ಬೆಂಗಳೂರು: ಎರಡು ದಿನಗಳ ಕಾಲ ರಾಜ್ಯ ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿ ಅವರು ಕೊನೆಯ ದಿನವಾದ ಇಂದು ಬೆಂಗಳೂರಿನ ಬೆಂಗಳೂರು ಕೃಷಿ ವಿಶ್ವದ್ಯಾಲಯದಲ್ಲಿ (ಜಿಕೆವಿಕೆ) ನಡೆಯಲಿರುವ 107ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
5 ದಿನಗಳ ಕಾಲ ಜರುಗಲಿರುವ ವಿಜ್ಞಾನ ಕಾಂಗ್ರೆಸ್ ಕಾರ್ಯಕ್ರಮ ಬೆಳಿಗ್ಗೆ 10ಕ್ಕೆ ಆರಂಭವಾಗಲಿದೆ. ದೇಶದ ಬೇರೆ ಬೇರೆ ರಾಜ್ಯಗಳಿಂದ 10,000ಕ್ಕೂ ಹೆಚ್ಚು ಪ್ರತಿನಿಧಿಗಳು, 24 ದೇಶಗಳ 74 ಮಂದಿ ಸಂಪನ್ಮೂಲ ವ್ಯಕ್ತಿಗಳು ಪಾಲ್ಗೊಳ್ಳಲಿದ್ದಾರೆ.
ಕೃಷಿ ಕ್ಷೇತ್ರ ಎದುರಿಸುತ್ತಿರುವ ಸಮಸ್ಯೆ-ಸವಾಲುಗಳು, ಜಾಗತಿಕ ಹವಾಮಾನ ವೈಪರೀತ್ಯ, ವಿಜ್ಞಾನ ಕ್ಷೇತ್ರದಲ್ಲಾಗುತ್ತಿರುವ ಬದಲಾವಣೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಚರ್ಚೆ ನಡೆಯಲಿದೆ.
-
107th Indian Science Congress begins on 3rd January focusing on #rural #development . #ISC2020 @PMOIndia @drharshvardhan @Ashutos61 @IndiaDST @isc2020 @PIB_India https://t.co/DS7gf4LwF8 pic.twitter.com/YM42f0Ic9t
— DSTIndia (@IndiaDST) January 2, 2020 " class="align-text-top noRightClick twitterSection" data="
">107th Indian Science Congress begins on 3rd January focusing on #rural #development . #ISC2020 @PMOIndia @drharshvardhan @Ashutos61 @IndiaDST @isc2020 @PIB_India https://t.co/DS7gf4LwF8 pic.twitter.com/YM42f0Ic9t
— DSTIndia (@IndiaDST) January 2, 2020107th Indian Science Congress begins on 3rd January focusing on #rural #development . #ISC2020 @PMOIndia @drharshvardhan @Ashutos61 @IndiaDST @isc2020 @PIB_India https://t.co/DS7gf4LwF8 pic.twitter.com/YM42f0Ic9t
— DSTIndia (@IndiaDST) January 2, 2020
ನಿನ್ನೆಯಷ್ಟೇ ಪ್ರಧಾನಿ ಮೋದಿ, ತುಮಕೂರಿನಲ್ಲಿ ನಡೆದ ರೈತರ ಸಮಾವೇಶದಲ್ಲಿ ಕಿಸಾನ್ ಸಮ್ಮಾನ್ ಯೋಜನೆಯ 4ನೇ ಕಂತಿನಲ್ಲಿ 8 ಕೋಟಿ ರೈತ ಕುಟುಂಬಗಳ ಖಾತೆಗೆ ₹12 ಸಾವಿರ ಕೋಟಿ ಬಿಡುಗಡೆ ಮಾಡಿದರು. ಇದಕ್ಕೂ ಮುನ್ನ ಅವರು ಸಿದ್ದಗಂಗಾ ಮಠದಲ್ಲಿ ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಸ್ವಾಮೀಜಿ ಗದ್ದುಗೆ ದರ್ಶನ ಪಡೆದುಕೊಂಡರು. ಅಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ಬಂದು ಬೆಂಗಳೂರಿನ ರಾಜಭವನದಲ್ಲಿ ರಾತ್ರಿ ತಂಗಿದ್ದರು.
ಹೆಬ್ಬಾಳದ ಜಿಕೆವಿಕೆಯಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಆಗಮಿಸಲು ಇಂದು ಬೆಳಗ್ಗೆ 9.40ಕ್ಕೆ ರಾಜಭವನದಿಂದ ತೆರಳಲಿದ್ದಾರೆ. ಆ ಸಂದರ್ಭದಲ್ಲಿ ಸಂಚಾರ ವ್ಯವಸ್ಥೆ ನಿರ್ಬಂಧಿಸಲಾಗಿದೆ. ಅಲ್ಲದೆ, ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಬೆಳಿಗ್ಗೆ 10 ರಿಂದ 11 ಗಂಟೆಯವರೆಗೂ ಈ ಕಾರ್ಯಕ್ರಮದಲ್ಲಿ ಪ್ರಧಾನಿ ಪಾಲ್ಗೊಳ್ಳಲಿದ್ದಾರೆ. ಬಳಿಕ ಅಲ್ಲಿಂದ ನಿರ್ಗಮಿಸಿ ಎಚ್ಎಎಲ್ಗೆ ಮರಳಿ, ದೆಹಲಿಗೆ ಪ್ರಯಾಣ ಬೆಳಸಲಿದ್ದಾರೆ.