ETV Bharat / city

ಪದವಿಪೂರ್ವ ಕೋರ್ಸ್‌ಗಳಿಗೆ ಕನ್ನಡ ಕಡ್ಡಾಯ : ಹೈಕೋರ್ಟ್​​​ ಸಾಂವಿಧಾನಿಕ ಸಿಂಧುತ್ವ ಪರಿಶೀಲನೆ

ಅಲ್ಪಸಂಖ್ಯಾತರು ಮತ್ತು ಭಾಷಾ ಅಲ್ಪಸಂಖ್ಯಾತರ ಹಕ್ಕು ಮತ್ತು ಇತರೆ ವಿದ್ಯಾರ್ಥಿಗಳು ಅಧ್ಯಯನಕ್ಕಾಗಿ ತಮ್ಮ ಆಯ್ಕೆಯ ಭಾಷೆಗಳನ್ನು ಆರಿಸಿಕೊಳ್ಳಬೇಕು ಎಂದು ಅರ್ಜಿದಾರರು ವಾದಿಸಿದರು. ಇದಲ್ಲದೆ 4000 ಸಂಸ್ಕೃತ, ತೆಲುಗು, ತಮಿಳು ಹಾಗೂ ಇನ್ನಿತರೆ ಭಾಷೆ ಅಧ್ಯಾಪಕರ ಉದ್ಯೋಗ ಕಳೆದುಕೊಳ್ಳಬೇಕಾಗುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ವಾದ ಮಂಡಿಸಲಾಯಿತು..

highcourt-says-to-check-constitutional-validity-of-kannada-compulsory
ಹೈಕೋರ್ಟ್
author img

By

Published : Oct 8, 2021, 8:58 PM IST

ಬೆಂಗಳೂರು : ರಾಷ್ಟ್ರೀಯ ಶಿಕ್ಷಣ ನೀತಿ (NEP) -2020 ಅನ್ನು ಜಾರಿಗೊಳಿಸುವ ನೆಪದಲ್ಲಿ 2021-22ರ ಶೈಕ್ಷಣಿಕ ವರ್ಷದಿಂದ ರಾಜ್ಯದ ಪದವಿಪೂರ್ವ ಕೋರ್ಸ್‌ಗಳಿಗೆ ಕನ್ನಡವನ್ನು ಕಡ್ಡಾಯ ಭಾಷೆಯನ್ನಾಗಿಸುವ ಸಾಂವಿಧಾನಿಕ ಸಿಂಧುತ್ವವನ್ನು ಪರಿಶೀಲಿಸುವುದಾಗಿ ರಾಜ್ಯ ಹೈಕೋರ್ಟ್ ತಿಳಿಸಿದೆ.

ಅರ್ಜಿದಾರರು ಆಗಸ್ಟ್ 7, 2021 ಮತ್ತು ಸೆಪ್ಟೆಂಬರ್ 15, 2021ರಂದು ಹೊರಡಿಸಿದ ಸರ್ಕಾರಿ ಆದೇಶಗಳ (ಜಿಒ) ಕಾನೂನುಬದ್ಧತೆಯನ್ನು ಪ್ರಶ್ನಿಸಿದ್ದು, ಕನ್ನಡ ಭಾಷೆಯನ್ನ ಪದವಿ ತರಗತಿಗಳಲ್ಲಿ ಕಡ್ಡಾಯವಾಗಿ ಅಧ್ಯಯನ ಮಾಡುವ ಎರಡು ಭಾಷೆಗಳಲ್ಲಿ ಒಂದನ್ನು 12ನೇ ತರಗತಿಯವರೆಗೆ ಕಲಿತ ಭಾಷೆಗಳನ್ನು ಲೆಕ್ಕಿಸದೆ ಮಾಡಲಾಗಿದೆ.

