ETV Bharat / city

ಒಂದು ಕೊಲೆ.. ಮೂರು ತಂಡ.. ನಾಲ್ಕು ಆಯಾಮಗಳಲ್ಲಿ ತನಿಖೆ!

ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಹತ್ಯೆ ಪ್ರಕರಣ ಸಂಬಂಧ, ನಗರದ ಪಶ್ಚಿಮ ವಿಭಾಗದ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಕೊಲೆಗೆ ರಾಜಕೀಯ, ಕೌಟುಂಬಿಕ ಕಲಹ, ಹಳೆ ದ್ವೇಷ ಹಾಗೂ‌ ಹಣಕಾಸಿನ ವ್ಯವಹಾರ ಮನಸ್ತಾಪಗಳು ಕಾರಣವಾಗಿದ್ದವಾ ಎಂಬ ಪ್ರಶ್ನೆ ಪೊಲೀಸರಲ್ಲಿ ಮೂಡಿದೆ.

former-corporator-rekha-kadiresh-murder-
ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಹತ್ಯೆ
author img

By

Published : Jun 24, 2021, 4:10 PM IST

ಬೆಂಗಳೂರು: ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಹತ್ಯೆ ಮಾಡಿದ ಹಂತಕರನ್ನು 24 ಗಂಟೆಯೊಳಗೆ ಬಂಧಿಸುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಖಡಕ್ ಸೂಚನೆ ಹಿನ್ನೆಲೆ, ನಗರದ ಪಶ್ಚಿಮ ವಿಭಾಗದ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಕೊಲೆಗೆ ರಾಜಕೀಯ, ಕೌಟುಂಬಿಕ ಕಲಹ, ಹಳೆ ದ್ವೇಷ ಹಾಗೂ‌ ಹಣಕಾಸಿನ ವ್ಯವಹಾರ ಹಾಗೂ ಮನಸ್ತಾಪ. ಹೀಗೆ ನಾಲ್ಕು ಆಯಾಮಗಳಲ್ಲಿ ಪೊಲೀಸರ ಮೂರು ವಿಶೇಷ ತಂಡ ತನಿಖೆ ನಡೆಸುತ್ತಿದೆ‌.

ಓದಿ: ರೇಖಾ ಕದಿರೇಶ್ ಹತ್ಯೆ: ಇದು ಪಕ್ಕಾ ಪ್ಲಾನ್​​ ಮರ್ಡರ್​​ ಎನ್ನುತ್ತಿವೆ ಪೊಲೀಸ್​ ಮೂಲಗಳು..!

ಹಣಕಾಸು ವ್ಯವಹಾರದಿಂದಲೇ ನಡೆಯಿತಾ ಕೊಲೆ...?

ದಿವಂಗತ ಕದಿರೇಶ್ ಗರಡಿಯಲ್ಲಿ ಬೆಳೆದಿದ್ದ, ಸಂಬಂಧಿಕರಾಗಿದ್ದ ಪೀಟರ್ ಹಾಗೂ ಸೂರ್ಯ ಎಂಬುವರು ರೇಖಾ ಕದಿರೇಶ್ ಕೊಲೆ‌ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಘಟನೆ ಬಳಿಕ ಶಂಕಿತರು ನಾಪತ್ತೆಯಾಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಶಂಕಿತರಾದ ಪೀಟರ್ ಮತ್ತು ಸೂರ್ಯ ಹಣಕಾಸಿನ ವ್ಯವಹಾರ ವಿಚಾರವಾಗಿ ರೇಖಾ ಜೊತೆ ಮನಸ್ತಾಪ ಹೊಂದಿದ್ದರು ಎಂದು ಹೇಳಲಾಗುತ್ತಿದೆ‌.

ರೇಖಾ ಮನೆಯ ಪಕ್ಕದಲೇ ವಾಸವಾಗಿದ್ದ ಪೀಟರ್ ಮನೆ ಕಟ್ಟಿಸಲು ಮುಂದಾಗಿದ್ದ. ಆದರೆ, ಹಣಕಾಸಿನ‌ ಸಹಾಯ ಮಾಡಿರಲಿಲ್ಲ, ಕಾಮಗಾರಿ ಮಾಡಿಸಿದ್ದ ವಿಚಾರದಲ್ಲಿ ಬಿಲ್ ಬಾಕಿ ಉಳಿಸಿಕೊಂಡಿದ್ದ ರೇಖಾಳನ್ನು ಬಿಲ್ ಕೊಡಿಸುವಂತೆ ದುಂಬಾಲು ಬಿದ್ದಿದ್ದ ಎನ್ನಲಾಗಿದೆ. ಇದು ವೈಯಕ್ತಿಕ ವಿಚಾರದಲ್ಲೂ ಜಗಳವಾಗಿತ್ತಾ..? ಕೊಲೆ ಮಾಡಲು‌ ಪ್ರೇರಣೆಯಾಯಿತಾ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕೌಟುಂಬಿಕ ಕಲಹವೇ ಕೊಲೆಗೆ ಕಾರಣವೇ..?

