ETV Bharat / city

ಪರಿಷ್ಕೃತ ಫೆರಿಫೆರಲ್ ರಿಂಗ್ ರಸ್ತೆ ಯೋಜನೆ ಜಾರಿಗೆ ಸಂಪುಟ ಅನುಮೋದನೆ - Peripheral Ring Road Project news

ಬೆಂಗಳೂರಿನ ಪ್ರಮುಖ ನಾಲ್ಕು ರಸ್ತೆಗಳನ್ನು ಸಂಪರ್ಕಿಸುವ 65.5 ಕೀ.ಮೀ. ಉದ್ದದ ಫೆರಿಪೆರಲ್ ರಿಂಗ್ ರೋಡ್ ಯೋಜನೆಗಿದ್ದ ಅಡೆತಡೆಗಳನ್ನು ಬಗೆಹರಿಸಲಾಗಿದೆ ಎಂದು ಡಿಸಿಎಂ ಅಶ್ವಥ್​ ನಾರಾಯಣ್ ತಿಳಿಸಿದ್ದಾರೆ.

ಡಿಸಿಎಂ ಅಶ್ವಥ್​  ನಾರಾಯಣ್
author img

By

Published : Sep 18, 2019, 10:57 PM IST

ಬೆಂಗಳೂರು: ಪರಿಷ್ಕೃತ ಫೆರಿಫೆರಲ್ ರಿಂಗ್ ರೋಡ್ ಯೋಜನೆ ಅನುಷ್ಠಾನಕ್ಕೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದೆ ಎಂದು ಡಿಸಿಎಂ ಅಶ್ವಥ್‌ ನಾರಾಯಣ್ ತಿಳಿಸಿದ್ರು.

ಫೆರಿಫರಲ್ ರಿಂಗ್ ರಸ್ತೆ ಯೋಜನೆ ಕುರಿತು ಅಶ್ವಥ್​ ನಾರಾಯಣ್ ಮಾಹಿತಿ

ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಅಶ್ವಥ್​ ನಾರಾಯಣ್, ಬೆಂಗಳೂರಿನ ಪ್ರಮುಖ ನಾಲ್ಕು ರಸ್ತೆಗಳನ್ನು ಸಂಪರ್ಕಿಸುವ 65.5 ಕೀ.ಮೀ. ಉದ್ದದ ಫೆರಿಫೆರಲ್ ರಿಂಗ್ ರಸ್ತೆ ಯೋಜನೆಗಿದ್ದ ಅಡೆತಡೆಗಳನ್ನು ಬಗೆಹರಿಸಲಾಗಿದೆ. ಈ ಯೋಜನೆಯನ್ನು ಬಿಡಿಎ ಹಾಗೂ ಕೆಯುಐಡಿಎಫ್​ಸಿ ಏಜೆನ್ಸಿ ಜತೆ ಸ್ಪೆಷಲ್ ಪರ್ಪಸ್ ವೆಹಿಕಲ್ ರಚನೆ ಮಾಡಿ ಜಾರಿಗೊಳಿಸಲಾಗುತ್ತದೆ ಎಂದು ವಿವರಿಸಿದರು.

ಪರಿಷ್ಕೃತ ಯೋಜನೆಯಂತೆ ಈ‌ ಹಿಂದೆ ಇದ್ದ 75 ಮೀಟರ್ ರಸ್ತೆ ಅಗಲವನ್ನು 100 ಮೀಟರ್​ಗೆ ಏರಿಸಲಾಗಿದೆ. 8,100 ಕೋಟಿ ರೂ. ಭೂಸ್ವಾಧೀನಕ್ಕೆ ಹಾಗೂ 3,850 ಕೋಟಿ ರೂ ರಸ್ತೆ ಕಾಮಗಾರಿಗೆ ವೆಚ್ಚವಾಗಲಿದೆ. ಯೋಜನಗೆ ಸುಮಾರು 1,810 ಎಕರೆ ಭೂಮಿ ಬೇಕಾಗಿದ್ದು, ಎರಡು ಎಕರೆಗಿಂತ ಕಡಿಮೆ ಇರುವ ಭೂ ಮಾಲೀಕರಿಗೆ ಹೊಸ ಭೂ ಸ್ವಾಧೀನ ನಿಯಮದ ಪ್ರಕಾರ ಪರಿಹಾರ ನೀಡಲಾಗುತ್ತದೆ. ಇನ್ನು ಅದಕ್ಕಿಂತ ಹೆಚ್ಚಿರುವ ಭೂ ಮಾಲೀಕರಿಗೆ 50% ನಗದು ಮತ್ತು 50% ಟಿಡಿಆರ್ ನೀಡಲು ಒಪ್ಪಿಗೆ ಸೂಚಿಸಲಾಗಿದೆ. ಸರ್ಕಾರಿ ಭೂಮಿಯನ್ನು ಉಚಿತವಾಗಿ ಯೋಜನೆಗಾಗಿ ಒದಗಿಸಲಾಗುವುದು ಎಂದು ತಿಳಿಸಿದರು.

