ಬೆಂಗಳೂರು: ಕೊರೊನಾ ಅಟ್ಟಹಾಸ ತಡೆಯಲು ರಾಜ್ಯ ಸರ್ಕಾರ ವಾರಾಂತ್ಯಗಳಲ್ಲಿ ಲಾಕ್‌ಡೌನ್ ಘೋಷಿಸಿದೆ. ಪ್ರತಿನಿತ್ಯ ಬಳಸುವ ಹಾಗೂ ಅಗತ್ಯ ವಸ್ತುಗಳನ್ನ ಹೊರತು ಪಡಿಸಿ ನಗರದ ಇನ್ನುಳಿದ ಎಲ್ಲಾ ಅಂಗಡಿ ಮುಂಗಟ್ಟುಗಳನ್ನ ಮುಚ್ಚ ಬೇಕೆಂದು ಸರ್ಕಾರ ಅದೇಶ ಹೊರಡಿಸಿತ್ತು. ಆದ್ದರಂತೆಯೇ ಕನ್ಸ್‌ಟ್ರಕ್ಷನ್ ಹಾಗೂ ಕೃಷಿ ಕಾಮಗಾರಿಗಳನ್ನ ಮುಂದುವರೆಸಬಹುದು. ಸರ್ಕಾರದ ಆದೇಶ ಈ ಕಾರ್ಯಗಳಿಗೆ ಅನ್ವಯವಾಗುವುದಿಲ್ಲ ಎಂದು ಸೂಚನೆ ನೀಡಲಾಗಿತ್ತು. ಇನ್ನು ಅಗ್ರಿಕಲ್ಚರ್ ಹಾಗೂ ಕನ್ಸ್‌ಟ್ರಕ್ಷನ್ ಕಾಮಗಾರಿಗಳಿಗೆ ಪಂಪ್ ಸೆಟ್ ಹಾಗೂ ಇದಕ್ಕೆ ಸಂಬಂಧಸಿದ ಉಪಕರಣಗಳನ್ನ ಮಾರಾಟ ಮಾಡುವ ಬಹುತೇಕ ಅಂಗಡಿಗಳನ್ನ ಮುಚ್ಚಿಸಲಾಗಿದೆ. ಹೀಗಿರುವಾಗ ಕಾಮಗಾರಿಗೆ ಅಗತ್ಯ ಉಪಕರಣಗಳು ಇಲ್ಲದಿದ್ದಾಗ ಕೆಲಸ ಹೇಗೆ ಮಾಡುವುದಕ್ಕೆ ಆಗುತ್ತೆ ಅಂತ ಕರ್ನಾಟಕ ಅಗ್ರಿಕಲ್ಚರ್ ವಾಟರ್ ಪಂಪ್ಸ್ ಟ್ರೇಡರ್ಸ್ ಅಸೋಸಿಯೇಷನ್ ಅಧ್ಯಕ್ಷ ಫ್ರಾಂಕಿ ಹಾಲ್ ಪ್ರಶ್ನಿಸಿದ್ದಾರೆ. ಹೀಗಾಗಿ ಈ ಕಾಮಗಾರಿ ಮಾಡಲು ಅನುಮತಿ ನೀಡಿದ ಹಾಗೆ ದಯವಿಟ್ಟು ಪಂಪ್ ಸೆಟ್ ಮಾರಾಟ ಮಾಡುವ ಅಂಗಡಿಗಳನ್ನ ತೆರೆಯಲು ಅವಕಾಶ ಮಾಡಿಕೊಡಿ. ಇದರಿಂದ ಅನೇಕ ರೈತರಿಗೆ ತಮ್ಮ ಕೃಷಿ ಕಾಮಗಾರಿ ತೊಂದರೆ ಇಲ್ಲದೆ ನಡೆಯುತ್ತೆ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಕನ್ಸ್‌ಟ್ರಕ್ಷನ್-ಅಗ್ರಿಕಲ್ಚರ್ ಕಾಮಗಾರಿಗೆ ಪಂಪ್‌ಸೆಟ್ ಅಂಗಡಿ ತೆರೆಯಲು ಅನುಮತಿ ನೀಡಿ
ಕೃಷಿಗೆ ಸಂಬಂಧಿಸಿದ ಕೆಲ ಕಾಮಗಾರಿಗಳಿಗೆ ಬೇಕಿರುವ ಉಪ ಕರಣಗಳ ಅಂಗಡಿಗಳನ್ನು ಕೋವಿಡ್ ನಿಂದ ಬಂದ್ ಮಾಡಲಾಗಿದೆ. ಇದರಿಂದ ಕೃಷಿ ಕಾಮಗಾರಿಗಳಿಗೆ ಸಮಸ್ಯೆಯಾಗುತ್ತಿದೆ. ಹೀಗಾಗಿ ಅಗ್ರಿಕಲ್ಚರ್ ಹಾಗೂ ಕನ್ಸ್‌ಟ್ರಕ್ಷನ್ ಕಾಮಗಾರಿಗಳಿಗೆ ಪಂಪ್ ಸೆಟ್ ಹಾಗೂ ಇದಕ್ಕೆ ಸಂಬಂಧಸಿದ ಉಪಕರಣ ಮಾರಾಟ ಮಾಡುವ ಅಂಗಡಿಗಳನ್ನು ತೆರೆಯುಂತೆ ರೈತ ಮುಖಂಡರು ಒತ್ತಾಯಿಸಿದ್ದಾರೆ.