ಬೆಂಗಳೂರು : ಕೋವಿಡ್ ಸೋಂಕಿನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರವನ್ನು ಖಾಸಗಿ ಜಮೀನುಗಳಲ್ಲಿ ಅಥವಾ ಸಂಬಂಧಿಕರ ಫಾರ್ಮ್ಗಳಲ್ಲಿ ನಡೆಸಿದರೆ ಆ ವ್ಯಾಪ್ತಿಯ ಗ್ರಾಮ ಲೆಕ್ಕಾಧಿಕಾರಿಯಿಂದ ದೃಢೀಕರಣ ಪತ್ರ ಪಡೆಯುವುದು ಕಡ್ಡಾಯ ಎಂದು ರಾಜ್ಯ ಸರ್ಕಾರ ಹೈಕೋರ್ಟ್ಗೆ ಸ್ಪಷ್ಟಪಡಿಸಿದೆ.
ಕೋವಿಡ್ ನಿರ್ವಹಣೆ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ಸಲ್ಲಿಸಿರುವ ಪಿಐಎಲ್ಗಳ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕಾ ನೇತೃತ್ವದ ವಿಭಾಗೀಯ ಪೀಠಕ್ಕೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಈ ಸ್ಪಷ್ಟನೆ ನೀಡಿದ್ದಾರೆ.
ಕೋವಿಡ್ನಿಂದ ಯಾವುದೇ ಸೋಂಕಿತ ವ್ಯಕ್ತಿ ಆಸ್ಪತ್ರೆಯಲ್ಲಿ ಮೃತಪಟ್ಟಾಗ ಜನನ ಮತ್ತು ಮರಣ ನೋಂದಣಿ ಕಾಯ್ದೆ ಅನ್ವಯ ನಿಗದಿತ ನಮೂನೆಯಲ್ಲಿ ಸಾವಿಗೆ ಕಾರಣವನ್ನು ದಾಖಲಿಸಬೇಕು. ಇನ್ನು ಮನೆಯಲ್ಲೇ ಸೋಂಕಿತ ವ್ಯಕ್ತಿ ಮೃತಪಟ್ಟಲ್ಲಿ ಖಾಸಗಿ ವೈದ್ಯರು ಸಾವಿಗೆ ಕಾರಣವನ್ನು ನಿಗದಿತ ನಮೂನೆಯ ಪ್ರಮಾಣ ಪತ್ರದಲ್ಲಿ ದಾಖಲಿಸುವುದು ಕಡ್ಡಾಯ ಮಾಡಿದ್ದೇವೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಮೋದಿಯವರ ಗಡ್ಡ ಬೆಳೆದಂತೆ ದೇಶದ ಬಡತನವೂ ಎಲ್ಲೆ ಮೀರಿ ಬೆಳೆಯುತ್ತಿದೆ: ಕಾಂಗ್ರೆಸ್ ಟ್ವೀಟ್ ಟೀಕೆ
ಹಾಗೆಯೇ, ಕೋವಿಡ್ ಸೋಂಕಿನಿಂದ ವ್ಯಕ್ತಿ ಸಾವನ್ನಪ್ಪಿದ ಬಳಿಕ ಅಂತ್ಯಸಂಸ್ಕಾರವನ್ನು ಖಾಸಗಿ ಜಮೀನಿನಲ್ಲಿ ಅಥವಾ ಸಂಬಂಧಿಗಳ ಫಾರ್ಮ್ಗಳಲ್ಲಿ ನಡೆಸಿದ್ದರೆ ಆಸ್ಪತ್ರೆ ವೈದ್ಯರ ಅಥವಾ ಖಾಸಗಿ ವೈದ್ಯರ ಪ್ರಮಾಣ ಪ್ರಮಾಣಪತ್ರದ ಜತೆಗೆ ಗ್ರಾಮ ಲೆಕ್ಕಾಧಿಕಾರಿಯಿಂದಲೂ ದೃಢೀಕರಣ ಪತ್ರ ಪಡೆಯುವುದು ಕಡ್ಡಾಯ. ಹೀಗೆ ವೈದ್ಯರು ಹಾಗೂ ಗ್ರಾಮ ಲೆಕ್ಕಾಧಿಕಾರಿಯಿಂದ ಪಡೆದ ಪ್ರಮಾಣ ಪತ್ರಗಳನ್ನು ಸಲ್ಲಿಸಿಯೇ ಮರಣ ಪ್ರಮಾಣಪತ್ರ ಪಡೆಯಬೇಕೆಂದು ಸರ್ಕಾರ ಮಾರ್ಗಸೂಚಿಯಲ್ಲಿ ಹೇಳಿದೆ.