ಬೆಂಗಳೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ವಲಸೆ ನಾಯಕ ಎಂದು ವ್ಯಂಗ್ಯವಾಡಿರುವ ಬಿಜೆಪಿ, ಸರಣಿ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದೆ. ಗಾಂಧಿ ಕುಟುಂಬ ಲಸಿಕೆ ಪಡೆಯದೇ ಇರುವುದನ್ನೂ ಪ್ರಶ್ನಿಸಿ ಟ್ವೀಟ್ ಮಾಡಿದೆ.
ವಲಸೆ ನಾಯಕ ಸಿದ್ದರಾಮಯ್ಯ ಅವರೇ, ಸ್ವಕ್ಷೇತ್ರ ಚಾಮುಂಡೇಶ್ವರಿಯಲ್ಲಿ ಸೋತಿದ್ದು ನಿಮ್ಮ ಅಸಮರ್ಥತೆಯಿಂದಲ್ಲವೇ? ಬಾದಾಮಿಯಲ್ಲಿ ಮುಂದಿನ ಬಾರಿ ಸೋಲುವ ಭಯದಿಂದ ಮೂರನೇ ಕ್ಷೇತ್ರದ ಹುಡುಕಾಟದಲ್ಲಿರುವುದು ನಿಮ್ಮ ಅಸಮರ್ಥತೆಯಲ್ಲವೇ? ಸಮರ್ಥ & ಅಸಮರ್ಥ ಎನ್ನುವ ಹೋರಾಟ ಇರುವುದು ಡಿ.ಕೆ.ಶಿವಕುಮಾರ್ & ನಿಮ್ಮ ನಡುವೆಯೇ ಹೊರತು ಬಿಜೆಪಿಯಲ್ಲಲ್ಲ ಎಂದು ಬಿಜೆಪಿ ಟ್ವೀಟ್ ಮೂಲಕ ಟಾಂಗ್ ನೀಡಿದೆ.
ಡಿಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ದಲಿತ ಶಾಸಕ ಅಖಂಡ ಅವರಿಗೆ ಅನ್ಯಾಯವಾದಾಗ ಧ್ವನಿ ಎತ್ತಲಾಗದ ನೀವು ನಿಜವಾದ ಅಸಮರ್ಥ ನಾಯಕ. ನಿಮ್ಮ ಅಸಮರ್ಥತೆಯನ್ನು ಮುಚ್ಚಿಟ್ಟುಕೊಂಡು ಬೇರೆಯವರ ಸಮರ್ಥತೆಯ ಬಗ್ಗೆ ಪ್ರಶ್ನಿಸುವುದು ನಿಮಗೆ ಶೋಭೆ ತರುವುದಿಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಟ್ವೀಟ್ ಮೂಲಕ ಟಾಂಗ್ ನೀಡಿದೆ.
-
ಮಾನ್ಯ @siddaramaiah
— BJP Karnataka (@BJP4Karnataka) April 8, 2021 " class="align-text-top noRightClick twitterSection" data="
ನೀವು ಮುಖ್ಯಮಂತ್ರಿಯಾಗಿದ್ದಾಗ ಕೇಳಿಬಂದ ಅಪಸ್ವರಗಳ ಪಟ್ಟಿಬೇಕೇ?
√ ಸರ್ಕಾರವೇ ಸರಿ ಇಲ್ಲ - ಕಾಗೋಡು
√ ಕಾಂಗ್ರೆಸ್ ಮುಗಿಸುತ್ತಿದ್ದೀರಿ - ಜನಾರ್ದನ ಪೂಜಾರಿ
√ ಸಿಎಂ ಸರಿ ಇಲ್ಲ- ಶ್ರೀನಿವಾಸ್ ಪ್ರಸಾದ್
ಈ ಧ್ವನಿಗಳು ನಿಮ್ಮಅಸಮರ್ಥತೆಯನ್ನು ಸಾಬೀತುಪಡಿಸಿತ್ತಲ್ಲವೇ?#ವಲಸೆನಾಯಕಸಿದ್ದರಾಮಯ್ಯ pic.twitter.com/W03F1ovg8M
">ಮಾನ್ಯ @siddaramaiah
— BJP Karnataka (@BJP4Karnataka) April 8, 2021
ನೀವು ಮುಖ್ಯಮಂತ್ರಿಯಾಗಿದ್ದಾಗ ಕೇಳಿಬಂದ ಅಪಸ್ವರಗಳ ಪಟ್ಟಿಬೇಕೇ?
