ETV Bharat / city

ಚುನಾವಣಾ ವೆಚ್ಚದ ವಿವರ ಸಲ್ಲಿಸದ ಪುರಸಭೆ ಸದಸ್ಯರ ಅನರ್ಹತೆ ಎತ್ತಿಹಿಡಿದ ಹೈಕೋರ್ಟ್ - ಪುರಸಭೆ ಸದಸ್ಯರ ಅನರ್ಹತೆ ಎತ್ತಿಹಿಡಿದ ಹೈಕೋರ್ಟ್

ಚುನಾವಣಾ ವೆಚ್ಚದ ಕುರಿತು ಚುನಾವಣಾಧಿಕಾರಿಗೆ ನಿಖರವಾದ ಲೆಕ್ಕ ನೀಡದೇ ಇದ್ದರೆ ಕರ್ನಾಟಕ ಮುನಿಸಿಪಾಲಿಟೀಸ್ ಕಾಯ್ದೆ-1964ರ ಪ್ರಕಾರ ಚುನಾವಣಾ ಆಯೋಗವು ಸದಸ್ಯರನ್ನು 3 ವರ್ಷಗಳ ಕಾಲ ಅನರ್ಹಗೊಳಿಸಬಹುದು ಎಂದು ಹೈಕೋರ್ಟ್ ತೀರ್ಪು ನೀಡಿದೆ.

ಹೈಕೋರ್ಟ್
ಹೈಕೋರ್ಟ್
author img

By

Published : Apr 25, 2022, 8:46 PM IST

ಬೆಂಗಳೂರು: ಚುನಾವಣೆಯಲ್ಲಿ ಪಾರದರ್ಶಕತೆ, ಶುದ್ಧತೆ ಹಾಗೂ ಉತ್ತರದಾಯಿತ್ವ ತರುವ ನಿಟ್ಟಿನಲ್ಲಿ ಚುನಾವಣಾ ವೆಚ್ಚದ ಕುರಿತು ಚುನಾವಣಾಧಿಕಾರಿಗೆ ನಿಖರವಾದ ಲೆಕ್ಕ ನೀಡುವುದು ಕಡ್ಡಾಯ. ಇಲ್ಲದಿದ್ದರೆ ಕರ್ನಾಟಕ ಮುನಿಸಿಪಾಲಿಟೀಸ್ ಕಾಯ್ದೆ-1964ರ ಪ್ರಕಾರ ಚುನಾವಣಾ ಆಯೋಗವು ಸದಸ್ಯರನ್ನು 3 ವರ್ಷಗಳ ಕಾಲ ಅನರ್ಹಗೊಳಿಸಬಹುದು ಎಂದು ಹೈಕೋರ್ಟ್ ತೀರ್ಪು ನೀಡಿದೆ.

ಆನೇಕಲ್ ಪುರಸಭೆ ಸದಸ್ಯ ಸ್ಥಾನದಿಂದ ತಮ್ಮನ್ನು ಅನರ್ಹಗೊಳಿಸಿರುವ ಚುನಾವಣಾ ಆಯೋಗದ ಆದೇಶ ರದ್ದುಪಡಿಸಬೇಕು ಎಂದು ಕೋರಿ ಕೆ. ಶ್ರೀನಿವಾಸ್, ಎಸ್ ಲಲಿತಾ ಹಾಗೂ ಸಿ.ಕೆ ಹೇಮಲತಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ಪೀಠ ಈ ತೀರ್ಪು ಪ್ರಕಟಿಸಿದೆ.

ಪೀಠ ತನ್ನ ತೀರ್ಪಿನಲ್ಲಿ, ಚುನಾವಣೆಯಲ್ಲಿ ಪಾರದರ್ಶಕತೆ ಹಾಗೂ ಉತ್ತರದಾಯಿತ್ವ ತರಲು ಚುನಾವಣಾ ವೆಚ್ಚಕ್ಕೆ ಸಂಬಂಧಿಸಿದಂತೆ ನಿಖರ ಲೆಕ್ಕ ಇಡಲು ಕಾನೂನುಗಳನ್ನು ರೂಪಿಸಲಾಗಿದೆ. ಹಾಗೆಯೇ ಸಾರ್ವಜನಿಕ ನಂಬಿಕೆಯನ್ನು ಕಾಪಾಡಲು ಚುನಾವಣಾ ವೆಚ್ಚಕ್ಕೆ ಸಂಬಂಧಿಸಿದಂತೆ ಲೆಕ್ಕಗಳನ್ನಿಟ್ಟು, ಆಯೋಗಕ್ಕೆ ಸಲ್ಲಿಸಬೇಕಾಗುತ್ತದೆ. ಇದನ್ನು ಪಾಲಿಸದೇ ಅನರ್ಹಗೊಂಡಾಗ ಕ್ಷುಲ್ಲಕ ಕಾರಣಗಳನ್ನು ನೀಡಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.

ಕರ್ನಾಟಕ ಮುನಿಸಿಪಾಲಿಟೀಸ್ ಆಕ್ಟ್- 1964 ರ ಸೆಕ್ಷನ್ 16C ಪ್ರಕಾರ ಚುನಾಯಿತ ಸದಸ್ಯರು ಚುನಾವಣಾ ವೆಚ್ಚದ ನಿಖರ ಮಾಹಿತಿಯನ್ನು 30 ದಿನಗಳಲ್ಲಿ ಆರ್.ಒಗೆ ಸಲ್ಲಿಸದಿದ್ದರೆ ಅನರ್ಹಗೊಳಿಸಬಹುದಾಗಿದೆ. 1951 ರ ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್ 77(1), 78 ಹಾಗೂ 1961ರ ಚುನಾವಣಾ ನಡವಳಿಕೆ ನಿಯಮ 61 ಪ್ರಕಾರವೂ ವೆಚ್ಚದ ವಿವರ ಸಲ್ಲಿಸಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟು ಅರ್ಜಿದಾರರ ಮನವಿ ತಿರಸ್ಕರಿಸಿದೆ.

