ETV Bharat / city

ಆಶ್ರಯ ನೀಡಿದ್ದ ಸ್ನೇಹಿತನ ಪತ್ನಿ ಜೊತೆಯೇ ಲವ್ವಿಡವ್ವಿ... ಹೆಂಡ್ತಿಯ ಮೋಸದ ಜಾಲಕ್ಕೆ ಆಟೋ ಡ್ರೈವರ್ ಬಲಿ​! - ಪ್ರಿಯತಮೆ ಜತೆಗೂಡಿ ಆಶ್ರಯ ನೀಡಿದ್ದ ಸ್ನೇಹಿತನ ಹತ್ಯೆ

ಆಶ್ರಯ ನೀಡಿದ್ದ ಸ್ನೇಹಿತನನ್ನೇ ಪ್ರಿಯತಮೆಯೊಂದಿಗೆ ಸಂಚು ರೂಪಿಸಿ ಕೊಲೆ ಮಾಡಿದ ಆರೋಪದಡಿ ಮೂವರು ಆರೋಪಿಗಳನ್ನು ಕೆಂಪೇಗೌಡ ನಗರ ಪೊಲೀಸರು ಬಂಧಿಸಿದ್ದಾರೆ. ಸಂಜಯ್, ಸುಬ್ರಮಣಿ ಹಾಗೂ ರಂಜಿತಾ ಬಂಧಿತ ಆರೋಪಿಗಳು.

Bangalore
ಬಂಧಿತ ಆರೋಪಿಗಳು
author img

By

Published : Aug 4, 2021, 11:03 PM IST

Updated : Aug 6, 2021, 5:08 PM IST

ಬೆಂಗಳೂರು: ಸ್ನೇಹ ಎಂಬ ಪದಕ್ಕೆ ಕಳಂಕ ತಂದ ರಾಕ್ಷಸ‌ ಮತ್ತು ಪ್ರೀತಿಸಿ ಜೊತೆಯಾದವಳ ಕರಾಳ ಮುಖದ ಹಿಂದಿನ ಕಹಾನಿಯಿದು. ಜೀವಕ್ಕೆ ಜೀವ ಎಂದು ಜೊತೆಯಾದವಳನ್ನ ಜೀವದ ಗೆಳೆಯನೇ ಬುಟ್ಟಿಗೆ ಹಾಕಿಕೊಂಡು ಸ್ನೇಹಿತನನ್ನು ಬೀದಿ ಹೆಣ ಮಾಡಿದ್ದಾನೆ.

ಆಶ್ರಯ ನೀಡಿದ್ದ ಸ್ನೇಹಿತನನ್ನೇ ಪ್ರಿಯತಮೆಯೊಂದಿಗೆ ಸಂಚು ರೂಪಿಸಿ ಕೊಲೆ ಮಾಡಿದ ಆರೋಪದಡಿ ಮೂವರು ಆರೋಪಿಗಳನ್ನು ಕೆಂಪೇಗೌಡ ನಗರ ಪೊಲೀಸರು ಬಂಧಿಸಿದ್ದಾರೆ. ಕಾರ್ತಿಕ್ ಕೊಲೆಯಾದ ದುರ್ದೈವಿ ಸಂಜಯ್, ಸುಬ್ರಮಣಿ ಹಾಗೂ ರಂಜಿತಾ ಬಂಧಿತ ಆರೋಪಿಗಳು.

ಪ್ರೀತಿಸಿ ಮದುವೆಯಾದ ಕಾರ್ತಿಕ್ ಹಾಗೂ ರಂಜಿತಾ ದಂಪತಿಗೆ 5 ವರ್ಷಗಳ ದಾಂಪತ್ಯದ ಸಂಕೇತವಾಗಿ ಮುದ್ದಾದ ಹೆಣ್ಣುಮಗು ಇದೆ. ಆದರೆ ಅಷ್ಟರಲ್ಲೇ ಈ ಸುಂದರ ಸಂಸಾರಕ್ಕೆ ಸ್ನೇಹ, ಪ್ರೀತಿ, ವಿಶ್ವಾಸದ ಮುಖವಾಡ ಧರಿಸಿ ಎಂಟ್ರಿ ಕೊಟ್ಟಿದ್ದವನು ಕಾರ್ತಿಕ್ ಸ್ನೇಹಿತ ಸಂಜಯ್.

