ದೊಡ್ಡಬಳ್ಳಾಪುರ: ಭಾರತೀಯ ರೈಲ್ವೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರೈಲಿನ ಮೂಲಕ ಬಸ್ಗಳ ಸಾಗಣೆ ಮಾಡಲಾಗಿದೆ. ದೊಡ್ಡಬಳ್ಳಾಪುರದಿಂದ 2,825 ಕಿ.ಮೀ ದೂರದ ಚಂಡೀಗಢಕ್ಕೆ ಗೂಡ್ಸ್ ರೈಲಿನಲ್ಲಿ ಬಸ್ಗಳ ಸಾಗಣೆ ಮಾಡಲಾಗಿದೆ. ಅಶೋಕ್ ಲೇ ಲ್ಯಾಂಡ್ ಉತ್ಪಾದನಾ ಘಟಕ ಹಿಮಾಚಲ ಪ್ರದೇಶ ರಸ್ತೆ ಸಾರಿಗೆ ಸಂಸ್ಥೆಗೆ 300 ಬಸ್ಗಳನ್ನು ತಯಾರಿಸಿ ಕೊಡುವ ಒಂಪ್ಪದ ಮಾಡಿಕೊಂಡಿದೆ. ತಮಿಳುನಾಡಿನ ಹೊಸೂರಿನಲ್ಲಿ ಬಸ್ಗಳ ಚಾರ್ಸಿ ಸಿದ್ದವಾಗಿ ನೆಲಮಂಗಲ ಮಾಕಳಿ ಬಳಿ ಬಸ್ಗಳ ಬಾಡಿಯನ್ನು ತಯಾರು ಮಾಡಲಾಗಿದೆ.
ಸಂಚಾರಕ್ಕೆ ಸಿದ್ದವಾದ ಬಸ್ಗಳನ್ನು ದೂರದ ಹಿಮಾಚಲ ಪ್ರದೇಶಕ್ಕೆ ಕಳಿಸೋದು ದೊಡ್ಡ ಸವಾಲು ಆಗಿತ್ತು. ರಸ್ತೆಯ ಮೂಲಕ ಹೋದರೆ ಸಾಗಣೆ ವೆಚ್ಚವೇ ದುಬಾರಿಯಾಗುತ್ತಿತ್ತು. ಸಾಗಣೆ ವೆಚ್ಚವನ್ನು ಕಡಿಮೆ ಮಾಡಲು ಗೂಡ್ಸ್ ರೈಲಿನಲ್ಲಿ ಬಸ್ಗಳ ಸಾಗಣೆ ಮಾಡುವ ತಿರ್ಮಾನಕ್ಕೆ ಆಶೋಕ ಲೇ ಲ್ಯಾಂಡ್ ಮುಂದಾಗಿದೆ. ರೈಲ್ವೆ ಮೂಲಕ ಬಸ್ ಗಳ ಸಾಗಣೆ ಮಾಡುತ್ತಿರುವುದು ಭಾರತೀಯ ರೈಲ್ವೆಯಲ್ಲಿ ಇದೇ ಮೊದಲು, ಈ ಮೊದಲು ಟ್ರ್ಯಾಕ್ಟರ್ ದ್ವಿಚಕ್ರ ವಾಹನಗಳನ್ನು ಗೂಡ್ಸ್ ರೈಲುಗಳ ಸಾಗಣೆ ಮಾಡಲಾಗುತ್ತಿತ್ತು.
ದೊಡ್ಡಬಳ್ಳಾಪುರದಿಂದ ದೂರದ ಚಂಡೀಗಢಕ್ಕೆ ಸಾಗಣೆ ಮಾಡಲಾಗಿದೆ ಮೇ 15 ರಂದು 32 ಸಂಚಾರಿ ಬಸ್ಗಳನ್ನು ಹೊತ್ತ ಗೂಡ್ಸ್ ರೈಲು ದೊಡ್ಡಬಳ್ಳಾಪುರದಿಂದ ಪ್ರಯಾಣ ಬೆಳಸಿದೆ. 6ನೇ ದಿನಕ್ಕೆ ಬಸ್ಗಳು ಚಂಡೀಗಢವನ್ನು ತಲುಪಲಿವೆ. ಎರಡನೇ ರೈಲು ಮೇ 20 ರಂದು ಚಂಡೀಗಢಕ್ಕೆ ಪ್ರಯಾಣ ಬೆಳೆಸಿದೆ. 32 ಬಸ್ಗಳ ಸಾಗಣೆಯಿಂದ ರೈಲ್ವೆ ಇಲಾಖೆಗೆ 23, 27,534, ಆದಾಯ ಬರಲಿದೆ. 300 ಬಸ್ಗಳ ಸಾಗಣೆಯಿಂದ ರೈಲ್ವೆ ಇಲಾಖೆಗೆ ಕೋಟಿ ಕೋಟಿ ಆದಾಯ ಬರಲಿದೆ. ದೊಡ್ಡಬಳ್ಳಾಪುರ, ಯಲಹಂಕ, ವಿಜಯವಾಡ,ಭೂಪಾಲ್ ಮಾರ್ಗವಾಗಿ ಚಂಡೀಗಢವನ್ನು ಗೂಡ್ಸ್ ರೈಲು ಪ್ರಯಾಣ ಬೆಳೆಸಲಿದೆ.
ಸಾಗಾಟಕ್ಕೆ ತೆಗೆದು ಕೊಂಡ ಕ್ರಮ: ಬಹುತೇಕ ರೈಲ್ವೆ ಮಾರ್ಗಗಳು ವಿದ್ಯುದೀಕರಣ ಆಗಿದ್ದರಿಂದ ಬಸ್ಗಳಿಗೆ ಲೈನ್ ತಾಗದಂತೆ ಮಾಡಲು ಟಯರ್ಗಳ ಗಾಳಿ ತೆಗೆದು ಎತ್ತರವನ್ನು ಕಮ್ಮಿ ಮಾಡಲಾಗಿದೆ. ಸುರಮಗ ಅಂಡರ್ ಪಾಸ್ಗಳನ್ನು ಬಿಟ್ಟು ಸೂಕ್ತ ಮಾರ್ಗವನ್ನೂ ಸಾಗಣೆಗೆ ಬಳಸಿದ್ದಾರೆ. ನಿರ್ಜನ ಪ್ರದೇಶದಲ್ಲಿ ಬಸ್ಗಳ ಬಿಡಿಭಾಗ ಕಳವಾಗದಂತೆ ನೋಡಿಕೊಳ್ಳಲು ಸೆಕ್ಯೂರಿಟಿ ಗಾರ್ಡ್ಗಳನ್ನು ನಿಯೋಜಿಸಲಾಗಿದೆ.
ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಕೊಡುಗೆ ಜೊತೆಗೆ ಗ್ಯಾಸ್ ಸಿಲಿಂಡರ್ಗಳಿಗೆ ₹200 ಸಬ್ಸಿಡಿ ಘೋಷಣೆ