಆ ಸಂದರ್ಭದಲ್ಲಿ ನಡೆದ ಚುನಾವಣೆಯಲ್ಲಿ ಸ್ವತಃ ಗುಂಡೂರಾವ್ ಸೋಲು ಅನುಭವಿಸಿದರು. ಮೊದಲ ಬಾರಿಗೆ ಕರ್ನಾಟಕದಲ್ಲಿ ಕಾಂಗ್ರೆಸೇತರ ಸರ್ಕಾರ ರಾಮಕೃಷ್ಣ ಹೆಗಡೆ ಅವರ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದಿತು.

ವಯಸ್ಸು ಮತ್ತು ಇತರೆ ಕಾರಣದಿಂದ ಜಿ. ರಾಮೇಗೌಡರು‌ ರಾಜಕೀಯ ನಿವೃತ್ತಿ ಹೊಂದಲು‌‌ ಬಯಸಿದ್ದರು. ಆಗಲೇ ಅವರು ಜಾಲಪ್ಪ ಅವರನ್ನು ತಮ್ಮ ಉತ್ತರಾಧಿಕಾರಿ ಎಂದು ಘೋಷಿಸಿದರು. ಇದು ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಜಾಲಪ್ಪ ಪ್ರವೇಶ ಪಡೆಯಲು ನೆರವಾಯಿತು. ಆ ‌ಚುನಾವಣೆಯಲ್ಲಿ ಗೆದ್ದು ರಾಮಕೃಷ್ಣ ಹೆಗಡೆ ಅವರ ಸರ್ಕಾರದಲ್ಲಿ ಸಹಕಾರ ಸಚಿವರಾದರು. ಅಲ್ಲಿಂದ ಪ್ರಾರಂಭವಾದ ಅವರ ರಾಜಕೀಯ ಪಯಣ 2004ರವರೆಗೂ ಮುಂದುವರೆದಿತ್ತು.

ದೇವೇಗೌಡರ ಸಂಪುಟದಲ್ಲಿ ಕಂದಾಯ ಸಚಿವರಾಗಿದ್ದ ಜಾಲಪ್ಪ

ಇದನ್ನೂ ಓದಿ: ಕನ್ನಡ ಉಳಿಸಿ ಬೆಳೆಸಬೇಕಾದರೆ ಮತಾಂತರ ತಡೆಯಬೇಕು: ಡಾ.ಬಿ.ವಿ ವಸಂತಕುಮಾರ

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ 1984ರಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿ ಪರಾಭವಗೊಂಡರು. 1991ರ ಚುನಾವಣೆಯಲ್ಲಿ ಜನತಾ ದಳದಿಂದ ಸ್ಪರ್ಧಿಸಿದ್ದ ಅವರು ಮತ್ತೆ ಸೋಲುಂಡರು. 1996ರಲ್ಲಿ ಪ್ರಧಾನಿಯಾಗಿದ್ದ ಹೆಚ್.ಡಿ. ದೇವೇಗೌಡರ ಸಂಪುಟದಲ್ಲಿ ಕ್ಯಾಬಿನೆಟ್ ಬದಲು ರಾಜ್ಯ ಸಚಿವ ಸ್ಥಾನ ನೀಡಿದ್ದಕ್ಕೆ ಪ್ರತಿಭಟಿಸಿ ಪ್ರಮಾಣ ವಚನ ಸಮಾರಂಭವನ್ನು ಬಹಿಷ್ಕರಿಸಿ ಬೆಂಗಳೂರಿಗೆ ವಾಪಸ್ಸಾಗಿದ್ದರು.

ಆ ನಂತರ ಅವರನ್ನು ಮನವೊಲಿಸಿದ ದೇವೇಗೌಡರು ಅವರಿಗೆ ಕ್ಯಾಬಿನೆಟ್ ದರ್ಜೆಯ ಜವಳಿ ಖಾತೆಯನ್ನೇ ನೀಡಿದ್ದರು. ಅಂದಿನ ಪ್ರಧಾನಿ ಐ.ಕೆ. ಗುಜ್ರಾಲ್ ನೇತೃತ್ವದ ಸರ್ಕಾರದಲ್ಲಿಯೂ ಸಚಿವರಾಗಿ ಮುಂದುವರೆದಿದ್ದರು. 1998ರಲ್ಲಿ ಜನತಾದಳವನ್ನು ತೊರೆದು ಕಾಂಗ್ರೆಸ್ ಸೇರಿದ ಜಾಲಪ್ಪ ಚಿಕ್ಕಬಳ್ಳಾಪುರ ಕ್ಷೇತ್ರದಿಂದಲೇ ಪುನಃ ಆಯ್ಕೆಯಾದರಲ್ಲದೆ, 2004ರವರೆಗೂ ಅವರು ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಒಮ್ಮೆ ಅವರು ಜನತಾ ಪರಿವಾರದ ತಮ್ಮ ಒಡನಾಡಿಯಾಗಿದ್ದ ಸಿ.ಭೈರೇಗೌಡರನ್ನು ಸೋಲಿಸಿದ್ದರು.

