ನೆಲಮಂಗಲ: ಗ್ರಾಮ ಪಂಚಾಯತ್ ಸಭೆಗೆ ಸತತವಾಗಿ ನಾಲ್ಕು ಬಾರಿ ಗೈರಾಗಿದ್ದಕ್ಕೆ ನಾಲ್ವರು ಗ್ರಾಮ ಪಂಚಾಯತ್ ಸದಸ್ಯರನ್ನು ಗ್ರಾಮೀಣಾಭಿವೃದ್ಧಿ ಇಲಾಖೆ ಆನರ್ಹಗೊಳಿಸಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಕಳಲುಘಟ್ಟ ಗ್ರಾಮ ಪಂಚಾಯತ್ನ ನಾಲ್ವರು ಸದಸ್ಯರು ಅನರ್ಹಗೊಂಡಿದ್ದಾರೆ. ಸಾವಿತ್ರಮ್ಮ, ನರಸಮ್ಮ, ಹನುಮಂತರಾಯಪ್ಪ, ಶಾಂತಮ್ಮ ಅನರ್ಹಗೊಂಡ ಗ್ರಾಮ ಪಂಚಾಯತ್ ಸದಸ್ಯರು.
ವಿಚಾರಣೆ ಬಳಿಕ ಗ್ರಾಮೀಣಾಭಿವೃದ್ಧಿ ಪಂಚಾಯತ್ ಅಧಿನಿಯಮ 1993 ರ 43(ಎ),(111)ರ ಅಡಿ ಇವರ ಸದಸ್ಯತ್ವ ರದ್ದು ಮಾಡಿದೆ. ಅಷ್ಟೇ ಅಲ್ಲದೆ ಈ ಮೂಲಕ ಎಲ್ಲಾ ಗ್ರಾಮ ಪಂಚಾಯತ್ ಸದಸ್ಯರಿಗೆ ಇಲಾಖೆ ಎಚ್ಚರಿಕೆ ರವಾನಿಸಿದೆ.