ETV Bharat / city

ಕೊರೊನಾ ಹೆಚ್ಚಳ: ಆನೇಕಲ್ ಗಡಿ ಪರಿಶೀಲನೆಗೆ ಐಜಿಪಿ ಭೇಟಿ, ಪರಿಶೀಲನೆ

ಕೇರಳ ಹಾಗೂ ಮಹಾರಾಷ್ಟ್ರ ಕಡೆಯಿಂದ ರಾಜ್ಯಕ್ಕೆ ಬರುವವರಿಗೆ ಕೋವಿಡ್​ ರಿಪೋರ್ಟ್ ಕಡ್ಡಾಯವೆಂದು ಐಜಿಪಿ ಚಂದ್ರಶೇಖರ್ ತಿಳಿಸಿದ್ದಾರೆ.

author img

By

Published : Apr 30, 2021, 11:05 PM IST

igp-chandrasekhar-visits-checkpost-at-anekal
ಐಜಿಪಿ

ಆನೇಕಲ್: ತಾಲೂಕಿನ ಸುತ್ತ ಮುತ್ತ ಕೊರೊನಾ ಸೋಂಕು ಹೆಚ್ಚಾಗಿ ಕಾಣಿಸಿಕೊಂಡಿದ್ದು, ಸರ್ಕಾರ ಇಲ್ಲಿ ಕರ್ಫ್ಯೂವನ್ನು ಜಾರಿಗೊಳಿಸಿದೆ. ಹೀಗಾಗಿ ತಮಿಳುನಾಡಿಂದ ಒಳ ಬರುವವರ ಮೇಲೆ ಪೊಲೀಸರು ತೀರ್ವ ನಿಗಾ ವಹಿಸಿರುವುದನ್ನು ಪರಿಶೀಲಿಸಲು ಖುದ್ದು ಐಜಿಪಿ ಆಗಮಿಸಿದರು.

ಐಜಿಪಿ ಚಂದ್ರಶೇಖರ್, ಎಸ್​​​ಪಿ ಚನ್ನಣ್ಣನವರ ಭೇಟಿ ಪರಿಶೀಲನೆ

ಎಸ್ಪಿ ರವಿ ಡಿ‌ ಚನ್ನಣ್ಣನವರ್, ಎಎಸ್ಪಿ ಲಕ್ಷ್ಮಿ ಗಣೇಶ್, ಡಿವೈಎಸ್​ಪಿ ಹೆಚ್ಎಂ ಮಹದೇವಪ್ಪರ ತಂಡ ಅಂತರರಾಜ್ಯ ಚೆಕ್ ಪೊಸ್ಟ್ ಸಿಬ್ಬಂದಿಗೆ ಕಟ್ಟುನಿಟ್ಟಾಗಿ ಪರಿಶೀಲಿಸುವಂತೆ ಆದೇಶ ನೀಡಿದರಲ್ಲದೇ, ತಮ್ಮ ಆರೋಗ್ಯದ ಕಡೆ ಗಮನ ಹರಿಸುವಂತೆ ಸಲಹೆ ನೀಡಿದರು.

ಬಳ್ಳೂರು ಕಡೆಯಿಂದ ಬರುವ ಕಳ್ಳ ದಾರಿಯನ್ನು ಮುಚ್ಚಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಕೇರಳ ಹಾಗೂ ಮಹಾರಾಷ್ಟ್ರ ಕಡೆಯಿಂದ ಬರುವವರಿಗೆ ಕೋವಿಡ್​ ರಿಪೋರ್ಟ್ ಕಡ್ಡಾಯವೆಂದು ಘೋಷಿಸಿದರು. 48 ಗಂಟೆಗಳ ಒಳಗೆ ಮಾಡಿಸಿರುವ ಕೋವಿಡ್​ ರಿಪೋರ್ಟ್ ಇದ್ದವರಿಗೆ‌ ಪ್ರವೇಶ ಮತ್ತು ಗಡಿಗಳಲ್ಲಿ ಹೊರರಾಜ್ಯದ ಪ್ರಯಾಣಿಕರ ತಡೆದು ತಪಾಸಣೆ ನಡೆಸಬೇಕು ಎಂದು ತಿಳಿಸಿದ್ದು, ಅನವಶ್ಯಕವಾಗಿ ಓಡಾಡುವವರ ಮೇಲೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಓದಿ: ಲಸಿಕೆ ಹಾಕಿಸಿಕೊಳ್ಳದಿದ್ದರೂ ವ್ಯಾಕ್ಸಿನೇಷನ್ ಸಕ್ಸಸ್ ಅಂತಾ​ ಮೆಸೇಜ್: ಮೈಸೂರಲ್ಲಿ ಮಹಾ ಯಡವಟ್ಟು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.