ETV Bharat / city

ರೇಷನ್ ಕಾರ್ಡ್ ತೋರಿಸಿದ್ರೆ ಇಂದಿರಾ ಕ್ಯಾಂಟೀನ್​​ನಿಂದ ಮನೆ ಮಂದಿಗೆಲ್ಲ ಉಚಿತ ಊಟ - free food to people

ಇಂದಿರಾ ಕ್ಯಾಂಟೀನ್‌ನಲ್ಲಿ ಆಹಾರದ ಪೊಟ್ಟಣಗಳನ್ನು ಉಚಿತವಾಗಿ ಪಡೆಯಲು ಬರುವ ಫಲಾನುಭವಿಗಳು ಗುರುತಿನಿ ಚೀಟಿ(ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ಡಿಎಲ್, ಕಾರ್ಮಿಕ ಇಲಾಖೆಯ ಗುರುತಿನ ಚೀಟಿ ಸೇರಿದಂತೆ ಯಾವುದೇ ಗುರುತಿನ ಚೀಟಿಗಳು...) ಸರಬರಾಜುದಾರರಿಗೆ ಒದಗಿಸಬೇಕಿದೆ.

 Free food distribution to poor people in Bangalore

author img

By

Published : May 11, 2021, 6:21 PM IST

ಬೆಂಗಳೂರು: ಹೈಕೋರ್ಟ್ ಸೂಚನೆಯಂತೆ, ಬಡ, ಕಾರ್ಮಿಕ, ವಲಸಿಗರಿಗೆ ಲಾಕ್ ಡೌನ್ ನ ಎಲ್ಲಾ‌ ದಿನಗಳಲ್ಲಿ ಮೂರು ಹೊತ್ತು ಉಚಿತ ಊಟ, ತಿಂಡಿ‌ ನೀಡಲು ಬಿಬಿಎಂಪಿ ಇಂದಿರಾ ಕ್ಯಾಂಟೀನ್ ಗಳಿಗೆ ಸೂಚಿಸಿದೆ.

ಬಿಬಿಎಂಪಿ ವ್ಯಾಪ್ತಿಯ ಎಲ್ಲಾ ಇಂದಿರಾ ಕ್ಯಾಂಟೀನ್‌ಗಳಲ್ಲಿ ನಾಳೆಯಿಂದ ಉಚಿತ ಆಹಾರದ ಪೊಟ್ಟಣಗಳ ವಿತರಣೆ ನಡೆಯಲಿದೆ. ಕೆಲ ನಿಯಮಗಳನ್ನು ಸೂಚಿಸಲಾಗಿದ್ದು, ಇಂದಿರಾ ಕ್ಯಾಂಟೀನ್‌ನಲ್ಲಿ ಆಹಾರದ ಪೊಟ್ಟಣಗಳನ್ನು ಪಡೆಯಲು ಬರುವ ಫಲಾನುಭವಿಗಳು ಗುರುತಿನಿ ಚೀಟಿ(ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ಡಿಎಲ್, ಕಾರ್ಮಿಕ ಇಲಾಖೆಯ ಗುರುತಿನ ಚೀಟಿ ಸೇರಿದಂತೆ ಇನ್ನಿತ್ಯಾದಿ ಗುರುತಿನ ಚೀಟಿಗಳು...) ಸರಬರಾಜುದಾರರಿಗೆ ಒದಗಿಸಬೇಕು.

ಪ್ರತಿಯೊಬ್ಬ ವ್ಯಕ್ತಿ, ಫಲಾನುಭವಿಗಳಿಗೂ ಗರಿಷ್ಠ 3 ಆಹಾರದ ಪೊಟ್ಟಣಗಳನ್ನು ನೀಡಲಾಗುವುದು ಅಥವಾ ಪಡಿತರ ಚೀಟಿಯಲ್ಲಿ ಕುಟುಂಬದ ಒಟ್ಟು ವ್ಯಕ್ತಿಗಳ ಸಂಖ್ಯೆಗೆ ಅನುಗುಣವಾಗಿ ಆಹಾರದ ಪ್ಯಾಕೆಟ್‌ಗಳನ್ನು ನೀಡಲಾಗುತ್ತದೆ.

ನಗರದ ಎಲ್ಲಾ ಇಂದಿರಾ ಕ್ಯಾಂಟೀನ್‌ಗಳಲ್ಲಿ ಊಟದ ಪೊಟ್ಟಣಗಳನ್ನು ಪಡೆಯಲು ಬರುವ ಫಲಾನುಭವಿಗಳು ಕಡ್ಡಾಯವಾಗಿ ಕೋವಿಡ್ ನಿಯಮಗಳನ್ನು ಪಾಲಿಸಬೇಕು. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು, ಸಾಮಾಜಿಕ ಅಂತರ ಕಾಯ್ದುಕೊಂಡು ಸರತಿ ಸಾಲಿನಲ್ಲಿ ನಿಂತು ಆಹಾರವನ್ನು ಪಡೆಯಬಹುದು ಎಂದು ಪಾಲಿಕೆ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.