ಕೊಲೆಯ ಮತ್ತೊಬ್ಬ ಆರೋಪಿ ಸ್ಟೀಫನ್ ಎನ್ನಲಾಗುತ್ತಿದ್ದು, ಕೃತ್ಯ ಬಳಿಕ ಈತ ಸಹ ನಾಪತ್ತೆಯಾಗಿದ್ದಾನೆ. ಸ್ಟೀಫನ್, ಕದಿರೇಶ್ ತಂಗಿಯ ಮಗ ಎನ್ನಲಾಗಿದೆ. ಮಾಜಿ ಕಾರ್ಪೋರೇಟರ್ ಆಗಿದ್ದರೂ ಹಣಕಾಸಿನ ಸಹಾಯಕ್ಕೆ ಹಿಂದೇಟು ಹಾಕಿದ್ದರು. ಮಾವ ಕದಿರೇಶ್ ನಿಂದ ಕಾರ್ಪೋರೇಟರ್ ಆಗಿದ್ದರೂ ಸಂಬಂಧಿಗಳಿಗೆ ಸಹಾಯ ಮಾಡುತ್ತಿರಲಿಲ್ಲ ಎಂಬ ಆರೋಪವಿತ್ತು. ಈ ಆಪಾದನೆಯೇ ಕೊಲೆಗೆ ಕಾರಣ ಎಂಬುದರ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.

ರಾಜಕೀಯ ಕಾರಣಕ್ಕಾಗಿ ನಡೆಯಿತಾ ಮರ್ಡರ್​:

ಮುಂಬರುವ ಬಿಬಿಎಂಪಿ ಚುನಾವಣೆಗೆ ಸಜ್ಜಾಗಿದ್ದ ರೇಖಾ ಕದಿರೇಶ್, ರಾಜಕೀಯವಾಗಿ ಮುಂದುವರಿದರೆ ಕಷ್ಟ ಎಂಬ ಕಾರಣಕ್ಕೆ ಕೊಲೆ ಮಾಡಲಾಗಿದೆಯಾ ಎಂಬುದರ ಬಗ್ಗೆ‌ ಪೊಲೀಸರು ತನಿಖೆ‌ ನಡೆಸುತ್ತಿದ್ದಾರೆ. ಕದಿರೇಶ್ ಎರಡನೇ ಪತ್ನಿಯಾಗಿದ್ದ ರೇಖಾ, ಬರುವ ಚುನಾವಣೆಯಲ್ಲಿ ನಿಂತು ಗೆದ್ದರೆ ತಮ್ಮ ಮಕ್ಕಳು ರಾಜಕೀಯವಾಗಿ ಬೆಳೆಯಲು ಆಗುವುದಿಲ್ಲ ಎಂದು ಕದಿರೇಶ್ ಸಹೋದರಿ ಮಾಲಾ ಪ್ಲಾನ್ ಮಾಡಿಕೊಂಡಿದ್ದರಾ ಎಂಬ ಪ್ರಶ್ನೆ ಉದ್ಭವವಾಗಿದೆ‌.

ಮಾಲಾ ವಿರುದ್ಧವೂ ಕಾಟನ್​​ಪೇಟೆ ಠಾಣೆಯಲ್ಲಿ ರೌಡಿ ಶೀಟರ್ ತೆರೆಯಲಾಗಿದೆ. ಮಕ್ಕಳಿಗೆ ಅನುಕೂಲವಾಗಲು ಸ್ಕೆಚ್ ಹಾಕಿದರಾ ಎಂಬ ಅನುಮಾನ ಮೂಡಿದ್ದು, ಸದ್ಯ ಪೊಲೀಸರು ಮಾಲಾಳನ್ನು ವಿಚಾರಣೆ ನಡೆಸುತ್ತಿದ್ದಾರೆ.

ಹವಾ‌ ಮೆಂಟೈನ್ ಗಾಗಿ ರೇಖಾ ಕೊಲೆಯಾಯಿತಾ..?

ಇತ್ತೀಚೆಗೆ ಕಾಟನ್​​ಪೇಟೆ ಪೊಲೀಸ್ ಠಾಣೆಯಲ್ಲಿ ಸೂರ್ಯನ ವಿರುದ್ಧ ರೌಡಿಶೀಟ್ ತೆರೆಯಲಾಗಿತ್ತು. ಏರಿಯಾದಲ್ಲಿ ಹವಾ ಮೆಂಟೈನ್​​​ಗಾಗಿ ಹತ್ಯೆಗೆ ಕೈ ಜೋಡಿಸಿದನಾ ..? ಪೀಟರ್, ಸ್ಟೀಫನ್ ಒಂದಾಗಿ ಪ್ಲಾನ್ ಮಾಡಿದ್ದರಾ ಎಂಬುದರ ಬಗ್ಗೆಯೂ ವಿವಿಧ ಆಯಾಮಗಳಿಂದಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.