ಬೆಂಗಳೂರು: ವ್ಯಾಕ್ಸಿನೇಷನ್ ಅನ್ನು ಶೇ.40 ಕ್ಕಿಂತ ಹೆಚ್ಚು ಜನ ಮೊದಲ ಡೋಸ್ ಪಡೆದಿದ್ದಾರೆ. ಇದನ್ನು ಶೇ. 60ಕ್ಕೆ ಏರಿಕೆ ಮಾಡಲಾಗುವುದು. ಈ ತಿಂಗಳ ಅಂತ್ಯದೊಳಗೆ ಶೇ.50 ಜನ ವ್ಯಾಕ್ಸಿನ್ ಪಡೆದಿರುತ್ತಾರೆ. ನಗರದ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸುವುದು, ಉನ್ನತೀಕರಣಗಳಿಸುವ ಬಗ್ಗೆಯೂ ಸಿದ್ಧತೆ ನಡೆಯುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊರೊನಾ ರೂಪಾಂತರ ಸೋಂಕುಗಳ ಬಗ್ಗೆ ಪ್ರತಿನಿತ್ಯ ಅಧ್ಯಯನ ಮಾಡುವ ಪ್ರಯೋಗಾಲಯ ಆರಂಭಿಸಲಾಗುತ್ತಿದೆ. ಈ ಬಗ್ಗೆ ಮಾತನಾಡಿದ ಮುಖ್ಯ ಆಯುಕ್ತರು, ಜಿನೋಮ್ ಸ್ವೀಕ್ವೆನ್ಸಿಂಗ್ ಅನ್ನು ದಿನನಿತ್ಯ ಮಾಡಲು ಹಾಗೂ ಪ್ರತಿನಿತ್ಯದ ಟೆಸ್ಟ್ ಜೊತೆಗೆ ಅಳವಡಿಕೆ ಮಾಡಲು ಬಿಬಿಎಂಪಿ ಮುಂದಾಗಿದೆ. ನಗರದಲ್ಲಿ ಬರುವ ಪಾಸಿಟಿವ್ ಪ್ರಕರಣಗಳ ಪೈಕಿ 5 ಶೇಕಡಾ ಪಾಸಿಟಿವ್ ಪ್ರಕರಣಗಳ ಜೀನೋಮ್ ಸ್ವೀಕ್ವೆನ್ಸಿಂಗ್ ಮಾಡಲಾಗುವುದು. ರಾಜ್ಯಮಟ್ಟದಲ್ಲಿ ರೂಪಾಂತರಿ ಸೋಂಕು ಕಂಡುಬರುವ ಬಗ್ಗೆ ಕ್ರಮ ವಹಿಸುವಂತೆ ಸರ್ಕಾರ ಸೂಚಿಸಿದ ಹಿನ್ನೆಲೆ ಪಾಲಿಕೆ ಈ ಕ್ರಮಕೈಗೊಂಡಿದೆ ಎಂದರು.
ತಜ್ಞರು ಕೊರೊನಾ ರೂಪಾಂತರ ಸೋಂಕಾದ ಡೆಲ್ಟಾ ಪ್ಲಸ್ ವೈರಸ್ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ. ತಜ್ಞರ ಸೂಚನೆಯಂತೆ ಏನಾದರೂ ಬದಲಾವಣೆಗಳಿದ್ದಲ್ಲಿ ಅಳವಡಿಕೆಗೆ ಕ್ರಮ ವಹಿಸಲಾಗುವುದು. ಹಿಂದಿನಿಂದಲೇ ನಗರದಲ್ಲಿ ಕಂಟೈನ್ಮೆಂಟ್, ಐಸೋಲೇಷನ್ ನಡೆಸಲಾಗುತ್ತಿದೆ. ಇದೀಗ ಮನೆ ಮನೆಗೆ ತೆರಳಿ ಕೋವಿಡ್ ಪಾಸಿಟಿವ್ ರೋಗಿಗಳನ್ನು ಪರೀಕ್ಷಿಸಲು ವೈದ್ಯರ ತಂಡ ಕಳಿಸುವ ಬಗ್ಗೆ ಚಿಂತನೆ ನಡೆದಿದೆ. ಅರ್ಧಕ್ಕಿಂತಲೂ ಹೆಚ್ಚು ಬೆಡ್ ಬುಕ್ಕಿಂಗ್ ಮಾಡುವ ಮೊದಲೇ ಫಿಜಿಕಲ್ ಟ್ರಯಾಜಿಂಗ್, ಮನೆ ಟ್ರಯಾಜಿಂಗ್ ನಡೆದಿರುತ್ತದೆ. ಬರುವ ದಿನಗಳಲ್ಲಿಯೂ ಮನೆ ಭೇಟಿ, ಕಂಟೈನ್ ಮೆಂಟ್, ಐಸೋಲೇಷನ್ನ ತೀವ್ರಗೊಳಿಸುವುದು, ಜನದಟ್ಟಣೆ ಇರುವ ಪ್ರದೇಶಗಳಲ್ಲಿ ಟೆಸ್ಟಿಂಗ್ ಹೆಚ್ಚಳ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ: 'ಎಡವಟ್ಟಾದ್ರೆ ಏನ್ ಗತಿ, 5 ಸಾವಿರ ರೂ. ಕೊಡಿ ಆಮೇಲೆ ಲಸಿಕೆ ಹಾಕಿ..!!' ವೃದ್ಧನ ರಂಪಾಟ ನೋಡಿ