ETV Bharat / city

ಹಣ ಡ್ರಾ ಮಾಡಿಕೊಡುವುದಾಗಿ ನಂಬಿಸಿ ವಯೋವೃದ್ದರನ್ನು ವಂಚಿಸುತ್ತಿದ್ದ ಆರೋಪಿ ಬಂಧನ

author img

By

Published : Apr 12, 2022, 12:26 PM IST

ಹಣ ತೆಗೆಯಲು ಎಟಿಎಂಗಳಿಗೆ ಬರುವ ವಯೋವೃದ್ದರನ್ನು ಮತ್ತು ಅಮಾಯಕ ಮಹಿಳೆಯರನ್ನು ಗುರಿಯಾಗಿಸಿಕೊಂಡು ಹಣ ಡ್ರಾ ಮಾಡಿಕೊಡುವುದಾಗಿ ನಂಬಿಸಿ ವಂಚಿಸುತ್ತಿದ್ದ ಆರೋಪಿಯನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಹರೀಶ್ ನಾಯ್ಕ್ ಎಂದು ಗುರುತಿಸಲಾಗಿದೆ.‌.

fraud-for-allegedly-drawing-money-accused-arrested
ಹಣ ಡ್ರಾ ಮಾಡಿಕೊಡುವುದಾಗಿ ನಂಬಿಸಿ ವಯೋವೃದ್ದರನ್ನು ವಂಚಿಸುತ್ತಿದ್ದ ಆರೋಪಿ ಬಂಧನ

ಬೆಂಗಳೂರು : ಹಣ ತೆಗೆದುಕೊಳ್ಳಲು ಎಟಿಎಂಗಳಿಗೆ ಬರುವ ವಯೋವೃದ್ದರನ್ನು ಮತ್ತು ಅಮಾಯಕ ಮಹಿಳೆಯರನ್ನು ಗುರಿಯಾಗಿಸಿಕೊಂಡು ಹಣ ಡ್ರಾ ಮಾಡಿಕೊಡುವುದಾಗಿ ನಂಬಿಸಿ ವಂಚಿಸುತ್ತಿದ್ದ ಆರೋಪಿಯನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಹರೀಶ್ ನಾಯ್ಕ್ ಎಂದು ಗುರುತಿಸಲಾಗಿದೆ.‌ ಬಂಧಿತನಿಂದ 1.70 ಲಕ್ಷ ರೂಪಾಯಿ ನಗದು ಹಾಗೂ ಎಟಿಎಂ ಕಾರ್ಡ್‌ನ ಪೊಲೀಸರು ಜಪ್ತಿ ಮಾಡಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಇತ್ತೀಚೆಗೆ ದೊಡ್ಡತೂಗುರು ಬಳಿ ಶ್ರೀನಿವಾಸ್ ಎಂಬುವರು ಹಣ ತೆಗೆಯಲು ಕೆನರಾ ಬ್ಯಾಂಕ್ ಎಟಿಎಂಗೆ ಹೋಗಿದ್ದರು. ಅಲ್ಲೇ ಹೊಂಚು ಹಾಕಿ ಕಾದಿದ್ದ ಆರೋಪಿ ಹರೀಶ್ ಎಟಿಎಂ ಒಳಗೆ ಹಣ ಬಿಡಿಸಿಕೊಡುವುದಾಗಿ ನಂಬಿಸಿ ಅವರಿಂದ ಎಟಿಎಂ ಪಿನ್ ನಂಬರ್ ಪಡೆದಿದ್ದಾನೆ. ಕ್ಷಣಾರ್ಧದಲ್ಲಿ ಎಟಿಎಂ ಕಾರ್ಡ್ ಬದಲಾಯಿಸಿ ಹಣ ಬರುತ್ತಿಲ್ಲ ಎಂದು ತನ್ನ ಬಳಿಯಿದ್ದ ಎಟಿಎಂ ಕಾರ್ಡ್ ನೀಡಿದ್ದಾನೆ‌.‌

ಬಳಿಕ ಶ್ರೀನಿವಾಸ್ ಅವರ ಕಾರ್ಡ್‌ನಿಂದ 1.50 ಲಕ್ಷ ಹಣ ಡ್ರಾ ಮಾಡಿ ವಂಚಿಸಿದ್ದಾನೆ ಎಂದು ತಿಳಿದು ಬಂದಿದೆ.‌ ಈ ಸಂಬಂಧ ವ್ಯಕ್ತಿಯು ನೀಡಿದ ದೂರಿನನ್ವಯ ಆರೋಪಿಯನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ಎಲೆಕ್ಟ್ರಾನಿಕ್ ಸಿಟಿ, ಬೇಗೂರು, ಹೆಬ್ಬಗೂಡಿ ಸೇರಿದಂತೆ ಹಲವು ಕಡೆಗಳಲ್ಲಿ ಈ ರೀತಿಯ ಕೃತ್ಯವೆಸಗಿರುವುದು ಬೆಳಕಿಗೆ ಬಂದಿದೆ.

ಓದಿ : ಮದ್ದೂರು : ಎಸ್​ಬಿಐ ಬ್ಯಾಂಕಿಗೆ ಸೇರಿದ ಎಟಿಎಮ್​ಗೆ ಕನ್ನ-20 ಲಕ್ಷ ರೂ. ದೋಚಿದ ಖದೀಮರು!

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.