ಅದೇ ಸಂಜಯ್ ಇದೀಗ ಆಶ್ರಯ ನೀಡಿದ್ದ ಸ್ನೇಹಿತನ ಸಾವಿಗೆ ಕಾರಣವಾಗಿದ್ದಾನೆ. ಎಲ್ಲದಕ್ಕೂ ಕಾರಣ ಮತ್ತು ಸಾಥ್ ನೀಡಿದ್ದು, ಇದೇ ಸುಂದರಿ ಹೆಂಡತಿಯ ಕರಾಳ ಮುಖ ಎನ್ನುವುದು ವಿಪರ್ಯಾಸ.

ಮೋಸದ ಜಾಲಕ್ಕೆ ಬಲಿ

ಪತ್ನಿ ಮತ್ತು ಸ್ನೇಹಿತ ಇಬ್ಬರಿಗೂ ಕಣ್ಣಿಗೆ ಕಣ್ಣಾಗಿದ್ದ ಕಾರ್ತಿಕ್ ಪತ್ನಿ ಮತ್ತು ಸ್ನೇಹಿತನ ಮೋಸದ ಜಾಲಕ್ಕೆ ಬಲಿಯಾಗಿದ್ದಾನೆ‌. ಕೋಲಾರ ಮೂಲದ ಕಾರ್ತಿಕ್ ಮತ್ತು ರಂಜಿತಾ ಪ್ರೀತಿಸಿ ಸಾಕಷ್ಟು ಏರುಪೇರುಗಳ ಬಳಿಕ ಮದುವೆಯಾಗಿದ್ದರು. ಆಟೋ ಓಡಿಸಿಕೊಂಡಿದ್ದ ಕಾರ್ತಿಕ್ ಕೆಂಪೇಗೌಡನಗರ ವ್ಯಾಪ್ತಿಯ ಬಂಡಿಮಾಕಾಳಮ್ಮ ದೇವಸ್ಥಾನದ ಬಳಿ ಬಾಡಿಗೆ ಮನೆ ಮಾಡಿಕೊಂಡು ವಾಸವಿದ್ದ.

ಸ್ನೇಹ ಜೀವಿಯಾಗಿದ್ದ ಆತನಿಗೆ ಸ್ನೇಹಿತರ ಬಳಗವೂ ದೊಡ್ಡದು. ಕಾರಣ ಹಿಂದೊಮ್ಮೆ ಕಾರ್ತಿಕ್ ಮನೆಯವರಿಂದ ದೂರವಾದಾಗ ಸಾಥ್ ಕೊಟ್ಟಿದ್ದೇ ಆತನ ಆಟೋ ಚಾಲಕ ಸ್ನೇಹಿತರು. ಹೀಗಿರುವಾಗಲೇ ಕಾರ್ತಿಕ್ ಬಳಿ ಗೋಳು ಹೇಳಿಕೊಂಡು ಬಂದಿದ್ದ ಸಂಜಯ್ ಆತನ ಮನೆ ಸೇರಿದ್ದ.

ಮದುವೆಯಾಗಿ ಹೆಂಡತಿಯಿಂದ ದೂರವಿದ್ದ ಸಂಜಯ್​​ಗೆ ಕಾರ್ತಿಕ್ ಆಶ್ರಯ ನೀಡಿದ್ದ. ಇದ್ದ ಆಟೋವನ್ನ ಬೆಳಗ್ಗೆ ಸಂಜಯ್ ಓಡಿಸಿದರೆ ರಾತ್ರಿ ಕಾರ್ತಿಕ್ ಓಡಿಸುತ್ತಿದ್ದ. ರಂಜಿತಾ ಕೂಡಾ ಸಂಜಯ್ ನನ್ನ ಅಣ್ಣಾ ಅಣ್ಣಾ ಎಂದು ಬಾಯ್ತುಂಬ ಕರೆಯುತ್ತಿದ್ದಳು. ಆದರೆ, ಅಸಲಿ ವಿಚಾರವೇ ಬೇರೆಯಿತ್ತು. ಸಂಜಯ್ ಕಾರ್ತಿಕ್ ಮನೆ ಸೇರಿದ್ದೆ ರಂಜಿತಾಳಿಗೋಸ್ಕರ. ಇಬ್ಬರ ನಡುವಿನ ಲವ್ವಿಡವ್ವಿ ಕಾರ್ತಿಕ್ ಕಣ್ತಪ್ಪಿಸಿ ನಡೆಯುತ್ತಲೇ ಇತ್ತು‌.

