ಬೆಂಗಳೂರು: ಕೆ.ಆರ್.ಪುರದ ಬಸವನಪುರ ಮುಖ್ಯರಸ್ತೆಯಲ್ಲಿರುವ ಗಾಯತ್ರಿ ದೇವಿ ದೇಗುಲದಲ್ಲಿ ಇದೇ ಮೊದಲ ಬಾರಿಗೆ ಬಂಗಾರದ ಬ್ರಹ್ಮರಥೋತ್ಸವ ಅದ್ಧೂರಿಯಾಗಿ ನೆರವೇರಿತು. 28ನೇ ರಥೋತ್ಸವದಲ್ಲಿ ಸಾವಿರಾರು ಭಕ್ತರು ಭಾಗಿಯಾಗಿದ್ದರು. ಚಿನ್ನದ ರಥ ಎಳೆದು ಭಕ್ತರು ಸಂಭ್ರಮಿಸಿದರು.
ಗಾಯತ್ರಿ ಮಹಾಸಂಸ್ಥಾನದ ಪೂಜಾರಿ ಗಣಪಾಠಿ ಮಾತನಾಡಿ, '1994ರಲ್ಲಿ ದೇವಸ್ಥಾನ ಸ್ಥಾಪನೆಯಾಗಿದೆ. ಕುಂಭಾಭಿಷೇಕದ ನಂತರ ನಿರಂತರವಾಗಿ ಪ್ರತಿ ವರ್ಷ ಬ್ರಹ್ಮರಥೋತ್ಸವ ನಡೆಯುತ್ತಿದೆ. ಭಕ್ತಾದಿಗಳ ಕೋರಿಕೆ ಈಡೇರಿಸುವ ದೇವತೆ ಈ ನಮ್ಮ ಗಾಯತ್ರಿ ದೇವಿ. ದಾನಿಗಳು ಕೊಡುಗೆಯಾಗಿ ನೀಡಿದ ಹಣದಲ್ಲಿ ರಥ ತಯಾರಿಸಲಾಗಿದೆ. 13 ಕೋಟಿ ವೆಚ್ಚ, 9 ಕೆ.ಜಿ.ಚಿನ್ನದಲ್ಲಿ ನಿರ್ಮಾಣಗೊಂಡ 11 ಅಡಿ ಎತ್ತರದ ಬಂಗಾರದ ರಥ ಇದು. ಪ್ರತಿ ವರ್ಷವು ಚಿನ್ನದ ರಥೋತ್ಸವ ನಡೆಯಲಿದೆ' ಎಂದು ತಿಳಿಸಿದರು.
ಇದನ್ನೂ ಓದಿ: ಹಿಮವದ್ ಗೋಪಾಲಸ್ವಾಮಿ ಜಾತ್ರೆ; ಇಲ್ಲಿ ಹಗ್ಗದಿಂದಲ್ಲ ಹಂಬಿನಿಂದ ರಥ ಎಳೆದ ಭಕ್ತರು!!