ಬೆಂಗಳೂರು: ನಮ್ಮ ತಂದೆ ಕಂಪನಿಯಲ್ಲಿ ಕೆಲಸ ಮಾಡ್ತಿದ್ದರು. ಅವರು ಇದ್ದಿದ್ದರೆ ನನಗೆ ಮಾಡಿ ಊಟ ಮಾಡಿಸುತ್ತಿದ್ದರು. ಇವಾಗ ನನಗೆ ಊಟ ಮಾಡ್ಸೋರು ಯಾರು? ಓದ್ಸೋರು ಯಾರು? ಎಂದು ಮಾಧ್ಯಮಗಳ ಮೂಲಕ ಪ್ರಶ್ನೆಯನ್ನು ಪುಟ್ಟ ಹುಡುಗಿ ಕೇಳಿದ್ದಾಳೆ.
ನಿತ್ಯ ಕೋವಿಡ್ ಸಂಬಂಧಿ ಹೃದಯ ಮಿಡಿಯುವ ಕಥೆಗಳಿಗೆ ಸಾಕ್ಷಿಯಾಗುತ್ತಿರುವ ರಾಜಧಾನಿ ಇಂದು ಕೂಡಾ ಕರುಣಾಜನಕ ಕಥೆಗೆ ಸಾಕ್ಷಿಯಾಯಿತು. ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ತಂದೆಗೆ ಆಕ್ಸಿಜನ್ ಕೊಟ್ಟಿಲ್ಲ, ತಂದೆಯ ಸಾವಿಗೆ ಆಸ್ಪತ್ರೆಯೇ ಕಾರಣ. ಬಿಬಿಎಂಪಿಯನ್ನು ನಂಬಿದ್ದೆವು, ಅವರೂ ಕೈಬಿಟ್ಟಿದ್ದಾರೆ. ಫೋನ್ ಮಾಡಿದ್ದರೂ ಕರೆ ಸ್ವೀಕರಿಸಲಿಲ್ಲ ಎಂದು ಮಗಳು ನವ್ಯಶ್ರೀ ಆರೋಪಿಸುತ್ತಿದ್ದಾಳೆ.
ಇದನ್ನೂ ಓದಿ: ಮಾಜಿ ಸಿಎಂ ಕಲಿಖೋ ಪುಲ್ ಸಾವು ಪ್ರಕರಣದ ಸಿಬಿಐ ತನಿಖೆ ಕೋರಿದ್ದ ಅರ್ಜಿ ವಜಾ
ಇದರ ಜೊತೆಗೆ ಎಲ್ಲರಲ್ಲೂ ಕೈ ಮುಗಿದು ಕೇಳುತ್ತೇನೆ. ಕೊರೊನಾ ಬಂದರೆ ಮನೆಯಲ್ಲಿಯೇ ಚಿಕಿತ್ಸೆ ಪಡಿಯಿರಿ. ಆಸ್ಪತ್ರೆಯವರು ಕೇವಲ ದುಡ್ಡಿನ ಬೆನ್ನು ಬಿದ್ದಿದ್ದಾರೆ ಎಂದು ಬಾಲಕಿ ಮನವಿ ಮಾಡಿದ್ದಾಳೆ.
ನವ್ಯಶ್ರೀ ತಂದೆ ಆನಂದ್ ಕೋವಿಡ್ನಿಂದ ಮೃತಪಟ್ಟಿದ್ದು, ನವ್ಯಶ್ರೀಯ ಮಾತು ಕೇಳಿ ಅಲ್ಲಿಯೇ ಇದ್ದ ಜನರು ಭಾವುಕರಾಗಿದ್ದಾರೆ.