ಬೆಂಗಳೂರು: ಇಸ್ರೋ ಅಡಿ ಬರುವ ಆಂಟ್ರಿಕ್ಸ್ ಕಾರ್ಪೋರೇಷನ್ ಆರಂಭಿಸಿರುವ ದೇವಾಸ್ ಮಲ್ಟಿಮೀಡಿಯಾ ಪ್ರವೈಟ್ ಲಿಮಿಟೆಡ್ ಕಂಪನಿ ಮುಚ್ಚುವ ಪ್ರಕ್ರಿಯೆಯನ್ನು ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿ ಆದೇಶಿಸಿದೆ.
ಕೇಂದ್ರ ಸರ್ಕಾರ ಕಂಪನಿ ಮುಚ್ಚುವ ಪ್ರಕ್ರಿಯೆ ನಡೆಸಲು 2021ರ ಜ.21ರಂದು ಅನುಮತಿ ನೀಡಿದ್ದನ್ನು ಪ್ರಶ್ನಿಸಿ ದೇವಾಸ್ ಮಲ್ಪಿಮೀಡಿಯಾ ಕಂಪನಿಯಲ್ಲಿ ಪಾಲು ಹೊಂದಿದ್ದ ದೇವಾಸ್ ಎಂಪ್ಲಾಯಿಸ್ ಮಾರಿಷಸ್ ಪ್ರೈವೆಟ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ.ಪಿ.ಎಸ್. ದಿನೇಶ್ ಕುಮಾರ್ ಅವರಿದ್ದ ಏಕಸದಸ್ಯಪೀಠ ವಜಾ ಮಾಡಿದೆ. ಅಲ್ಲದೆ, ಕಂಪನಿ ನ್ಯಾಯಾಲಯವನ್ನು ದುರ್ಬಳಕೆ ಮಾಡಿಕೊಂಡಿದ್ದಕ್ಕಾಗಿ ಮತ್ತು ಅನಗತ್ಯ ಅರ್ಜಿ ಹೂಡಿದ್ದಕ್ಕಾಗಿ ಅರ್ಜಿದಾರ ಕಂಪನಿಗೆ 5 ಲಕ್ಷ ರೂ. ದಂಡವನ್ನು ವಿಧಿಸಿ, ದಂಡವನ್ನು ನಾಲ್ಕು ವಾರಗಳಲ್ಲಿ ರಿಜಿಸ್ಟ್ರಾರ್ ಜನರಲ್ ಗೆ ಪಾವತಿಸುವಂತೆ ಆದೇಶಿಸಿದೆ.
ಬೆಂಗಳೂರಿನ ಎನ್ ಸಿಎಲ್ ಟಿ ಮುಂದೆ 2021ರ ಮಾ.22ರಂದು ಮೇಲ್ಮನವಿ ಅಂತಿಮ ವಿಚಾರಣೆ ನಿಗದಿಯಾಗಿತ್ತು. ಅದಕ್ಕೆ ಒಂದು ದಿನ ಮುಂಚಿತವಾಗಿ ಈ ಅರ್ಜಿ ಹೂಡಿ, ದೇವಾಸ್ ಪರ ಅಣಕು ಸಮರ ನಡೆಸುವ ಪ್ರಯತ್ನ ನಡೆಸಿ ಕಾನೂನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ನ್ಯಾಯಾಲಯ ಹೇಳಿದೆ.
ದೇವಾಸ್ ಕಂಪನಿ ಹಣ ದುರ್ಬಳಕೆ ಮತ್ತು ಇತರ ಆರೋಪಗಳನ್ನು ಎದುರಿಸುತ್ತಿದೆ. ಅಲ್ಲದೆ, ಅದು ಭಾರತೀಯ ಬಾಹ್ಯಾಕಾಶ ಸಂಸ್ಥೆಯ ವಾಣಿಜ್ಯ ವಿಭಾಗ ಆಂಟ್ರಿಕ್ಸ್ ಕಾರ್ಪೋರೇಷನ್ನೊಂದಿಗೆ ಬ್ಯಾಂಡ್ ವಿಡ್ತ್ ಸೌಕರ್ಯಗಳನ್ನು ನೀಡುವ ಕುರಿತು ವಂಚನೆ ಎಸಗಿ ಒಪ್ಪಂದವನ್ನು ಮಾಡಿಕೊಂಡಿತ್ತು. ಆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ, ದೇವಾಸ್ ಕಂಪನಿಯನ್ನು ಮುಚ್ಚುವ ಪ್ರಕ್ರಿಯೆಗೆ ಅನುಮತಿ ನೀಡಿತ್ತು.
ದೇವಾಸ್ ಕಂಪನಿ ಮುಚ್ಚುವ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್ - ಬೆಂಗಳೂರಿನ ಎನ್ ಸಿಎಲ್ ಟಿ ಮುಂದೆ 2021ರ ಮಾ.22ರಂದು ಮೇಲ್ಮನವಿ ಅಂತಿಮ ವಿಚಾರಣೆ ನಿಗದಿಯಾಗಿತ್ತು