ETV Bharat / city

ಸೊಂಟ, ಒಳ ಉಡುಪಿನಲ್ಲಿ 1.44 ಕೋಟಿ ಮೌಲ್ಯದ ಚಿನ್ನ.. ಬೆಂಗಳೂರಲ್ಲಿ ಸಿಕ್ಕಿಬಿದ್ದ ಖದೀಮರು

ದುಬೈನಿಂದ ಅಕ್ರಮವಾಗಿ ಚಿನ್ನ ಕಳ್ಳ ಸಾಗಣೆಗೆ ಯತ್ನಿಸಿದ ಪ್ರಯಾಣಿಕರನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿ, 1.44 ಕೋಟಿ ಮೌಲ್ಯದ 2.84 ಕೆಜಿ ಚಿನ್ನ ವಶಕ್ಕೆ ಪಡೆದಿದ್ದಾರೆ.

ಸೊಂಟ, ಒಳ ಉಡುಪಿನಲ್ಲಿ 1.44 ಕೋಟಿ ಮೌಲ್ಯದ ಚಿನ್ನ

author img

By

Published : May 14, 2022, 10:01 AM IST

ದೇವನಹಳ್ಳಿ(ಬೆಂಗಳೂರು ಗ್ರಾಮಾಂತರ): ಸೊಂಟ ಮತ್ತು ಒಳ ಉಡುಪಿನಲ್ಲಿ ಮರೆಮಾಚಿ ಅಕ್ರಮವಾಗಿ ಚಿನ್ನ ಸಾಗಣೆ ಮಾಡುತ್ತಿದ್ದ ಪ್ರಯಾಣಿಕರು ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದು, ಆರೋಪಿಗಳಿಂದ 1.44 ಕೋಟಿ ಮೌಲ್ಯದ ಚಿನ್ನ ವಶಕ್ಕೆ ಪಡೆಯಲಾಗಿದೆ. ಮೇ 13 ರಂದು ದುಬೈನಿಂದ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಕೆ-568 ವಿಮಾನದಲ್ಲಿ ಬಂದ ಪ್ರಯಾಣಿಕರು ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಅಕ್ರಮ ಚಿನ್ನ ಸಾಗಣೆ ಮಾಡುತ್ತಿದ್ದ ಮಾಹಿತಿ DRI ಅಧಿಕಾರಿಗಳ ಗಮನಕ್ಕೆ ಬಂದಿತ್ತು. ಈ ಮಾಹಿತಿ ಮೇರೆಗೆ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಇಬ್ಬರು ಪ್ರಯಾಣಿಕರು ಸೊಂಟ ಮತ್ತು ಒಳ ಉಡುಪಿನಲ್ಲಿ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಗಳನ್ನ ಬಂಧಿಸಲಾಗಿದ್ದು, ಬಂಧಿತರಿಂದ 1 ಕೋಟಿ 44 ಲಕ್ಷ ಮೌಲ್ಯದ 2 ಕೆ.ಜಿ 84 ಗ್ರಾಂ ಚಿನ್ನವನ್ನ ವಶಕ್ಕೆ ಪಡೆಯಲಾಗಿದೆ.

ಸೊಂಟ, ಒಳ ಉಡುಪಿನಲ್ಲಿ 1.44 ಕೋಟಿ ಮೌಲ್ಯದ ಚಿನ್ನ
ಸೊಂಟ, ಒಳ ಉಡುಪಿನಲ್ಲಿ 1.44 ಕೋಟಿ ಮೌಲ್ಯದ ಚಿನ್ನ

ಕಿಡಿಗೇಡಿಗಳು ವಿವಿಧ ರೀತಿಯಲ್ಲಿ ಅಕ್ರಮವಾಗಿ ಚಿನ್ನ ಸಾಗಿಸಲು ಪ್ರಯತ್ನಿಸುತ್ತಲೇ ಇದ್ದು, ಕಸ್ಟಮ್ಸ್ ಅಧಿಕಾರಿಗಳು ಆ ಪ್ರಯತ್ನಗಳನ್ನು ವಿಫಲಗೊಳಿಸಿ ಬಿಸಿ ಮುಟ್ಟಿಸುವ ಕಾರ್ಯದಲ್ಲಿ ಯಶಸ್ವಿಯಾಗುತ್ತಲೇ ಇದ್ದಾರೆ. ಆದರೂ ಚಿನ್ನ ಕಳ್ಳಸಾಗಣೆ ಪ್ರಕರಣಗಳು ಹೆಚ್ಚುತ್ತಲೇ ಇವೆ.

(ಓದಿ: ಒಳ ಉಡುಪಿನಲ್ಲಿಟ್ಟು ಗೋಲ್ಡ್ ಸ್ಮಗ್ಲಿಂಗ್.. 7 ಕೆಜಿ ಚಿನ್ನ ಸಮೇತ ದಂಪತಿ ಬಂಧನ)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.