ಬೆಂಗಳೂರು: ದೇಶದ ಎಲ್ಲ ರಾಜ್ಯಗಳಲ್ಲೂ ಪೆಟ್ರೋಲ್ ಬೆಲೆ ₹90 ರ ಗಡಿ ದಾಟಿದ್ದು, ಸರ್ಕಾರಿ ಸಾರಿಗೆ ಅಗ್ಗವಾದರೂ ದ್ವಿಚಕ್ರ ವಾಹನ ಸವಾರರು ಹಲವಾರು ಕಾರಣಗಳಿಂದ ಸಾರಿಗೆ ಬಸ್ ಹತ್ತಲು ಹಿಂದೇಟು ಹಾಕುತ್ತಿದ್ದಾರೆ.
ಸದ್ಯ ಕೊರೊನಾ ಸಮಯದಲ್ಲಿ ಐಟಿ ಸಂಸ್ಥೆಗಳು ವರ್ಕ್ ಫ್ರಮ್ ಹೋಮ್ ನಿಯಮ ಪಾಲಿಸುತ್ತಿರುವಾಗ ಇನ್ನುಳಿದ ಮಾರ್ಕೆಟಿಂಗ್ ಸೇವೆಯಲ್ಲಿ ಇರುವವರು ಬಸ್ ಸೇವೆ ನಂಬಿ ತಮ್ಮ ಕೆಲಸ ಮಾಡಲು ಸಾಧ್ಯವಿಲ್ಲ. ನಗರದ ವಿವಿಧ ಕಡೆ ಸಮಯಕ್ಕೆ ಸರಿಯಾಗಿ ಬಸ್ ಸೇವೆ ಇರುವುದಿಲ್ಲ, ಇದ್ದರೂ ಸಮಯಕ್ಕೆ ಸರಿಯಾಗಿ ಹೋಗಲು ಸಾಧ್ಯವಾಗುವುದಿಲ್ಲ, ಪ್ರತಿ ನಿಲ್ದಾಣದಲ್ಲಿ ಬಸ್ಗಳನ್ನ ನಿಲ್ಲಿಸುವುದರಿಂದ ನಮ್ಮ ಕೆಲಸ ಸಮಯಕ್ಕೆ ಸರಿಯಾಗಿ ಆಗುವುದಿಲ್ಲ ಎಂದು ದ್ವಿಚಕ್ರ ಸವಾರರು ಹೇಳುತ್ತಿದ್ದಾರೆ.
ಇನ್ನು ರಾತ್ರಿ ಪಾಲಿಯಲ್ಲಿ ಕೆಲಸ ಮಾಡುವ ನೌಕರರಿಗೆ ಮೆಟ್ರೋ ಅಥವಾ ಬಸ್ ಸೇವೆ ಸಿಗುವುದಿಲ್ಲ. ಮಧ್ಯಮ ವರ್ಗದ ಜನ ಸಾಲದಲ್ಲಿ ದ್ವಿಚಕ್ರ ವಾಹನ ಖರೀದಿ ಮಾಡಿ ತಮ್ಮ ಕಚೇರಿಗೆ ಹೋಗಬೇಕು. ಈಗಿರುವ ಪೆಟ್ರೋಲ್ ದರದಿಂದ ಜೇಬಿಗೆ ಕತ್ತರಿ ಬೀಳುತ್ತಿದೆ. ಕೂಡಲೇ ಸರ್ಕಾರ ಪೆಟ್ರೋಲ್ ಬೆಲೆ ಕಡಿಮೆ ಮಾಡಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.
ಇದನ್ನೂ ಓದಿ.. ‘6ನೇ ವೇತನ ಆಯೋಗ ಜಾರಿಯಿಲ್ಲ, ಸಂಧಾನವೂ ಇಲ್ಲ; ಮುಷ್ಕರ ನಡೆಸಿದ್ರೆ ಕಠಿಣ ಕ್ರಮ’