√ ಸರ್ಕಾರವೇ ಸರಿ ಇಲ್ಲ - ಕಾಗೋಡು
√ ಕಾಂಗ್ರೆಸ್ ಮುಗಿಸುತ್ತಿದ್ದೀರಿ - ಜನಾರ್ದನ ಪೂಜಾರಿ
√ ಸಿಎಂ ಸರಿ ಇಲ್ಲ- ಶ್ರೀನಿವಾಸ್ ಪ್ರಸಾದ್
ಈ ಧ್ವನಿಗಳು ನಿಮ್ಮಅಸಮರ್ಥತೆಯನ್ನು ಸಾಬೀತುಪಡಿಸಿತ್ತಲ್ಲವೇ?#ವಲಸೆನಾಯಕಸಿದ್ದರಾಮಯ್ಯ pic.twitter.com/W03F1ovg8Mಮಾನ್ಯ @siddaramaiah
— BJP Karnataka (@BJP4Karnataka) April 8, 2021
ನೀವು ಮುಖ್ಯಮಂತ್ರಿಯಾಗಿದ್ದಾಗ ಕೇಳಿಬಂದ ಅಪಸ್ವರಗಳ ಪಟ್ಟಿಬೇಕೇ?
√ ಸರ್ಕಾರವೇ ಸರಿ ಇಲ್ಲ - ಕಾಗೋಡು
√ ಕಾಂಗ್ರೆಸ್ ಮುಗಿಸುತ್ತಿದ್ದೀರಿ - ಜನಾರ್ದನ ಪೂಜಾರಿ
√ ಸಿಎಂ ಸರಿ ಇಲ್ಲ- ಶ್ರೀನಿವಾಸ್ ಪ್ರಸಾದ್
ಈ ಧ್ವನಿಗಳು ನಿಮ್ಮಅಸಮರ್ಥತೆಯನ್ನು ಸಾಬೀತುಪಡಿಸಿತ್ತಲ್ಲವೇ?#ವಲಸೆನಾಯಕಸಿದ್ದರಾಮಯ್ಯ pic.twitter.com/W03F1ovg8M
ನೀವು ಮುಖ್ಯಮಂತ್ರಿ ಆಗಿದ್ದಾಗ ಹಿರಿಯ ನಾಯಕ ಜನಾರ್ದನ ಪೂಜಾರಿ ಅವರು ತಮ್ಮನ್ನು ಹೋದಲ್ಲಿ ಬಂದಲ್ಲಿ ಟೀಕೆ ಮಾಡುತ್ತಿದ್ದರು. ಅವರನ್ನು ನಿಯಂತ್ರಿಸಲಾಗದ ನೀವು ಈಗ ಬಿಜೆಪಿ ಪಕ್ಷದ ಬಗ್ಗೆ ಚಿಂತಿಸುವುದು ಹಾಸ್ಯದ ವಿಚಾರ. ಕಾಂಗ್ರೆಸ್ ಪಕ್ಷದಲ್ಲಿ ನೀವೊಬ್ಬ ವಲಸೆ ನಾಯಕ ಸಿದ್ದರಾಮಯ್ಯ ಅಷ್ಟೇ! ಎಂದು ಟ್ವೀಟ್ ಮೂಲಕ ಬಿಜೆಪಿ ವ್ಯಂಗ್ಯವಾಡಿದೆ.