ಒಂದು ವಾರದ ಹಿಂದೆ ಕಾರ್ತಿಕ್ ನನ್ನ ಪುಸಲಾಯಿಸಿ ಆಟೋದಲ್ಲಿ ಕರೆದೊಯ್ದಿದ್ದ ಸಂಜಯ್ ಕಂಠಪೂರ್ತಿ ಕುಡಿಸಿ ಬಳಿಕ ಆತನ ಪತ್ನಿ ರಂಜಿತಾಗೆ ಕರೆ ಮಾಡಿ ಕಾರ್ತಿಕ್ ನನ್ನ ಮುಗಿಸುತ್ತಿರುವುದಾಗಿ ಹೇಳಿದ್ದಾನೆ. ಕೊಂಚವೂ ಗಾಬರಿಗೊಳ್ಳದ ರಂಜಿತಾ ಸಹ ಏನಾದರೂ ಮಾಡು ಎಂದಿದ್ದಳಂತೆ.

ಅಷ್ಟೆ, ಅಮಲಿನಲ್ಲಿ ಕಾರ್ತಿಕ್ ತಲೆಗೆ ಸಂಜಯ್ ರಾಡ್ ನಿಂದ ಹೊಡೆದು ಕೊಲೆಗೈದಿದ್ದಾನೆ‌. ಬಳಿಕ ಕಾರ್ತಿಕ್ ಶವವನ್ನ ಮೂಟೆ ಕಟ್ಟಿ ಆರ್‌ಆರ್ ನಗರ ಠಾಣಾ ವ್ಯಾಪ್ತಿಯ ರಾಜರಾಜೇಶ್ವರಿ ಮೆಡಿಕಲ್ ಕಾಲೇಜು ಹಿಂಭಾಗದ ಕೆರೆಗೆ ತಂದು ಎಸೆದಿದ್ದಾನೆ‌. ಇತ್ತ 2 ದಿನದ ಬಳಿಕ ರಂಜಿತಾ ಕಾರ್ತಿಕ್​​ ಓಡಿಸುತ್ತಿದ್ದ ಆಟೋ ಮಾಲೀಕ ಸೇರಿದಂತೆ ಆತನ ಸ್ನೇಹಿತರ ಮೇಲೆಯೇ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದಾಳೆ.

ಒಂದು ವಾರದ ಬಳಿಕ ಕಾರ್ತಿಕ್ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗುತ್ತಿದ್ದಂತೆ ಅಲರ್ಟ್ ಆದ ಕಾರ್ತಿಕ್ ಸ್ನೇಹಿತರು ಸಂಜಯ್​​ನನ್ನ ಹಿಡಿದು ವಿಚಾರಿಸಿದ್ದಾರೆ. ತಾನೇನೂ ಮಾಡೇ ಇಲ್ಲ ತನಗೇನೂ ಗೊತ್ತೇ ಇಲ್ಲ, ಕಾರ್ತಿಕ್ ನನ್ನ ಸಹೋದರನಂತೆ ಎನ್ನುತ್ತಿದ್ದ ಸಂಜಯನನ್ನ ಎಳೆದು ತಂದು ಪೊಲೀಸರಿಗೆ ಒಪ್ಪಿಸಿದ್ದಾರೆ. ಯಾವಾಗ ಪೊಲೀಸರು ತಮ್ಮದೇ ಶೈಲಿಯಲ್ಲಿ ಕೇಳಿದ್ರೋ ಸಂಜಯ್ ಸಂಪೂರ್ಣ ಕಥೆ ಬಿಚ್ಚಿಟ್ಟಿದ್ದಾನೆ‌. ಮಾತ್ರವಲ್ಲ ಹತ್ಯೆಗೆ ಸಾಥ್ ನೀಡಿದ ಆರೋಪದಡಿಯಲ್ಲಿ ಕಾರ್ತಿಕ್ ಪತ್ನಿ ರಂಜೀತಾ, ಸಂಜಯ್ ಸಹೋದರ ಸುಬ್ರಮಣಿಯನ್ನ ಪೊಲೀಸರು ಬಂಧಿಸಿದ್ದಾರೆ.

Last Updated : Aug 6, 2021, 5:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.