ಸ್ವಾತಂತ್ರ್ಯ ಹೋರಾಟಗಾರನ ಜೈಲು ಡೈರಿ ಉಲ್ಲೇಖ: ತೀರ್ಪಿನಲ್ಲಿ ಸ್ವಾತಂತ್ರ್ಯ ಹೋರಾಟಗಾರ ಸಿ. ರಾಜಗೋಪಾಲಾಚಾರಿ 1922ರಲ್ಲಿ ಜೈಲಿನಲ್ಲಿದಾಗ ಡೈರಿಯಲ್ಲಿ ಬರೆದ ಸಾಲುಗಳನ್ನೂ ನ್ಯಾಯಮೂರ್ತಿ ದೀಕ್ಷಿತ್ ಉಲ್ಲೇಖಿಸಿದ್ದಾರೆ. ''ಚುನಾವಣೆಗಳು ಮತ್ತು ಅವರ ಭ್ರಷ್ಟಾಚಾರ, ಅನ್ಯಾಯ, ಸಂಪತ್ತಿನ ದಬ್ಬಾಳಿಕೆ, ಅದಕ್ಷ ಆಡಳಿತ ನಮಗೆ ಸ್ವಾತಂತ್ರ್ಯ ಸಿಕ್ಕ ನಂತರವೂ ನಮ್ಮ ಬದುಕನ್ನು ನರಕವಾಗಿಸುತ್ತವೆ'' ಎಂಬ ಮಾತನ್ನು ತೀರ್ಪಿನಲ್ಲಿ ವಿಶ್ಲೇಷಿಸಿದ್ದಾರೆ.

ಹಾಗೆಯೇ, ಭಾರತ ಕಾನೂನು ಆಯೋಗ ಚುನಾವಣಾ ಸುಧಾರಣೆಗೆ ಸಂಬಂಧಿಸಿದಂತೆ 2015ರ ವರದಿಯಲ್ಲಿ ಉಲ್ಲೇಖಿಸಿರುವ ''ಹಣವು ಚುನಾವಣೆಗಳಲ್ಲಿ ದೊಡ್ಡ ಪಾತ್ರ ವಹಿಸುತ್ತಿದೆ. ಚುನಾವಣೆಯ ಪಾವಿತ್ರ್ಯತೆಯನ್ನು ಹಾಳು ಮಾಡುತ್ತಿದೆ'' ಎಂಬ ಅಂಶವನ್ನೂ ನಮೂದಿಸಿದ್ದಾರೆ.

ಪ್ರಕರಣದ ಹಿನ್ನೆಲೆ: 2019ರಲ್ಲಿ ಆನೇಕಲ್ ಪುರಸಭೆಗೆ ನಡೆದಿದ್ದ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಕೆಲ ಸದಸ್ಯರು ಚುನಾವಣಾ ವೆಚ್ಚದ ವಿವರ ಸಲ್ಲಿಸದ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗ 2020ರ ಜನವರಿ 27ರಂದು ನೋಟಿಸ್ ಜಾರಿ ಮಾಡಿತ್ತು.

ಇದಕ್ಕೆ 5 ತಿಂಗಳ ಬಳಿಕ 2020ರ ಜೂನ್ 17ರಂದು ಉತ್ತರಿಸಿದ್ದ ಸದಸ್ಯರು, ಚುನಾವಣೆ ಬಳಿಕ ತಾವು ಜನರ ಸಮಸ್ಯೆಗಳನ್ನು ಬಗೆಹರಿಸುವ ಕೆಲಸಗಳಲ್ಲಿ ಬಿಡುವಿಲ್ಲದೇ ತೊಡಗಿಸಿಕೊಂಡಿದ್ದರಿಂದ ಮಾಹಿತಿ ನೀಡಲು ಸಾಧ್ಯವಾಗಲಿಲ್ಲವೆಂದೂ, ಚುನಾವಣಾಧಿಕಾರಿಗೆ ಮಾಹಿತಿ ನೀಡುವ ಕುರಿತು ತಮಗೆ ತಿಳಿದಿರಲಿಲ್ಲವೆಂದೂ ತಿಳಿಸಿದ್ದರು.

ಕಾರಣಗಳು ಸೂಕ್ತವಿಲ್ಲದ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗ 2021ರ ನವೆಂಬರ್ 15ರಂದು ಲೆಕ್ಕ ಸಲ್ಲಿಸದ ಸದಸ್ಯರನ್ನು ಅನರ್ಹಗೊಳಿಸಿ ಆದೇಶಿಸಿತ್ತು. ಆ ಬಳಿಕ ವಜಾಗೊಂಡ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.

(ಇದನ್ನೂ ಓದಿ: ಗುತ್ತಿಗೆದಾರರಿಗೆ ಬಿಲ್ ಪಾವತಿ ವಿಳಂಬ ಆರೋಪ : ಮತ್ತೆಷ್ಟು ಜನ ಸಾಯಬೇಕೆಂದು ಪ್ರಶ್ನಿಸಿದ ಹೈಕೋರ್ಟ್)

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.