ETV Bharat / city

ಯುವತಿಯ ಮುಖಕ್ಕೆ ಪಂಚ್ ಮಾಡಿದ ಜೊಮ್ಯಾಟೊ ಡೆಲಿವರಿ ಬಾಯ್; ದೂರು ದಾಖಲು

author img

By

Published : Mar 10, 2021, 5:30 PM IST

Updated : Mar 10, 2021, 5:51 PM IST

ತಡವಾಗಿದೆ ಎಂದು ಸಿಟ್ಟಿಗೆದ್ದ ಮಹಿಳೆ ಡೆಲಿವರಿ ಬಾಯ್ ಮೇಲೆ ಕಿಡಿಕಾರಿದ್ದರು. ಇಬ್ಬರ ನಡುವೆ ಮಾತಿನ ಚಕಮಕಿಯಾಗಿ ಜಗಳ ವಿಕೋಪಕ್ಕೆ ತಿರುಗಿದೆ. ಈ ವೇಳೆ ಅಕ್ರೋಶಭರಿತನಾಗಿ ನಾನು ನಿಮ್ಮ ಮನೆ ಗುಲಾಮನಲ್ಲ ಎಂದು ಮಹಿಳೆ ಮುಖಕ್ಕೆ ಪಂಚ್ ಮಾಡಿದ್ದಾನೆ.

ಮಹಿಳೆ
ಮಹಿಳೆ

ಬೆಂಗಳೂರು: ನಗರದಲ್ಲಿ ಆಹಾರ ಪೂರೈಕೆ ಜಾಲ ಜೊಮ್ಯಾಟೊ ಕಂಪೆನಿಯ ಡೆಲಿವರಿ ಬಾಯ್ ಒಬ್ಬ, ಫುಡ್ ಆರ್ಡರ್ ಮಾಡಿದ್ದ ಮಹಿಳೆಯ ಮೇಲೆ ಹಲ್ಲೆ ನಡೆಸಿರುವ ಘಟನೆ ಜರುಗಿದೆ.

ಹಿತೇಶ್ ಇಂದ್ರಾಣಿ ಹಲ್ಲೆಗೊಳಗಾದ ಮಹಿಳೆ‌‌. ಹಲ್ಲೆಗೈದ ವ್ಯಕ್ತಿಯನ್ನು ಡೆಲಿವರಿ ಬಾಯ್ ಕಾಮರಾಜ್ ಎಂದು ಗುರುತಿಸಲಾಗಿದೆ‌. ಮೇಕಪ್ ಆರ್ಟಿಸ್ಟ್ ಆಗಿರುವ ಹಿತೇಶ್ ಇಂದ್ರಾಣಿ ನಿನ್ನೆ ಮಧ್ಯಾಹ್ನ 3-30ಕ್ಕೆ ಊಟಕ್ಕಾಗಿ ಜೊಮ್ಯಾಟೊನಲ್ಲಿ ಆರ್ಡರ್ ಮಾಡಿದ್ದರು. ಆರ್ಡರ್ ಪಡೆದು ಸುಮಾರು ಒಂದು ಗಂಟೆಯಾದರೂ‌ ಊಟ ಬಾರದ ಕಾರಣ ಆರ್ಡರ್ ರದ್ದು ಮಾಡಿದ್ದರು.

ಇದಾದ ಕೆಲ‌ ನಿಮಿಷಗಳ ಬಳಿಕ ಡೆಲಿವರಿ ಬಾಯ್ ಊಟ ಸರಬರಾಜು ಮಾಡಿದ್ದ.‌ ತಡವಾಗಿದೆ ಎಂದು ಸಿಟ್ಟಿಗೆದ್ದ ಮಹಿಳೆ, ಡೆಲಿವರಿ ಬಾಯ್ ಮೇಲೆ ಕಿಡಿಕಾರಿದ್ದರು. ಇಬ್ಬರ ನಡುವೆ ಮಾತಿನ ಚಕಮಕಿಯಾಗಿ ಜಗಳ ವಿಕೋಪಕ್ಕೆ ತಿರುಗಿದೆ. ಈ ವೇಳೆ ಆಕ್ರೋಶ ಭರಿತನಾದ ಡೆಲಿವರಿ ಬಾಯ್, ನಾನು ನಿಮ್ಮ ಮನೆ ಗುಲಾಮ ಅಲ್ಲ ಎಂದು ಮಹಿಳೆ ಮುಖಕ್ಕೆ ಪಂಚ್ ಮಾಡಿದ್ದಾನೆ.

ಫುಡ್ ಡೆಲಿವರಿ ಬಾಯ್ ಹಲ್ಲೆ ಕುರಿತು ಮಹಿಳೆ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ

ಹಲ್ಲೆಗೊಳಗಾದ ಮಹಿಳೆ‌ ಇನ್​ಸ್ಟಾಗ್ರಾಂ ನಲ್ಲಿ ಈ ಬಗ್ಗೆ ವಿಡಿಯೋ‌ ಮಾಡಿ‌ ಅಳಲು ತೋಡಿಕೊಂಡಿದ್ದಾರೆ‌.‌ ಈ ಬಗ್ಗೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಡೆಲಿವರಿ ಬಾಯ್ ವಿರುದ್ಧ ಮಹಿಳೆ ದೂರು ನೀಡಿದ್ದಾರೆ. ಘಟನೆ ಬಗ್ಗೆ ಜೊಮ್ಯಾಟೊ ಆಡಳಿತ ಮಂಡಳಿ ಕ್ಷಮೆ ಕೇಳಿದ್ದು, ಮಹಿಳೆಯ ವೈದ್ಯಕೀಯ ವೆಚ್ಚ ಭರಿಸುವುದಾಗಿ ತಿಳಿಸಿದೆ.

ಇದನ್ನೂ ಓದಿ.. ಆದಾಯ ಕೊರತೆ ಅನುದಾನ: ರಾಜ್ಯಗಳಿಗೆ 74,340 ಕೋಟಿ ರೂ. ಕೊಟ್ಟ ಕೇಂದ್ರ

Last Updated : Mar 10, 2021, 5:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.