ನೀವು ಮುಖ್ಯಮಂತ್ರಿಯಾಗಿದ್ದಾಗ ಕೇಳಿಬಂದ ಅಪಸ್ವರಗಳ ಪಟ್ಟಿ ಬೇಕೇ?
• ಸರ್ಕಾರವೇ ಸರಿ ಇಲ್ಲ - ಕಾಗೋಡು ತಿಮ್ಮಪ್ಪ
• ಕಾಂಗ್ರೆಸ್ ಮುಗಿಸುತ್ತಿದ್ದೀರಿ - ಜನಾರ್ದನ ಪೂಜಾರಿ
• ಸಿಎಂ ಸರಿ ಇಲ್ಲ- ಶ್ರೀನಿವಾಸ್ ಪ್ರಸಾದ್
ಈ ಧ್ವನಿಗಳು ನಿಮ್ಮ ಅಸಮರ್ಥತೆಯನ್ನು ಸಾಬೀತುಪಡಿಸಿತ್ತಲ್ಲವೇ? ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಲಸಿಕೆ ತೆಗೆದುಕೊಳ್ಳದ ಕೈ ನಾಯಕರಿಗೆ ಮತಿಭ್ರಮಣೆ:
ಲಸಿಕೆ ತೆಗೆದುಕೊಳ್ಳದೆ ಕಾಂಗ್ರೆಸ್ ಪಕ್ಷಕ್ಕೆ ಮತಿಭ್ರಮಣೆಯಾಗಿದೆ. ಮೋದಿ ಸರ್ಕಾರ ದೇಶದಲ್ಲಿ ನಿತ್ಯ 34 ಲಕ್ಷ ಡೋಸ್ ಲಸಿಕೆ ವಿತರಿಸುತ್ತಿದೆ. ಇದುವರೆಗೆ 9 ಕೋಟಿಗೂ ಅಧಿಕ ಲಸಿಕೆ ವಿತರಿಸಲಾಗಿದ್ದು, ಜಾಗತಿಕ ಮಟ್ಟದಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ಲಸಿಕೆ ಕೊರತೆ ನಿಜವಾಗಿದ್ದರೆ ಸಿದ್ದರಾಮಯ್ಯ ಲಸಿಕೆ ಪಡೆಯಲು ಸಾಧ್ಯವಿತ್ತೇ? ಲಸಿಕೆಯ ಬಗ್ಗೆ ಆತ್ಮವಿಶ್ವಾಸ ಮೂಡಿಸುವ ಬದಲು ದೇಶದ ಜನರ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ ಎಂದು ಬಿಜೆಪಿ ಹರಿಹಾಯ್ದಿದೆ.
• ಗಾಂಧಿ ಕುಟುಂಬದ ಯಾರೂ ಲಸಿಕೆ ತೆಗೆದುಕೊಂಡಿಲ್ಲವೇಕೆ?
• ಭಾರತೀಯ ಲಸಿಕೆಯಲ್ಲಿ ಸೋನಿಯಾ, ರಾಹುಲ್, ಪ್ರಿಯಾಂಕಾ ಗಾಂಧಿ ಅವರಿಗೆ ನಂಬಿಕೆ ಇಲ್ಲವೇ?
• ಇಟಲಿಯ ಲಸಿಕೆಗಾಗಿ ಗಾಂಧಿ ಕುಟುಂಬ ಕಾಯುತ್ತಿದೆಯೇ? ಎಂದು ಗಾಂಧಿ ಕುಟುಂಬವನ್ನು ಬಿಜೆಪಿ ಕುಟುಕಿದೆ.
ಇದನ್ನೂ ಓದಿ.. ಉಪಚುನಾವಣೆಯಲ್ಲಿ ಮತದಾರರು ಸ್ಪಷ್ಟ ಸಂದೇಶ ನೀಡಲಿದ್ದಾರೆ: ಸಿದ್ದರಾಮಯ್ಯ ಟ್ವೀಟ್