ETV Bharat / city

ಮೂರು ದಿನಗಳ ಅಂತರದಲ್ಲಿ 2ನೇ ಬಾರಿ ಪತ್ತೆಯಾದ ಅಪಾಯಕಾರಿ ಎಪಿಡ್ರೈನ್ ಡ್ರಗ್ಸ್.. - ಎಪಿಡ್ರೈನ್ ಡ್ರಗ್ಸ್​ ಪತ್ತೆ

ವ್ಯಕ್ತಿಯೊಬ್ಬ ಆಸ್ಟ್ರೇಲಿಯಾಕ್ಕೆ ಎಪಿಡ್ರೈನ್ ಡ್ರಗ್‌ನ ಮದುವೆ ಆಹ್ವಾನ ಪತ್ರಿಕೆಯೊಳಗಿಟ್ಟು ಕಳ್ಳಸಾಗಾಣಿಕೆ ಮಾಡುವ ಯತ್ನ ನಡೆಸಿದ್ದ. ಏರ್‌ಪೋರ್ಟ್‌ನ ಕಾರ್ಗೋ ವಿಭಾಗದಲ್ಲಿ ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ಮಾಡುವಾಗ ಮದುವೆ ಆಹ್ವಾನ ಪತ್ರಿಕೆಯೊಳಗೆ ಪ್ಯಾಕೇಟ್ ರೂಪದಲ್ಲಿಟ್ಟಿದ್ದ ಬಿಳಿ ಪೌಡರ್ ಪತ್ತೆಯಾಗಿದೆ.

ephedrine-drugs
ಎಪಿಡ್ರೈನ್ ಡ್ರಗ್ಸ್
author img

By

Published : Feb 22, 2020, 2:21 PM IST

ದೇವನಹಳ್ಳಿ : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಗೋ ವಿಭಾಗದ ಕಸ್ಟಮ್ಸ್ ಅಧಿಕಾರಿಗಳು ಯಶಸ್ವಿ ಕಾರ್ಯಾಚರಣೆ ನಡೆಸಿ ಮದುವೆ ಆಹ್ವಾನ ಪತ್ರಿಕೆಯಲ್ಲಿಟ್ಟು ಎಪಿಡ್ರೈನ್ ಡ್ರಗ್ಸ್ ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಜಾಲ ಪತ್ತೆ ಮಾಡಿದ್ದಾರೆ.

ಮಧುರೈ ಮೂಲದ ವ್ಯಕ್ತಿಯೊಬ್ಬ ಆಸ್ಟ್ರೇಲಿಯಾಕ್ಕೆ ಎಪಿಡ್ರೈನ್ ಡ್ರಗ್‌ನ ಮದುವೆ ಆಹ್ವಾನ ಪತ್ರಿಕೆಯೊಳಗಿಟ್ಟು ಕಳ್ಳಸಾಗಾಣಿಕೆ ಮಾಡುವ ಯತ್ನ ನಡೆಸಿದ್ದ. ಏರ್‌ಪೋರ್ಟ್‌ನ ಕಾರ್ಗೋ ವಿಭಾಗದಲ್ಲಿ ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ಮಾಡುವಾಗ ಮದುವೆ ಆಹ್ವಾನ ಪತ್ರಿಕೆಯೊಳಗೆ ಪ್ಯಾಕೇಟ್ ರೂಪದಲ್ಲಿಟ್ಟಿದ್ದ ಬಿಳಿ ಪೌಡರ್ ಪತ್ತೆಯಾಗಿದೆ.

ಪರೀಕ್ಷೆ ನಡೆಸಿದ್ದಾಗ ವಿಶ್ವದ ಅತ್ಯಂತ ಅಪಾಯಕಾರಿ ಮಾದಕ ದ್ರವ್ಯ ಎಪಿಡ್ರೈನ್ ಡ್ರಗ್ಸ್ ಅನ್ನೋದು ಗೊತ್ತಾಗಿದೆ. 43 ಮದುವೆ ಆಹ್ವಾನ ಪತ್ರಿಕೆಯೊಳಗೆ 5.049 ಕೆಜಿಯ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 5.05 ಕೋಟಿ ಮೌಲ್ಯದ ಎಪಿಡ್ರೈನ್ ಡ್ರಗ್ಸ್ ವಶಕ್ಕೆ ಪಡೆದುಕೊಂಡಿದ್ದಾರೆ. NDPS ಆ್ಯಕ್ಟ್ 1985 ಪ್ರಕಾರ ಪ್ರಕರಣ ದಾಖಲಾಗಿದೆ.

ಕಳೆದ 18ರಂದು ಇದೇ ಕಾರ್ಗೋ ವಿಭಾಗದದಲ್ಲಿ ತಪಾಸಣೆ ಮಾಡುವಾಗ ಬಟ್ಟೆ ಹೊಲಿಗೆಯಂತ್ರದ ಬಾಬಿನೊಳಗೆ 5 ಕೋಟಿ ಮೌಲ್ಯದ ಎಪಿಡ್ರೈನ್ ಡ್ರಗ್ಸ್ ಪತ್ತೆಯಾಗಿದೆ. ಮೂರೇ ದಿನದಲ್ಲಿ 10 ಕೋಟಿ ಮೌಲ್ಯದ ಎಪಿಡ್ರೈನ್ ಡ್ರಗ್ಸ್ ವಶಕ್ಕೆ ಪಡೆಯುವ ಮೂಲಕ ಸ್ಮಂಗ್ಲರ್‌ಗಳಿಗೆ ಬಿಸಿ ಮುಟ್ಟಿಸಿದ್ದಾರೆ ಕಸ್ಟಮ್ಸ್ ಅಧಿಕಾರಿಗಳು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.