ಆ ಒಂದು ಘಟನೆ..

ಜಾಲಪ್ಪನವರ ರಾಜಕೀಯ ಜೀವನದಲ್ಲಿ ಅಷ್ಟಾಗಿ ಏರುಪೇರು ಆಗದಿದ್ದರೂ 1986-87ರಲ್ಲಿ ಗೃಹ ಸಚಿವರಾಗಿದ್ದ ಅವಧಿಯಲ್ಲಿಯೇ ದೇವರಾಜ ಅರಸು‌ ವೈದ್ಯಕೀಯ ಕಾಲೇಜಿಗೆ ಸಂಬಂಧಿಸಿದ ಒಂದು ಘಟನೆ ನಡೆಯದೇ ಇದ್ದಿದ್ದರೆ ರಾಮಕೃಷ್ಣ ಹೆಗಡೆ ನಂತರ ಕರ್ನಾಟಕದ‌ ಮುಖ್ಯಮಂತ್ರಿಯಾಗುವ‌ ಎಲ್ಲಾ ಅವಕಾಶ ಅವರಿಗಿತ್ತು. ಆ ಘಟನೆ ಅವರ ರಾಜಕೀಯ ಬದುಕಿನ ಒಂದು ಕಪ್ಪುಚುಕ್ಕೆಯಾಗಿ ಅವರ ರಾಜಕೀಯ ಭವಿಷ್ಯವನ್ನು ಮಸುಕು ಮಾಡಿತು.

ವಕೀಲ ಎಂ.ಎ. ರಶೀದ್‌ ಕೊಲೆ ಪ್ರಕರಣದಲ್ಲಿ ಜಾಲಪ್ಪರ ಹೆಸರು ತಳುಕು ಹಾಕಿಕೊಂಡಿತ್ತು. ಆಗ ರಾಮಕೃಷ್ಣ ಹೆಗಡೆ ಅವರ ಸಂಪುಟದಲ್ಲಿ ಅವರು ಗೃಹ ಸಚಿವರಾಗಿದ್ದರು. ದೇವರಾಜ ಅರಸು ವೈದ್ಯಕೀಯ ಕಾಲೇಜು ವಿವಾದದ ವಿಚಾರವಾಗಿ ರಶೀದ್‌ ಅವರನ್ನು ಜಾಲಪ್ಪ ಅವರೇ ಕೊಲೆ ಮಾಡಿಸಿದ್ದಾರೆ ಎಂಬ ಆರೋಪ ಕೇಳಿ ಬಂತು. ಆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದ ನಂತರ ಜಾಲಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ನಿರೀಕ್ಷಣಾ ಜಾಮೀನು ಪಡೆದರು. ಸುಮಾರು 14 ವರ್ಷ ಪ್ರಕರಣದ ವಿಚಾರಣೆ ನಡೆದು ನ್ಯಾಯಾಲಯವು ಜಾಲಪ್ಪ ಅವರನ್ನು ನಿರ್ದೋಷಿ ಎಂದು ಘೋಷಿಸಿತ್ತು.

ಜಾಲಪ್ಪನವರ ರಾಜಕೀಯ ಹೆಜ್ಜೆ ಗುರುತು

ರಾಮಕೃಷ್ಣ ಹೆಗಡೆ ಸಂಪುಟದಲ್ಲಿ ಸಹಕಾರ ಸಚಿವರಾಗಿ ರೈತರ ಸುಸ್ತಿ ಸಾಲದ ಬಡ್ಡಿ ಮನ್ನಾ, ಸಹಕಾರ ಸಂಘಗಳಲ್ಲಿ ಮಹಿಳೆಯರು ಮತ್ತು ಪರಿಶಿಷ್ಟ ವರ್ಗದವರಿಗೆ ಮೀಸಲಾತಿ ಕಲ್ಪಿಸಿದರು. ಜಾಲಪ್ಪ ಅವರು 1980ರಿಂದ 1983ರವರೆಗೆ ವಿಧಾನ ಪರಿಷತ್‌ ಸದಸ್ಯರಾಗಿದ್ದರು. 1983, 1985, 1989 ಮತ್ತು 1994ರ ವಿಧಾನಸಭಾ ಚುನಾವಣೆಯಲ್ಲಿ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸತತ ನಾಲ್ಕು ಬಾರಿ ಗೆಲುವು ಸಾಧಿಸಿದ್ದರು. 1983-1984ರವರೆಗೆ ಮತ್ತು 1985-86ರವರೆಗೆ ಸಹಕಾರ, 1986-87ರಲ್ಲಿ ಗೃಹ ಮತ್ತು 1995-96ರಲ್ಲಿ ದೇವೇಗೌಡರ ಸಂಪುಟದಲ್ಲಿ ಕಂದಾಯ ಸಚಿವರಾಗಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.