ETV Bharat / city

ಸಹಕಾರ ಸಂಘಗಳ 3 ಮಹಾಸಭೆಗಳಿಗೆ ಗೈರಾದರೆ ಮತದಾನದ ಹಕ್ಕಿಲ್ಲ : ಹೈಕೋರ್ಟ್ - ಹೈಕೋರ್ಟ್‌

ಸಹಕಾರ ಸಂಘಗಳ ಕಾಯ್ದೆ-1959 ಕ್ಕೆ ತಿದ್ದುಪಡಿ ಮಾಡಿ ಸೆಕ್ಷನ್ 20(ಎ) ಅನ್ನು ಸೇರ್ಪಡೆ ಮಾಡಿರುವ ಸರ್ಕಾರದ ಕ್ರಮ ಸರಿ ಇದೆ ಎಂದು ಹೈಕೋರ್ಟ್‌ ಹೇಳಿದ್ದು, ಸಹಕಾರ ಸಂಘಗಳ ಕಾಯ್ದೆ-1959 ಕ್ಕೆ ತಿದ್ದುಪಡಿ ಮಾಡಿ ಸೆಕ್ಷನ್ 20(ಎ) ಅನ್ನು ಸೇರ್ಪಡೆ ಮಾಡಿರುವ ಕ್ರಮವನ್ನು ಪ್ರಶ್ನಿಸಿದ್ದ ಅರ್ಜಿಗಳನ್ನು ನ್ಯಾಯಾಲಯ ವಜಾ ಮಾಡಿದೆ.

IF you Absent 3 General meeting of Co-operative Societies, No voting rights : HC
ಸಹಕಾರ ಸಂಘಗಳ 3 ಮಹಾಸಭೆಗಳಿಗೆ ಗೈರಾದರೆ ಮತದಾನದ ಹಕ್ಕಿಲ್ಲ : ಹೈಕೋರ್ಟ್
author img

By

Published : Oct 2, 2021, 5:25 AM IST

ಬೆಂಗಳೂರು: ಸಹಕಾರ ಸಂಘಗಳ ಐದು ವಾರ್ಷಿಕ ಮಹಾಸಭೆಗಳಲ್ಲಿ 3 ಸಭೆಗಳಿಗೆ ಗೈರಾದರೆ ಹಾಗೂ ಸಂಘದ ಸೇವೆಯನ್ನು ಸತತ ಮೂರು ವರ್ಷ ಬಳಸಿಕೊಳ್ಳದಿದ್ದರೆ ಸದಸ್ಯರು ಸಂಘದ ಚುನಾವಣೆಯಲ್ಲಿ ಮತದಾನ ಮಾಡುವ‌ ಹಕ್ಕನ್ನು ಕಳೆದುಕೊಳ್ಳಲಿದ್ದಾರೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಸಹಕಾರ ಸಂಘಗಳ ಕಾಯ್ದೆ-1959 ಕ್ಕೆ ತಿದ್ದುಪಡಿ ಮಾಡಿ ಸೆಕ್ಷನ್ 20(ಎ) ಅನ್ನು ಸೇರ್ಪಡೆ ಮಾಡಿರುವ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ರಾಜ್ಯದ ವಿವಿಧ ಸಹಕಾರ ಸಂಘಗಳ ಸದಸ್ಯರು ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಪಿ.ಎಸ್ ದಿನೇಶ್ ಕುಮಾರ್ ಅವರಿದ್ದ ಪೀಠ ವಿಚಾರಣೆ ನಡೆಸಿತು. ಕೆಲ ಕಾಲ ವಾದ ಆಲಿಸಿದ ಪೀಠ ಸರ್ಕಾರದ ತಿದ್ದುಪಡಿ ಕ್ರಮ ಸರಿಯಿದೆ ಎಂದು ಅಭಿಪ್ರಾಯಪಟ್ಟು, ಎಲ್ಲ ತಕರಾರು ಅರ್ಜಿಗಳನ್ನು ವಜಾಗೊಳಿಸಿ ಆದೇಶ ನೀಡಿದೆ.

ಸಹಕಾರ ಸಂಘಗಳ ಕಾಯ್ದೆಗೆ ತಿದ್ದುಪಡಿ ಮಾಡಿ ಜಾರಿಗೆ ತಂದಿರುವ ಸೆಕ್ಷನ್ 20(ಎ) ಹೇಳುವ ಎರಡೂ ನಿಬಂಧನೆಗಳು 2021ರ ಆಗಸ್ಟ್ 4ರ ನಂತರ ನಡೆಯುವ ಚುನಾವಣೆಗಳಿಗೆ ಅನ್ವಯವಾಗುತ್ತವೆ ಎಂದು ಕೋರ್ಟ್‌ ಹೇಳಿದೆ.

2013ರ ಜನವರಿ 13 ರಂದು ಸಹಕಾರ ಸಂಘಗಳ ಕಾಯ್ದೆಗೆ ಸರ್ಕಾರ ತಿದ್ದುಪಡಿ ತಂದು ಸೆಕ್ಷನ್ 20(ಎ) ಸೇರಿಸಿತ್ತು. ಆ ಪ್ರಕಾರ ಐದರಲ್ಲಿ ಮೂರು ಸಭೆಗಳಲ್ಲಿ ಭಾಗವಹಿಸದಿದ್ದರೆ ಹಾಗೂ ಮೂರು ವರ್ಷ ಸಂಘದ ಸೇವೆ ಬಳಸಿಕೊಳ್ಳದಿದ್ದರೆ ಸಂಘದ ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕನ್ನು ಕಳೆದುಕೊಳ್ಳುತ್ತಾರೆ ಎಂದು ನಿಯಮ ರೂಪಿಸಲಾಗಿತ್ತು. ಹೀಗೆ ಕಾಯ್ದೆಗೆ ತಿದ್ದುಪಡಿ ತಂದು ಐದು ವರ್ಷವಾದರೂ 2018ರವರೆಗೆ ಅದನ್ನು ಜಾರಿ ಮಾಡಿರಲಿಲ್ಲ. ಕಾಯ್ದೆ ಜಾರಿಗೆ ತರದಿರುವುದನ್ನು ಗಮನದಲ್ಲಿಟ್ಟುಕೊಂಡು ಸದಸ್ಯರಿಗೆ ಮತದಾನ ಮಾಡಲು ಮತ್ತು ಚುನಾವಣೆಯಲ್ಲಿ ಸ್ಪರ್ಧಿಸಲು ನ್ಯಾಯಾಲಯ ಮಧ್ಯಂತರ ಆದೇಶದಲ್ಲಿ ಅನುಮತಿ ನೀಡಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.