ETV Bharat / city

ಬಿಬಿಎಂಪಿ ಸಂಗ್ರಹಿಸಿದ ವಿವಿಧ ಶುಲ್ಕದ ಹಣ ರಕ್ಷಿಸಲು ತಿದ್ದುಪಡಿ ವಿಧೇಯಕ ತರಲು ಸರ್ಕಾರ ನಿರ್ಧಾರ

ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಬಿಬಿಎಂಪಿ ಬಹಳ ವರ್ಷಗಳಿಂದ ಸಂಗ್ರಹಿಸುತ್ತಿರುವ ಒಸಿ, ಸಿಸಿ, ನಕ್ಷೆ ಮಂಜೂರಾತಿ ಶುಲ್ಕದ ಹಣವನ್ನು ರಕ್ಷಣೆ ಮಾಡಲು ಸರ್ಕಾರ ಈ ತಿದ್ದುಪಡಿ ವಿಧೇಯಕ ತರಲು ಸರ್ಕಾರ ನಿರ್ಧರಿಸಿದೆ ಎಂದು ಕಾನೂನು ಸಚಿವ ಮಾಧುಸ್ವಾಮಿ ತಿಳಿಸಿದರು.

ಕರ್ನಾಟಕ ಸರ್ಕಾರ
ಕರ್ನಾಟಕ ಸರ್ಕಾರ
author img

By

Published : Nov 9, 2021, 2:19 AM IST

ಬೆಂಗಳೂರು: ಬಿಬಿಎಂಪಿ ಸಂಗ್ರಹಿಸಿದ ವಿವಿಧ ಶುಲ್ಕದ ಹಣ ರಕ್ಷಿಸಲು ಕರ್ನಾಟಕ ನಗರ ಪಾಲಿಕೆ ಮತ್ತು ಇತರೆ ಕಾನೂನು ತಿದ್ದುಪಡಿ ವಿಧೇಯಕ ತರಲು ಸರ್ಕಾರ ನಿರ್ಧರಿಸಿದೆ.

ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಬಿಬಿಎಂಪಿ ಬಹಳ ವರ್ಷಗಳಿಂದ ಸಂಗ್ರಹಿಸುತ್ತಿರುವ ಒಸಿ, ಸಿಸಿ, ನಕ್ಷೆ ಮಂಜೂರಾತಿ ಶುಲ್ಕದ ಹಣವನ್ನು ರಕ್ಷಣೆ ಮಾಡಲು ಸರ್ಕಾರ ಈ ತಿದ್ದುಪಡಿ ವಿಧೇಯಕ ತರಲು ಸರ್ಕಾರ ನಿರ್ಧರಿಸಿದೆ ಎಂದು ಕಾನೂನು ಸಚಿವ ಮಾಧುಸ್ವಾಮಿ ತಿಳಿಸಿದರು.

ಬಿಬಿಎಂಪಿ ಬಹಳ ವರ್ಷಗಳಿಂದ ಸ್ವಾಧೀನ ಪತ್ರ, ಕಮೆನ್ಸ್ ಮೆಂಟ್ ಸರ್ಟಿಫಿಕೇಟ್, ಪ್ಲಾನ್ ಅಪ್ರೂವಲ್ ಶುಲ್ಕದ ರೂಪದಲ್ಲಿ ಸುಮಾರು 2,000 ಕೋಟಿ ರೂ. ಸಂಗ್ರಹಿಸಿದೆ. ಇದನ್ನು ಪ್ರಶ್ನಿಸಿ ವ್ಯಕ್ತಿಯೊಬ್ಬರು ಕಾನೂನಿನಡಿ ಇದಕ್ಕೆ ಅವಕಾಶ ಇಲ್ಲ ಎಂದು ಹೈ ಕೋರ್ಟ್ ಮೆಟ್ಟಿಲೇರಿದ್ದರು. ಬಿಬಿಎಂಪಿಯ ಈ ಕ್ರಮದ ಬಗ್ಗೆ ಆಕ್ಷೇಪಿಸಿದ ಹೈ ಕೋರ್ಟ್, ಆ ಮೊತ್ತವನ್ನು ಮರಳಿಸುವಂತೆ ಸೂಚನೆ ನೀಡಿತ್ತು. ಸರ್ಕಾರಕ್ಕೂ ಮಾರ್ಗದರ್ಶನ ಮಾಡಿ, ಈ ಸಂಬಂಧ ಕಾನೂನು ತಿದ್ದುಪಡಿ ತನ್ನಿ, ಇಲ್ಲವಾದರೆ ಕ್ರಮ ಕೈಗೊಳ್ಳುವುದು ಅನಿವಾರ್ಯ ಎಂದು ಹೇಳಿತ್ತು.

ಹೀಗಾಗಿ ಹೈ ಕೋರ್ಟ್ ಹೇಳಿದಂತೆ ಕಾನೂನು ತಿದ್ದುಪಡಿ ತಂದು ಆ ಹಣವನ್ನು ಉಳಿಸಿಕೊಳ್ಳಲು ನಿರ್ಧರಿಸಲಾಗಿದೆ. ಈ ರೀತಿ ಶುಲ್ಕ ಸಂಗ್ರಹಿಸಲು ಕಾನೂನಿನಲ್ಲಿ ಎಲ್ಲೂ ಅವಕಾಶ ನೀಡಿಲ್ಲ.‌ ಇದರಿಂದ ಹೈಕೋರ್ಟ್ ಬಿಬಿಎಂಪಿಯನ್ನು ತರಾಟೆಗೆ ತೆಗೆದುಕೊಂಡಿತ್ತು. ಆದರೆ ಶುಲ್ಕ ಸಂಗ್ರಹಕ್ಕೆ ಬಿಬಿಎಂಪಿ ಬೈಲಾದಲ್ಲಿ ಅವಕಾಶ ಇದೆ. ಕಾನೂನಿನಲ್ಲಿಲ್ಲದ ನಿಯಮವನ್ನು ಬೈಲಾ ಮೂಲಕ ಬಿಬಿಎಂಪಿ ಹೇಗೆ ಮಾಡಕಾಗುತ್ತದೆ ಎಂದು ಹೈ ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿತ್ತು‌.

ಆ ಹಣವನ್ನು ರಕ್ಷಿಸುವ ನಿಟ್ಟಿನಲ್ಲಿ ಸರ್ಕಾರ ತಿದ್ದುಪಡಿ ವಿಧೇಯಕ ತರಲು ಮುಂದಾಗಿದೆ. ಮುಂದಿನ ದಿನಗಳಲ್ಲೂ ಈ ಶುಲ್ಕ ಸಂಗ್ರಹಕ್ಕೆ ಯಾವುದೇ ಅಡೆತಡೆ ಬರದ ಹಾಗೇ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.

ಇದನ್ನು ಓದಿ:'ಭಾರತ್ ನೆಟ್ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಅಂತರ್ಜಾಲ ವ್ಯವಸ್ಥೆ ಉತ್ತಮಗೊಳಿಸಿ'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.