ಕೆಆರ್ಪುರ (ಬೆಂಗಳೂರು): ನಗರದೆಲ್ಲೆಡೆ ಹನುಮ ಜಯಂತಿ ಸಂಭ್ರಮ ಜೋರಾಗಿದೆ. ಅದೇ ರೀತಿ ಕೆಆರ್ಪುರ ಕ್ಷೇತ್ರದ ಬಸವನಪುರ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಇಂದು ಹನುಮ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ದೇವರಿಗೆ ವಿಶೇಷ ಅಲಂಕಾರ ಮಾಡಿ, ಅಭಿಷೇಕ, ಹೋಮ, ಮಹಾಮಂಗಳಾರತಿ ಮಾಡುವ ಮೂಲಕ ಹನುಮ ಜಯಂತಿಯನ್ನು ಆಚರಿಸಲಾಯಿತು. ದೇವಾಲಯಕ್ಕೆ ನೂರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ಬಂದ ನೂರಾರು ಭಕ್ತಾದಿಗಳಿಗೆ ಅನ್ನಸಂತರ್ಪಣೆ ಜತೆಗೆ ಸರ್ಕಾರಿ ಶಾಲೆಯ ಮಕ್ಕಳಿಗೆ ಬೆಳಗಿನ ಉಪಹಾರ ವಿತರಣೆ ಮಾಡಲಾಯಿತು.
ಇದೇ ಸಂದರ್ಭ ದೇವಸ್ಥಾನ ಆವರಣದಲ್ಲಿ ಪುನೀತ್ ರಾಜ್‍ಕುಮಾರ್ ಅವರ ಭಾವಚಿತ್ರವನ್ನು ಇಟ್ಟು ಪೂಜೆ ಸಲ್ಲಿಸಲಾಯಿತು. ಈ ವೇಳೆ ಗ್ರಾಮದ ಯುವಕರು, ದೇವಸ್ಥಾನ ಧರ್ಮದರ್ಶಿ ವೆಂಕಟೇಶ್, ಮುಕುಂದ, ಎಸ್.ಎಂ.ಎಸ್.ಪಿ ಮಂಜುನಾಥ್ ಮೋಹನ್, ಸೇರಿದಂತೆ ಇತರರು ಉಪಸ್ಥಿತರಿದ್ದರು.
ಇದನ್ನೂ ಓದಿ: ಹನುಮ ಜಯಂತಿ: ಅಂಜನಾದ್ರಿಯಲ್ಲಿ 'ನಟಸಾರ್ವಭೌಮ'ನಿಗೆ ವಿಶೇಷ ನಮನ