ದೇವನಹಳ್ಳಿ(ಬೆಂಗಳೂರು): ಪ್ರಯಾಣಿಕರಿಗೆ ಅತ್ಯುತ್ತಮ ಸೇವೆ ನೀಡುವ ದೃಷ್ಟಿಯಿಂದ ಕೆಂಪೇಗೌಡ ವಿಮಾನ ನಿಲ್ದಾಣ ವಿಶ್ವದಲ್ಲೇ ಅತ್ಯುತ್ತಮ ಪ್ರಯಾಣಿಕರ ಲಾಂಝ್ ಅನ್ನು ನಿರ್ಮಿಸಿದೆ. ಇದರಿಂದ ದೇಶಿಯ ಮತ್ತು ವಿದೇಶಿ ಪ್ರಯಾಣಿಕರಿಗೆ ಐಷಾರಾಮಿ ಸೌಲಭ್ಯ ಸಿಗಲಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾರಂಭವಾಗಿ 14 ವರ್ಷ ಕಳೆದಿವೆ. ಹಲವು ದಾಖಲೆಗಳೊಂದಿಗೆ ವಿಶ್ವದಲ್ಲೇ ಪ್ರಯಾಣಿಕ ಸ್ನೇಹಿ ಎಂಬ ಹೆಗ್ಗಳಿಕೆ ಪಡೆದಿದೆ. ಇದರ ನಡುವೆ ಇದೀಗ ವಿಶ್ವದಲ್ಲೇ ಹೊಸ ವಿನ್ಯಾಸದ ಹೈಟೆಕ್ ಲಾಂಝ್ ಅನಾವರಣ ಮಾಡುವ ಮೂಲಕ ಮತ್ತಷ್ಟು ಮೆಚ್ಚುಗೆಗೆ ಪಾತ್ರವಾಗಲಿದೆ.
ಕೆಐಎ ದೇಶಿಯ ಮತ್ತು ವಿದೇಶಿ ಪ್ರಯಾಣಿಕರಿಗಾಗಿ ಎರಡು ಭಿನ್ನ- ವಿಭಿನ್ನ ಐಷಾರಾಮಿಯ ಎರಡು ಹೊಸ ಲಾಂಝ್ಗಳನ್ನ ಅನಾವರಣ ಮಾಡಿದೆ. ವಿಶ್ವದಲ್ಲೇ ಅತ್ಯುತ್ತಮ ಲಾಂಝ್ ಇದಾಗಿದ್ದು, ಐಷಾರಾಮಿ ಸೌಲಭ್ಯ ಈ ಲಾಂಝ್ಗಳಲ್ಲಿ ಲಭ್ಯವಿದೆ. ಬೆಂಗಳೂರಿನ ಟ್ರಂಕ್ ಡಯಲ್ ನಂಬರ್ 180 ಹೆಸರನ್ನೇ ಈ ಲಾಂಝ್ ಗೆ ಇಡಲಾಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.
ಇದನ್ನೂ ಓದಿ: ಎರಡು ಸಮಾನಾಂತರ ರನ್ ವೇ ಹೊಂದಿರುವ ದಕ್ಷಿಣ ಭಾರತದ ಮೊದಲ ವಿಮಾನ ನಿಲ್ದಾಣ ಕೆಐಎ