ETV Bharat / city

ವೃದ್ಧಾಶ್ರಮದಲ್ಲಿ ಕನಿಷ್ಠ ಗುಣಮಟ್ಟ ಇರಬೇಕು: ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

author img

By

Published : Jan 5, 2021, 10:38 PM IST

ಗಿರಿನಗರದ ನವಚೇತನ ವೃದ್ಧಾಶ್ರಮದ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ಪವನ್​​ ಕುಮಾರ್, ನಿರ್ವಹಣೆ ಕೊರತೆಯಿಂದ ವೃದ್ಧಾಶ್ರಮಗಳು ಇತರರಿಗೆ ಆರೋಗ್ಯ ಅಪಾಯ ತರುವ ಪರಿಸ್ಥಿತಿಯಲ್ಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದರು.

High Court
ಹೈಕೋರ್ಟ್​

ಬೆಂಗಳೂರು: ನಗರ ಪ್ರದೇಶಗಳಲ್ಲಿ ಇರುವ ವೃದ್ಧಾಶ್ರಮಗಳ ಕುರಿತು ಸರ್ಕಾರಕ್ಕೆ ವಿವರಣೆ ಕೇಳಿರುವ ಹೈಕೋರ್ಟ್​, ಹಿರಿಯ ನಾಗರಿಕರು ಹಾಗೂ ಪೋಷಕರ ನಿರ್ವಹಣೆ ಹಾಗೂ ಕಲ್ಯಾಣ ಕಾನೂನಿನಡಿ (2007) ವೃದ್ಧಾಶ್ರಮದಲ್ಲಿ ಕನಿಷ್ಠ ಗುಣಮಟ್ಟ ಇರಬೇಕು ಎಂದು ಹೇಳಿದೆ.

ಗಿರಿನಗರದ ನವಚೇತನ ವೃದ್ಧಾಶ್ರಮದ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ಪವನ್​​ ಕುಮಾರ್, ನಿರ್ವಹಣೆ ಕೊರತೆಯಿಂದ ವೃದ್ಧಾಶ್ರಮಗಳು ಇತರರಿಗೆ ಆರೋಗ್ಯ ಅಪಾಯ ತರುವ ಪರಿಸ್ಥಿತಿಯಲ್ಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ, ನಗರದಲ್ಲಿ ಖಾಸಗಿ ವೃದ್ಧಾಶ್ರಮಗಳ ಸಂಖ್ಯೆ ಎಷ್ಟಿದೆ ಎಂದು ಸರ್ಕಾರಕ್ಕೆ ಕೇಳಿದೆ.

ಇದನ್ನೂ ಓದಿ...ಆಲಂ ಪಾಷಾ ಜಮೀನು ಪ್ರಕರಣಕ್ಕೆ ಮರುಜೀವ: ಸಿಎಂ ಬಿಎಸ್​ವೈಗೆ ಮತ್ತೊಂದು ಕಂಟಕ

ವಯೋಸಹಜ ಸೇರಿದಂತೆ ಇತರ ಸಮಸ್ಯೆಗಳಿಂದ ಬಳಲುತ್ತಿರುವ ವೃದ್ಧರು ರಾತ್ರಿ ವೇಳೆ ಹೆಚ್ಚು ಸಮಸ್ಯೆ ಅನುಭವಿಸುತ್ತಿದ್ದಾರೆ. ಅವರಿಂದ ಅಕ್ಕಪಕ್ಕದ ಮನೆಗಳ ನಿವಾಸಿಗಳಿಗೂ ಆತಂಕ ಸೃಷ್ಟಿಯಾಗಿದೆ ಎಂದು ವಕೀಲ ರಘು ಪ್ರಸಾದ್ ವಾದ ಮಂಡಿಸಿದರು. ವೃದ್ಧಾಶ್ರಮ ಸ್ಥಾಪನೆಯಾಗುವುದು ಅವಶ್ಯಕತೆ ಇಲ್ಲ ಎಂಬ ಅಭಿಪ್ರಾಯ ಇರುವುದು ಸಹಜ. ಆದರೆ ವಾಸ್ತವತೆ ವೃದ್ಧಾಶ್ರಮದ ಅಗತ್ಯತೆ ತೋರಿಸುತ್ತಿದೆ. ಆಶ್ರಮದಲ್ಲಿ ಸಾವು ಸಹಜ, ಮೃತರ ಸಂಬಂಧಿಕರು ಬರುವವರೆಗೂ ಅಕ್ಕಪಕ್ಕದ ಮನೆಯವರು ಸಹಿಸಿಕೊಳ್ಳಬೇಕು ಎಂದು ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.

ವೃದ್ಧಾಶ್ರಮದ ಅಗತ್ಯತೆ ಸಾಮಾಜಿಕ ಸಮಸ್ಯೆಯಾಗಿದೆ. ದುರದೃಷ್ಟವಶಾತ್ ಮಕ್ಕಳು ಬೆಳೆದ ಮೇಲೆ ತಂದೆ-ತಾಯಿಯರನ್ನು ಬಿಟ್ಟು ಹೋಗುತ್ತಿದ್ದಾರೆ. ಇದು ದುಃಖಕರ ವಿಷಯ ಎಂದು ನ್ಯಾಯಮೂರ್ತಿ ಶರ್ಮಾ ಬೇಸರ ವ್ಯಕ್ತಪಡಿಸಿದರು. ಸಾವಿನಂಚಿನಲ್ಲಿರುವ ವೃದ್ಧರನ್ನು ಮನೆಯಿಂದ ಹೊರಗೆ ಹಾಕುವುದು ತಪ್ಪು ಎಂದು ಮುಖ್ಯ ನ್ಯಾಯಮೂರ್ತಿ ಓಕಾ ಅಭಿಪ್ರಾಯ ವ್ಯಕ್ತಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.