ಇನ್ನು ಭೂ ಸ್ವಾಧಿನಕ್ಕೆ ರಾಜ್ಯ ಸರ್ಕಾರ ಸಾಲ ನೀಡಲಿದೆ. ಇನ್ನು ರಸ್ತೆ ಕಾಮಗಾರಿಗಾಗಿ ಜೈಕಾ ಮೂಲಕ ಸಾಲ ಪಡೆಯಲಾಗುವುದು. ಒಂದು ವರ್ಷದಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣ‌ಗೊಂಡರೆ, ಮೂರು ವರ್ಷದಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಳಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ನವ ನಗರೋತ್ಥಾನಕ್ಕೆ ಹೊಸ ಕ್ರಿಯಾ ಯೋಜನೆ:

ನವ ಬೆಂಗಳೂರು ಯೋಜನೆಯನ್ನು ಮುಖ್ಯಮಂತ್ರಿ ನವ ನಗರೋತ್ಥನ ಎಂದು ಮರು ನಾಮಕರಣ ಮಾಡಲಾಗಿದ್ದು, ಹೊಸ ಕ್ರಿಯಾ ಯೋಜನೆ ತಯಾರು ಮಾಡಲಾಗಿದೆ ಎಂದು ಸಚಿವರು ತಿಳಿಸಿದರು. ಈ ಮುಂಚಿನ 8,015 ಕೋಟಿ ರೂ. ಕ್ರಿಯಾ ಯೋಜನೆಯನ್ನು ರದ್ದುಗೊಳಿಸಿ, ಅದಕ್ಕೆ ಪೂರಕವಾಗಿ 328 ಕೋಟಿ ರೂಪಾಯಿ ಸೇರ್ಪಡೆ ಮಾಡಿ ಹೊಸ ಆ್ಯಕ್ಷನ್ ಪ್ಲ್ಯಾನ್ ಮಾಡಲಾಗಿದೆ ಎಂದು ವಿವರಿಸಿದರು.

ಕಡಿಮೆ ವೆಚ್ಚದಲ್ಲಿ ವೈಟ್ ಟಾಪಿಂಗ್ ರಸ್ತೆ ನಿರ್ಮಾಣ:

ಪ್ರತಿ ಕಿಲೋ ಮೀಟರ್ 11 ಕೋಟಿಯಾಗುತ್ತಿದ್ದ ವೈಟ್ ಟಾಪಿಂಗ್ ರಸ್ತೆ ಕಾಮಗಾರಿಯನ್ನು ಕಡಿಮೆ‌ ವೆಚ್ಚದಲ್ಲಿ ನಿರ್ಮಿಸಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅದರಂತೆ ಪ್ರಾಯೋಗಿಕವಾಗಿ ಪ್ರತಿ‌ ಕಿಲೋ ಮೀಟರ್​ಗೆ 5-6 ಕೋಟಿ ವೆಚ್ಚದಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಕೈಗೊಳ್ಳಲು 50 ಕೋಟಿ ರೂ. ನೀಡಲು ಉದ್ದೇಶಿಸಲಾಗಿದೆ. ಇನ್ನು ಐಟಿಪಿಎಲ್​ಗೆ ಪರ್ಯಾಯ 15 ರಸ್ತೆಗಳ ನಿರ್ಮಾಣ ಮಾಡಲು 250 ಕೋಟಿ ರೂ. ಕೊಡಲಾಗಿದೆ. 25 ಕೋಟಿ ಮೆಕ್ಯಾ ನಿಕಲ್ ಸ್ವೀಪರ್​ಗೆ ನೀಡಲು ಒಪ್ಪಿಗೆ ನೀಡಲಾಗಿದ್ದರೆ, 3.25 ಕೋಟಿ ರೂ. ಒಣ ಕಸ ಸಂಗ್ರಹ ಘಟಕ ನಿರ್ಮಾಣಕ್ಕೆ ನೀಡಲಾಗುತ್ತದೆ ಎಂದು ತಿಳಿಸಿದ್ರು.

