ETV Bharat / city

ಪಕ್ಷ ಸಂಘಟನೆಯಲ್ಲ, ರಾಜ್ಯದ ಸಮಸ್ಯೆಗಳ ಬಗ್ಗೆ ಗಮನ: ಎಚ್​.ಡಿ.ಕುಮಾರಸ್ವಾಮಿ

ನಾನೀಗ ರಾಜ್ಯದ ಸಮಸ್ಯೆಗಳ ಬಗ್ಗೆ ಯೋಚಿಸುತ್ತಿದ್ದೇನೆ. ಪಕ್ಷ ಸಂಘಟನೆಯ ಬಗ್ಗೆ ಯೋಚಿಸಲಾರೆ. ಪಕ್ಷಕ್ಕೆ ಬರುವವರಿಗೆ ಸ್ವಾಗತ. ಹೋಗುವವರು ಹೋಗಬಹುದು. ಪಕ್ಷ ತೊರೆಯುವವರ ಬಗ್ಗೆ ನಾನು ಹೆಚ್ಚೇನೂ ಮಾತನಾಡಲಾರೆ ಎಂದು ಕುಮಾರಸ್ವಾಮಿ ಹೇಳಿದರು.

h d kumaraswamy
ಎಚ್​.ಡಿ. ಕುಮಾರಸ್ವಾಮಿ
author img

By

Published : Nov 10, 2021, 8:14 PM IST

ಆನೇಕಲ್: ನನಗೆ ರಾಜ್ಯದ ಸಮಸ್ಯೆಗಳ ಬಗ್ಗೆ ಹೆಚ್ಚಿನ ಗಮನವಿದೆ. ಪಕ್ಷದ ಸಂಘಟನೆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಹೇಳಿದರು.

ಆನೇಕಲ್​ನ ಚಂದಾಪುರದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬಂದಿದ್ದ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಅವರು, ಪಕ್ಷಕ್ಕೆ ಬರುವರು ಬರುತ್ತಾರೆ, ಹೋಗುವವರು ಹೋಗುತ್ತಾರೆ. ಅಂಥವರ ಬಗ್ಗೆ ಯೋಚಿಸಲಾರೆ ಎಂದು ಪಕ್ಷ ತ್ಯಜಿಸಲು ಮುಂದಾಗಿರುವ ವಿಧಾನಪರಿಷತ್​ ಸದಸ್ಯ ಸಿ.ಆರ್​.ಮನೋಹರ್​ ಬಗ್ಗೆ ವ್ಯಂಗ್ಯವಾಡಿದರು.

ಸಿ.ಆರ್​.ಮನೋಹರ್​ ಪಕ್ಷದಿಂದ ಸಂಪರ್ಕ ಕಡಿದುಕೊಂಡು 3 ವರ್ಷಗಳೇ ಕಳೆದಿವೆ. ಅವರಿಗೆ ಪಕ್ಷದಲ್ಲಿ ಯಾವುದೇ ಬೆಲೆ ಇಲ್ಲ. ಇದರಿಂದ ಅವರು ಬೇರೆ ಪಕ್ಷದ ಕಡೆ ಮುಖ ಮಾಡಿದ್ದಾರೆ. ಅಂಥವರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬಾರದು. ಅವರ ಬಗ್ಗೆಯೂ ಮಾತನಾಡಬಾರದು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.