ETV Bharat / city

ನಿಲ್ಲದ ಮಳೆ: ಐತಿಹಾಸಿಕ ದೇವನಹಳ್ಳಿ ಕೋಟೆಯ ಕಲ್ಲಿನ ಗೋಡೆ ಕುಸಿತ

author img

By

Published : Nov 19, 2021, 10:49 AM IST

ನಿರಂತರ ಮಳೆಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಐತಿಹಾಸಿಕ ಕೋಟೆಯ(Historical Devanahalli monument fort) ಒಂದು ಭಾಗ ಸಂಪೂರ್ಣ ಕುಸಿದು ಬಿದ್ದಿದೆ.

Devanahalli monument fort wall collapsed
ಐತಿಹಾಸಿಕ ದೇವನಹಳ್ಳಿ ಕೋಟೆಯ ಕಲ್ಲಿನ ಗೋಡೆ ಕುಸಿತ

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದ ದೇವನಹಳ್ಳಿ ಐತಿಹಾಸಿಕ ಕೋಟೆಯ (Historical Devanahalli monument fort) ಒಂದು ಭಾಗ ಸಂಪೂರ್ಣ ಕುಸಿದು ಬಿದ್ದಿದೆ.

ಕೆಲವು ದಿನಗಳಿಂದ ಎಡಬಿಡದೇ ಸುರಿಯುತ್ತಿರುವ ಮಳೆಯಿಂದ ಇಂದು ಮುಂಜಾನೆ ದೇವನಹಳ್ಳಿ ಕೋಟೆಯ ಬುರುಜು ಸಂಪೂರ್ಣ ಕುಸಿದಿದೆ. ನಿನ್ನೆ(ಗುರುವಾರ) ಸಹ ಕೋಟೆಯ ರಕ್ಷಣೆಗೆಂದು ಕಟ್ಟಲಾಗಿದ ರಕ್ಷಣಾ ಗೋಡೆ ಕುಸಿದು ಬಿದ್ದಿತ್ತು. ಇಂದು(ಶುಕ್ರವಾರ) ಕೋಟೆಯ ಬುರುಜು ಕುಸಿದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಕ್ರಿ.ಶ. 1501ರಲ್ಲಿ ಆವತಿ ಪಾಳೇಗಾರರಾದ ಮಲ್ಲಭೈರೇಗೌಡ ಮಣ್ಣಿನ ಕೋಟೆಯನ್ನ ಕಟ್ಟಿದ್ದರು. ನಂತರ 1747ರಲ್ಲಿ ಮೈಸೂರು ಸಾಮ್ರಾಜ್ಯದ ಅಧೀನಕ್ಕೆ ದೇವನಹಳ್ಳಿ ಕೋಟೆ ಒಳಪಟ್ಟಿತ್ತು. ಆಗ ಹೈದರಾಲಿ ಕಲ್ಲಿನ ಕೋಟೆಯನ್ನಾಗಿ ಭಧ್ರಪಡಿಸಿದ್ದ ಎಂಬುದು ಇತಿಹಾಸ.

ಕೋಟೆ ಸಂರಕ್ಷಣೆ ಮಾಡುವಂತೆ ಒತ್ತಾಯ:

ಐತಿಹಾಸಿಕ ದೇವನಹಳ್ಳಿ ಕೋಟೆ (Devanahalli fort)ರಕ್ಷಣೆ ಇಲ್ಲದೇ ಅವನತಿಯತ್ತ ಸಾಗಿದೆ. ಪ್ರಾಚ್ಯ ವಸ್ತು ಇಲಾಖೆಯಿಂದ ಕೋಟೆಯ ರಕ್ಷಣೆ ಕಾರ್ಯವಾಗಿಲ್ಲ. ಕೋಟೆಯ ನಿರ್ವಹಣೆ ಮಾಡಲು ಸಿಂಬ್ಬದಿ ಇಲ್ಲ. ಗಿಡ ಗಂಟಿಗಳು ಬೆಳೆದು ಕೋಟೆ ಬೀಳಲು ಕಾರಣವಾಗಿದೆ. 500 ವರ್ಷಗಳ ಐತಿಹಾಸಿಕ ಕೋಟೆಯನ್ನ ಸಂರಕ್ಷಣೆ ಮಾಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಮುಂದುವರಿದ ಮಳೆಯ ಆರ್ಭಟ: ಇಂದು ಜಿಲ್ಲಾಡಳಿತಗಳ ಜೊತೆ ಸಿಎಂ ಸಭೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.