Intro:Body:KN_BNG_05_PHERIPARALROAD_CABINET_SCRIPT_7201951

ಪರಿಷ್ಕೃತ ಫೆರಿಪರೆಲ್ ರಿಂಗ್ ರಸ್ತೆ ಯೋಜನೆ ಜಾರಿಗೆ ಸಂಪುಟ ಅಸ್ತು; ನವ ನಗರೋತ್ಥಾನಕ್ಕೆ ಹೊಸ ಕ್ರಿಯಾ ಯೋಜನೆ

ಬೆಂಗಳೂರು: ಪರಿಷ್ಕೃತ ಫೆರಿಪರೆಲ್ ರಿಂಗ್ ರೋಡ್ ಯೋಜನೆ ಅನುಷ್ಠಾನಕ್ಕೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಡಿಸಿಎಂ ಅಶ್ವತ್ಥ್ ನಾರಾಯಣ್, ಬೆಂಗಳೂರಿನ ಪ್ರಮುಖ ನಾಲ್ಕು ರಸ್ತೆಗಳನ್ನು ಸಂಪರ್ಕಿಸುವ 65.5 ಕೀ.ಮೀ. ಉದ್ದದ ಫೆರಿಪರೆಲ್ ರಿಂಗ್ ರೋಡ್ ಯೋಜನೆಗಿದ್ದ ಅಡೆತಡೆಗಳನ್ನು ಬಗೆಹರಿಸಲಾಗಿದೆ. ಈ ಯೋಜನೆಯನ್ನು ಬಿಡಿಎ ಹಾಗೂ ಕೆಯುಐಡಿಎಫ್ ಸಿ ಏಜೆನ್ಸಿ ಜತೆ ಸ್ಪೆಷಲ್ ಪರ್ಪಸ್ ವೆಹಿಕಲ್ ರಚನೆ ಮಾಡಿ ಜಾರಿಗೊಳಿಸಲಾಗುತ್ತದೆ ಎಂದು ವಿವರಿಸಿದರು.

ಪರಿಷ್ಕೃತ ಯೋಜನೆಯಂತೆ ಈ‌ ಮುಂಚಿದ್ದ 75 ಮೀಟರ್ ರಸ್ತೆ ಅಗಲವನ್ನು ನೂರು ಮೀಟರ್ ಗೆ ಏರಿಸಲಾಗಿದೆ. 8,100 ಕೋಟಿ ರೂ. ಭೂಸ್ವಾಧೀನಕ್ಕೆ ಹಾಗೂ 3,850 ಕೋಟಿ ರಸ್ತೆ ಕಾಮಗಾರಿಗೆ ತಗುಲಲಿದೆ. ಸುಮಾರು 1,810 ಎಕರೆ ಭೂಮಿ ಬೇಕಾಗಿದ್ದು, ಎರಡು ಎಕರೆಗಿಂತ ಕಡಿಮೆ ಇರುವ ಭೂ ಮಾಲೀಕರಿಗೆ ಹೊಸ ಭೂ ಸ್ವಾಧೀನ ನಿಯಮದ ಪ್ರಕಾರ ಪರಿಹಾರ ನೀಡಲಾಗುತ್ತದೆ. ಇನ್ನು ಅದಕ್ಕಿಂತ ಹೆಚ್ಚಿರುವ ಭೂ ಮಾಲೀಕರಿಗೆ 50% ನಗದು ಮತ್ತು 50% ಟಿಡಿಆರ್ ನೀಡಲು ಒಪ್ಪಿಗೆ ಸೂಚಿಸಲಾಗಿದೆ. ಸರ್ಕಾರಿ ಭೂಮಿಯನ್ನು ಉಚಿತವಾಗಿ ಯೋಜನೆಗಾಗಿ ಒದಗಿಸಲಾಗುವುದು ಎಂದು ತಿಳಿಸಿದರು.

