ETV Bharat / city

ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಅಲೋಪಥಿ ವೈದ್ಯರು ಗರಂ: ಒಪಿಡಿ ಬಂದ್​​ಗೆ ನಿರ್ಧಾರ - ಭಾರತೀಯ ವೈದ್ಯಕೀಯ ಸಂಘದ ಪ್ರತಿಭಟನೆ

ಕೆಲವು ಶಸ್ತ್ರಚಿಕಿತ್ಸೆ ನಡೆಸಲು ಕೇಂದ್ರ ಸರ್ಕಾರ ಆಯುರ್ವೇದ, ಹೋಮಿಯೋಪತಿ, ಯುನಾನಿ ವೈದ್ಯರಿಗೆ ಅವಕಾಶ ನೀಡಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಭಾರತೀಯ ವೈದ್ಯಕೀಯ ಸಂಘ ಡಿಸೆಂಬರ್ 11ಕ್ಕೆ ಹೊರ ರೋಗಿ ವಿಭಾಗವನ್ನು ಸಂಪೂರ್ಣ ಬಂದ್ ಮಾಡಿ ಪ್ರತಿಭಟಿಸಲು ನಿರ್ಧರಿಸಿದೆ.

indian-medical-association-decide-stop-opd-to-protest-against-central-council-of-indian-medicine
ಭಾರತೀಯ ವೈದ್ಯಕೀಯ ಸಂಘ
author img

By

Published : Dec 6, 2020, 11:01 PM IST

ಬೆಂಗಳೂರು: ಸೆಂಟ್ರಲ್ ಕೌನ್ಸಿಲ್ ಆಫ್ ಇಂಡಿಯನ್ ಮೆಡಿಸಿನ್ ಹೊರಡಿಸಿರುವ ಅಧಿಸೂಚನೆಗೆ ಗರಂ ಆಗಿರುವ ಅಲೋಪಥಿ ವೈದ್ಯರು ಇದೇ ಡಿಸೆಂಬರ್ 11 ಕ್ಕೆ ಹೊರ ರೋಗಿ ವಿಭಾಗವನ್ನ ಸಂಪೂರ್ಣ ಬಂದ್ ಮಾಡಿ ಪ್ರತಿಭಟಿಸಲು ನಿರ್ಧರಿಸಿದ್ದಾರೆ.

ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಅಲೋಪಥಿ ವೈದ್ಯರು ಗರಂ

ಕೆಲವು ಶಸ್ತ್ರಚಿಕಿತ್ಸೆ ನಡೆಸಲು ಕೇಂದ್ರ ಸರ್ಕಾರ ಆಯುರ್ವೇದ, ಹೋಮಿಯೋಪತಿ, ಯುನಾನಿ ವೈದ್ಯರಿಗೆ ಅವಕಾಶ ನೀಡಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಈ ಪ್ರತಿಭಟನೆ ಕೈಗೊಂಡಿದೆ. ಮೊದಲ ಹಂತವಾಗಿ ಡಿಸೆಂಬರ್ 8 ರಂದು ಕಪ್ಪು ಪಟ್ಟಿ ಧರಿಸಿ ಪ್ರತಿಭಟಿಸಲಿದ್ದಾರೆ.‌ ಬಳಿಕ ಡಿಸೆಂಬರ್ 11 ರಂದು ಬೆಳಗ್ಗೆ 6ರಿಂದ ಸಂಜೆ 6 ತನಕ ಒಪಿಡಿ ಬಂದ್ ಮಾಡಲಿದ್ದಾರೆ.‌ ಆದರೆ ಕೋವಿಡ್ ಚಿಕಿತ್ಸೆ ಹಾಗೂ ತುರ್ತು ಚಿಕಿತ್ಸೆ ಸೇವೆ ಇರಲಿದ್ದು, ಅದಕ್ಕೆ ಸಂಬಂಧಪಟ್ಟ ವೈದ್ಯರು ಮಾತ್ರ ಕರ್ತವ್ಯದಲ್ಲಿ ಇರಲಿದ್ದಾರೆ.

ಓದಿ-ಚಾಕು ತೋರಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಕಳ್ಳ: ಫಿಲ್ಮಿ ಸ್ಟೈಲ್​​ಲ್ಲಿ ಬೆಳಗಾವಿ ಪೊಲೀಸ್ರ ಸಾಹಸ! ವಿಡಿಯೋ

ಇದಕ್ಕೆ ಸಂಬಂಧಪಟ್ಟಂತೆ ಈಟಿವಿ ಭಾರತದೊಂದಿಗೆ ಮಾತಾಡಿರುವ ಐಎಂಎ ರಾಜ್ಯ ಶಾಖೆಯ ಕಾರ್ಯದರ್ಶಿ ಡಾ.ಎಸ್.ಎಂ.ಪ್ರಸಾದ್, ವೈದ್ಯ ಪದ್ಧತಿಯನ್ನು ಮಿಶ್ರಣ ಮಾಡಬಾರದು. ಇದರಿಂದ ಜನರಿಗೆ ಗೊಂದಲ ಉಂಟಾಗುತ್ತದೆ. ಕೇಂದ್ರ ಸರ್ಕಾರವು ಆಯುರ್ವೇದ, ಹೋಮಿಯೋಪತಿ, ಯುನಾನಿ ವೈದ್ಯರಿಗೆ ಶಸ್ತ್ರಚಿಕಿತ್ಸೆ ಮಾಡಲು ನೀಡಿರುವ ಅನುಮತಿ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಅಪೆಂಡಿಕ್ಸ್, ಪಿತ್ತಕೋಶ, ಹಾನಿಕಾರಕವಲ್ಲದ ಗೆಡ್ಡೆ ತೆಗೆಯುವುದು ಸೇರಿದಂತೆ ಗ್ಯಾಂಗೀನ್ ಹಾಗೂ ಹಲ್ಲಿನ ಶಸ್ತ್ರಚಿಕಿತ್ಸೆ ನಡೆಸಲು ಕೇಂದ್ರ ಸರ್ಕಾರವು ಕಳೆದ ತಿಂಗಳು ಅನುಮತಿ ನೀಡಿದೆ. ಪ್ರಾಯೋಗಿಕವಾಗಿ ತರಬೇತಿ ಪಡೆದ ಸ್ನಾತಕೋತ್ತರ ಪದವೀಧರ ಆಯುರ್ವೇದ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಬಹುದು. ಆದರೆ ನುರಿತ, ಅನುಭವಿ ತಜ್ಞರೇ ಶಸ್ತ್ರಚಿಕಿತ್ಸೆ ಮಾಡುವಾಗ ಎಚ್ಚರಿಕೆವಹಿಸಬೇಕು, ಹೀಗಿರುವ ಆಯುರ್ವೇದ ವೈದ್ಯರು ಕೆಲ ಶಸ್ತ್ರಚಿಕಿತ್ಸೆ ಮಾಡುವುದಹ ಎಷ್ಟು ಸರಿ ಎಂಬ ಪ್ರಶ್ನೆ ಉದ್ಭವಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.