ETV Bharat / city

ಪಿಎಸ್ಐ ಹಗರಣದಲ್ಲಿ ನನ್ನ ಪಾತ್ರವಿಲ್ಲ, ಅಮೃತ್ ಪೌಲ್​ಗೆ ಜಮೀನು ಕೊಡಿಸಿದ್ದು ನಿಜ: ಹುಸ್ಕೂರ್ ಆನಂದ್ - CID raid

ಪಿಎಸ್‌ಐ ನೇಮಕಾತಿ ಹಗರಣ ಸಂಬಂಧ ಅಧಿಕಾರಿಗಳು ಕೇಳಿದ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿದ್ದೇನೆ. ಹಗರಣದಲ್ಲಿ ನನ್ನ ಪಾತ್ರವಿಲ್ಲ ಎಂದು ರಿಯಲ್‌ ಎಸ್ಟೇಟ್‌ ಉದ್ಯಮಿ ಹುಸ್ಕೂರು ಆನಂದ್‌ ಹೇಳಿದರು.

Huskur Anand
ಉದ್ಯಮಿ ಹುಸ್ಕೂರು ಆನಂದ್‌
author img

By

Published : Aug 7, 2022, 10:09 AM IST

ದೊಡ್ಡಬಳ್ಳಾಪುರ: ಪಿಎಸ್ಐ ನೇಮಕಾತಿ ಹಗರಣದಲ್ಲಿ ನನ್ನ ಪಾತ್ರವಿಲ್ಲ. ಬಂಧಿತ ಐಪಿಎಸ್ ಅಧಿಕಾರಿ ಅಮೃತ್ ಪೌಲ್ ಅವರಿಗೆ ಜಮೀನು ಕೊಡಿಸಿರುವುದು ನಿಜ. ಆದರೆ, ಯಾವುದೇ ವ್ಯವಹಾರ ಇಟ್ಟುಕೊಂಡಿಲ್ಲ ಎಂದು ನಂದನವನ ಚಾರಿಟೇಬಲ್ ಟ್ರಸ್ಟ್ ವ್ಯವಸ್ಥಾಪಕ ನಿರ್ದೇಶಕ ಹುಸ್ಕೂರು ಆನಂದ್ ಹೇಳಿದರು.

ಪಿಎಸ್ಐ ನೇಮಕಾತಿ ಹಗರಣ ಹಿನ್ನೆಲೆಯಲ್ಲಿ ಎಡಿಜಿಪಿ ಅಮೃತ್ ಪೌಲ್ ಅವರನ್ನು ಬಂಧಿಸಲಾಗಿದೆ. ಅವರೊಂದಿಗೆ ಫೋನ್ ಸಂಭಾಷಣೆ ನಡೆಸಿದ ದೊಡ್ಡಬಳ್ಳಾಪುರದ ಉದ್ಯಮಿ ಹುಸ್ಕೂರ್ ಆನಂದ್ ಕಚೇರಿ ಮತ್ತು ಮನೆ ಮೇಲೆ ಸಿಐಡಿ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದರು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಆನಂದ್ ಮಾಧ್ಯಮಗೋಷ್ಠಿ ನಡೆಸಿ ಮಾಹಿತಿ ನೀಡಿದರು.

ಸಿಐಡಿ ದಾಳಿ ಕುರಿತು ಮಾಹಿತಿ ನೀಡಿದ ಉದ್ಯಮಿ ಹುಸ್ಕೂರು ಆನಂದ್‌

"2016-17 ರಲ್ಲಿ ತಾಲೂಕಿನ ರಾಮೇಶ್ವರ ಹಾಗೂ ಪಿಂಡಕೂರು ತಿಮ್ಮನಹಳ್ಳಿ ಗ್ರಾಮದಲ್ಲಿ ಅಮೃತ್ ಪೌಲ್ ಅವರಿಗೆ ಒಟ್ಟು 3.15 ಎಕರೆ ಜಮೀನು‌ ಕೊಡಿಸಿದ್ದೆ. ಅಂದಿನಿಂದ ಅವರು ಸ್ನೇಹಿತರಾಗಿದ್ದರು. ಅದನ್ನು ಹೊರತುಪಡಿಸಿ ಯಾವುದೇ ವ್ಯಾವಹಾರಿಕ‌ ಸಂಬಂಧ ಇಟ್ಟುಕೊಂಡಿಲ್ಲ. ಸಿಐಡಿ ಅಧಿಕಾರಿಗಳು ನಮ್ಮ ಆಸ್ತಿಯ ಮೂಲ ದಾಖಲೆಗಳನ್ನು ಪರಿಶೀಲಿಸಿದರು. ಸಿಐಡಿ ತನಿಖೆಗೂ ಅಗತ್ಯ ಸಹಕಾರ ನೀಡಿದ್ದೇನೆ. ಮುಂದೆ ವಿಚಾರಣೆಗೆ ಕರೆದರೆ ಹೋಗುತ್ತೇನೆ" ಎಂದು ಹೇಳಿದರು.

"ಪಿಎಸ್ಐ ನೇಮಕಾತಿ ದೊಡ್ಡ ಹಗರಣ. ಇದರಲ್ಲಿ ಯಾರೇ ತಪ್ಪಿತಸ್ಥರಿರಲಿ ಶಿಕ್ಷೆ ಆಗಬೇಕು. ತಾಲೂಕಿನ ಜನಪ್ರತಿನಿಧಿಯೇ ನಮ್ಮ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ. ಅವರಿಗೆ ಸೂಕ್ತ ಸಮಯದಲ್ಲಿ ಉತ್ತರಿಸುವೆ" ಎಂದು ಸ್ಥಳೀಯ ಶಾಸಕರ ಹೆಸರು ಹೇಳದೆ ಎಚ್ಚರಿಕೆ ನೀಡಿದರು.

"ಭ್ರಷ್ಟಾಚಾರ ಹಾಗೂ ಇಂಥ ದೊಡ್ಡ ಹಗರಣಗಳು ನಿಲ್ಲಬೇಕಾದರೆ ಮೊದಲು ಪ್ರಜೆಗಳು ಪ್ರಜ್ಞಾವಂತರಾಗಬೇಕು. ಆಗಷ್ಟೇ ಭ್ರಷ್ಟಾಚಾರಕ್ಕೆ ತಿಲಾಂಜಲಿ ಇಡಬಹುದು ಎಂದು ಅಭಿಪ್ರಾಯಪಟ್ಟರು. ಬೇನಾಮಿ ಆಸ್ತಿ‌ ಸಂಪಾದನೆ ಮಾಡಿದ್ದಾರೆ ಎಂದು ಆರೋಪಿಸಿ ವರದಿ‌ ಮಾಡಿರುವ ಖಾಸಗಿ ವಾಹಿನಿಯವರು ಸತ್ಯಾಸತ್ಯತೆ ತಿಳಿದು ವರದಿ‌ ಮಾಡಬೇಕು. ಇಲ್ಲವಾದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಲಾಗುವುದು" ಎಂದು ಎಚ್ಚರಿಸಿದರು.

ಇದನ್ನೂ ಓದಿ: ಪಿಎಸ್ಐ ನೇಮಕ ಅಕ್ರಮ: ಬಂಧಿತ ಅಮೃತ್ ಪಾಲ್ ಆಪ್ತರ ಮನೆಗಳ ಮೇಲೆ ಸಿಐಡಿ ದಾಳಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.