ಅವರು ಬಂದಿರುವ ರಾಜ್ಯ ಮತ್ತು ಅವರ ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆ ಪರಿಗಣಿಸಿಲ್ಲ ಎಂದು ಕರ್ನಾಟಕ ವಿಭಾಗದ ಸಂಸ್ಕೃತ ಭಾರತಿ ಹಾಗೂ ಇನ್ನಿತರೆ ಅರ್ಜಿದಾರರು ಪ್ರಶ್ನಿಸಿದರು. NEP-2020 ಉನ್ನತ ಶಿಕ್ಷಣ ಕೋರ್ಸ್‌ಗಳಿಗೆ ಯಾವುದೇ ಕಡ್ಡಾಯ ಭಾಷೆಯ ಮಾನದಂಡಗಳನ್ನು ನಿರ್ದಿಷ್ಟಪಡಿಸಿಲ್ಲ.

ಎನ್ಇಪಿ-2020 ಅನುಷ್ಠಾನದ ಕುರಿತು ಕಾರ್ಯಪಡೆ ಮತ್ತು ಉಪ ಸಮಿತಿಗಳು ಸಲ್ಲಿಸಿದ ಶಿಫಾರಸುಗಳು ಮತ್ತು ವರದಿಯು ಪದವಿ ಕೋರ್ಸ್‌ಗಳಿಗೆ ಕನ್ನಡ ಕಡ್ಡಾಯ ಭಾಷೆಯನ್ನಾಗಿಸುವ ಯಾವುದೇ ಶಿಫಾರಸನ್ನು ಒಳಗೊಂಡಿಲ್ಲ.

NEPಗೆ ಕಡ್ಡಾಯ ಭಾಷೆ ವಿರುದ್ಧ : NEP-2020 ಒಳಗೊಳ್ಳುವಿಕೆ ಮತ್ತು ಶಿಕ್ಷಣದ ಪ್ರವೇಶವನ್ನು ಉತ್ತೇಜಿಸಲು ಆಯ್ಕೆ ಆಧಾರಿತ ವ್ಯವಸ್ಥೆಯನ್ನು ನೀಡಲು ಉದ್ದೇಶಿಸಿದ್ದರೂ,NEP-2020 ಅನ್ನು ಅನುಷ್ಠಾನಗೊಳಿಸುವ ನೆಪದಲ್ಲಿ ನೀಡಲಾದ GOಗಳು ಆಯ್ಕೆ ಆಧಾರಿತ ಕ್ರೆಡಿಟ್ ವ್ಯವಸ್ಥೆಯನ್ನು ತೆಗೆದು ಹಾಕುತ್ತದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಪದವಿ ಕೋರ್ಸ್‌ಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಅಧ್ಯಯನ ಮಾಡುವ ಷರತ್ತು ಭಾರತದ ಸಂವಿಧಾನದ ಕಲಂ 14, 19, 21, 29 ಮತ್ತು 30ಕ್ಕೆ ವಿರುದ್ಧವಾಗಿದೆ. ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತಾರೆ.

ಅಲ್ಪಸಂಖ್ಯಾತರು ಮತ್ತು ಭಾಷಾ ಅಲ್ಪಸಂಖ್ಯಾತರ ಹಕ್ಕು ಮತ್ತು ಇತರೆ ವಿದ್ಯಾರ್ಥಿಗಳು ಅಧ್ಯಯನಕ್ಕಾಗಿ ತಮ್ಮ ಆಯ್ಕೆಯ ಭಾಷೆಗಳನ್ನು ಆರಿಸಿಕೊಳ್ಳಬೇಕು ಎಂದು ಅರ್ಜಿದಾರರು ವಾದಿಸಿದರು. ಇದಲ್ಲದೆ 4000 ಸಂಸ್ಕೃತ, ತೆಲುಗು, ತಮಿಳು ಹಾಗೂ ಇನ್ನಿತರೆ ಭಾಷೆ ಅಧ್ಯಾಪಕರ ಉದ್ಯೋಗ ಕಳೆದುಕೊಳ್ಳಬೇಕಾಗುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ವಾದ ಮಂಡಿಸಲಾಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.