ಬೆಂಗಳೂರು: ಎಂ.ಜಿ.ರಸ್ತೆಯ ಯುಕೋ ಬ್ಯಾಂಕ್ ಇರುವ ಕಟ್ಟಡದಲ್ಲಿ ಬುಧವಾರ ಸಂಭವಿಸಿದ ಭಾರಿ ಅಗ್ನಿ ಅವಘಡದಲ್ಲಿ ಭಾರಿ ಅನಾಹುತವೊಂದು ಸ್ವಲ್ಪದರಲ್ಲೇ ತಪ್ಪಿದೆ. ಕಟ್ಟಡದಲ್ಲಿದ್ದ ಸುಮಾರು 200 ಜನರ ಪ್ರಾಣವನ್ನು ಮೂವರು ಸೆಕ್ಯೂರಿಟಿ ಸಿಬ್ಬಂದಿ ಉಳಿಸುವ ಮೂಲಕ ಆಪದ್ಭಾಂಧವರೆನಿಸಿದ್ದಾರೆ.
ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ಫರಾ ಟವರ್ನಲ್ಲಿ ಯುಕೋ ಬ್ಯಾಂಕ್, ಕಮರ್ಷಿಯಲ್ ಕಚೇರಿ, ಇತರೆ ಕಚೇರಿಗಳು ಸೇರಿ ಒಟ್ಟು ಆರು ಅಂತ್ತಸಿನ ಕಟ್ಟಡ ಇದಾಗಿದೆ. ಮೊದಲ ಮಹಡಿಯಲ್ಲಿ ಹಾಕಲಾಗಿದ್ದ ಎಲೆಕ್ಟ್ರಾನಿಕ್ ಪ್ಯಾನೆಲ್ನಲ್ಲಿ ವೈರಿಂಗ್ ವ್ಯತ್ಯಾಸದಿಂದ ಅಗ್ನಿ ಅವಘಡ ಉಂಟಾಗಿತ್ತು. ನೋಡು ನೋಡುತ್ತಿದ್ದಂತೆ ಬೆಂಕಿ ಕಿಡಿ ವ್ಯಾಪಿಸಿತ್ತು. ಬ್ಯಾಂಕ್ನಲ್ಲಿದ್ದ ಸಿಬ್ಬಂದಿ ಆತಂಕದಿಂದ ಹೊರಬಂದಿದ್ದರು. ಯುಕೋ ಬ್ಯಾಂಕ್ ಕಟ್ಟಡದಲ್ಲಿ ಯಾವುದೇ ಅಗ್ನಿ ಸುರಕ್ಷತಾ ವಸ್ತುಗಳಿರಲಿಲ್ಲ ಎಂದು ಹೇಳಲಾಗ್ತಿದೆ.
ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿರುವ ಯುಕೊ ಬ್ಯಾಂಕ್ ಕಟ್ಟಡದಲ್ಲಿ ಅಗ್ನಿ ಅವಘಡ
ಸೆಕ್ಯೂರಿಟಿಗಳು ಸಮಯಪ್ರಜ್ಞೆ ಮೆರೆದಿದ್ದೇಗೆ:
ಕೇಬಲ್ಗಳ ಮುಖಾಂತರ ಬೆಂಕಿ ನೆಲ ಮಹಡಿಯಿಂದ ವ್ಯಾಪಿಸುತ್ತಿದ್ದುದನ್ನು ಕಂಡ ಸೆಕ್ಯೂರಿಟಿ ಗಾರ್ಡ್ ಸಿಂಗ್, ಆನಂದ್ ಮತ್ತು ಮೌಲಾನ ಅಲಿ ಎಂಬುವರು ಕೂಡಲೇ ತಾವು ಕೆಲಸ ಮಾಡುವ ಕಟ್ಟಡದಲ್ಲಿ ಅಳವಡಿಸಲಾಗಿದ್ದ ಸುಮಾರು 25 ಅಗ್ನಿನಂದಕಗಳಿಂದ ಹೊತ್ತಿ ಉರಿಯುತ್ತಿದ್ದ ಅಗ್ನಿಯನ್ನು ನಂದಿಸಿದ್ದಾರೆ. ಈ ಮೂಲಕ ಸುಮಾರು 200 ಮಂದಿಯ ಪ್ರಾಣ ಉಳಿಸಿದ್ದಾರೆ.