ಭೂ ಸ್ವಾಧಿನಕ್ಕೆ ರಾಜ್ಯ ಸರ್ಕಾರ ಸಾಲ ನೀಡಲಿದೆ. ಇನ್ನು ರಸ್ತೆ ಕಾಮಗಾರಿಗಾಗಿ ಜೈಕಾ ಮೂಲಕ ಸಾಲ ಪಡೆಯಲಾಗುವುದು. ಒಂದು ವರ್ಷ ದಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣ‌ಗೊಂಡರೆ, ಮೂರು ವರ್ಷದಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಳಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ನವನಗರೋತ್ಥಾನಕ್ಕೆ ಹೊಸ ಕ್ರಿಯಾ ಯೋಜನೆ:

ಸಿಎಂ ನವ ಬೆಂಗಳೂರು ಯೋಜನೆಯನ್ನು ಮುಖ್ಯಮಂತ್ರಿ ನವನಗರೋತ್ಥನ ಎಂದು ಮರು ನಾಮಕರಣ ಮಾಡಲಾಗಿದ್ದು, ಹೊಸ ಕ್ರಿಯಾ ಯೋಜನೆ ತಯಾರು ಮಾಡಲಾಗಿದೆ ಎಂದು ಡಿಸಿಎಂ ಅಶ್ವತ್ಥ್ ನಾರಾಯಣ್ ತಿಳಿಸಿದರು.

ಈ ಮುಂಚಿನ 8015 ಕೋಟಿ ರೂ. ಕ್ರಿಯಾ ಯೋಜನೆಯನ್ನು ರದ್ದುಗೊಳಿಸಿ, ಅದಕ್ಕೆ ಪೂರಕವಾಗಿ 328 ಕೋಟಿ ರೂಪಾಯಿ ಸೇರ್ಪಡೆ ಮಾಡಿ ಹೊಸ ಆಕ್ಷನ್ ಪ್ಲಾನ್ ಮಾಡಲಾಗಿದೆ ಎಂದು ವಿವರಿಸಿದರು.

ಕಡಿಮೆ ವೆಚ್ಚದಲ್ಲಿ ವೈಟ್ ಟಾಪಿಂಗ್ ರಸ್ತೆ ನಿರ್ಮಾಣ:

ಪ್ರತಿ ಕಿಲೋಮೀಟರ್ 11 ಕೋಟಿಯಾಗುತ್ತಿದ್ದ ವೈಟ್ ಟಾಪಿಂಗ್ ರಸ್ತೆ ಕಾಮಗಾರಿಯನ್ನು ಕಡಿಮೆ‌ ವೆಚ್ಚದಲ್ಲಿ ನಿರ್ಮಿಸಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಅದರಂತೆ ಪ್ರಾಯೋಗಿಕವಾಗಿ ಪ್ರತಿ‌ ಕಿಲೋಮೀಟರ್ ಗೆ 5-6 ಕೋಟಿ ವೆಚ್ಚದಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಕೈಗೊಳ್ಳಲು 50 ಕೋಟಿ ರೂ. ನೀಡಲು ತೀರ್ಮಾನಿಸಲಾಗಿದೆ.

ಐಟಿಪಿಎಲ್ ಗೆ ಪರ್ಯಾಯ 15 ರಸ್ತೆಗಳ ನಿರ್ಮಾಣ ಮಾಡಲು 250 ಕೋಟಿ ರೂ. ಕೊಡಲಾಗಿದೆ. ಇನ್ನು 25 ಕೋಟಿ ಮೆಕ್ಯಾನಿಕಲ್ ಸ್ವೀಪರ್ ಗೆ ನೀಡಲು ಒಪ್ಪಿಗೆ ನೀಡಲಾಗಿದ್ದರೆ, 3.25 ಕೋಟಿ ರೂ. ಒಣ ಕಸ ಸಂಗ್ರಹ ಘಟಕ ನಿರ್ಮಾಣಕ್ಕೆ ನೀಡಲಾಗುತ್ತದೆ ಎಂದು ವಿವರಿಸಿದರು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.