ಬೆಂಗಳೂರು : ಅನುಕಂಪದ ಆಧಾರದ ಮೇರೆಗೆ ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳಲು ನಕಲಿ ಪದವಿ ಅಂಕಪಟ್ಟಿ ನೀಡಿದ ಆರೋಪದಡಿ ವ್ಯಕ್ತಿಯ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ವಿಷ್ಣುವರ್ಧನ ರೆಡ್ಡಿ ಎಂಬುವರು ನೀಡಿದ ದೂರು ಆಧರಿಸಿ ಸಿದ್ಧಲಿಂಗೇಶ ಗಂಗಾಧರ ಬುದ್ದಿ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ.
ಇಲಾಖೆಯ ನೌಕರರಾಗಿದ್ದ ಗಂಗಾಧರ ಬುದ್ದಿ 2008ರಲ್ಲಿ ಸೇವೆಯಲ್ಲಿ ಇರುವಾಗಲೇ ಮೃತಪಟ್ಟಿದ್ದರು. ಮೃತರ ಎರಡನೇ ಪತ್ನಿಯ ಮಗನಾದ ಸಿದ್ಧಲಿಂಗೇಶ ಅವರಿಗೆ ಅನುಕಂಪದ ಆಧಾರದ ಮೇರೆಗೆ ದ್ವಿತೀಯ ದರ್ಜೆ ಹುದ್ದೆ ನೀಡಲು ಮಾಡಿದ ಮನವಿ ಮೇರೆಗೆ ಬಾಗಲಕೋಟೆ ವಿಭಾಗದ ಹಿರಿಯ ಅಧಿಕಾರಿಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು.
2022ರಲ್ಲಿ ಪದವಿ ಮೇರೆಗೆ ದ್ವಿತೀಯ ದರ್ಜೆ ಬದಲು ಪ್ರಥಮ ದರ್ಜೆ ಕೆಲಸ ನೀಡುವಂತೆ ಅರ್ಜಿ ಸಲ್ಲಿಸಿದ್ದ. ಅಂಕಪಟ್ಟಿ ನೈಜತೆಗಾಗಿ ಮೈಸೂರು ವಿಶ್ವವಿದ್ಯಾಲಯಕ್ಕೆ ಪತ್ರ ಬರೆದಿದ್ದರು. ಪರಿಶೀಲನೆ ವೇಳೆ ನಕಲಿ ಅಂಕಪಟ್ಟಿ ಸಾಬೀತಾಗಿದ್ದರಿಂದ ವಂಚಕನ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.
ಇದನ್ನೂ ಓದಿ: ಲುಧಿಯಾನಾ ಕೋರ್ಟ್ ಸ್ಫೋಟ ಪ್ರಕರಣ : ಆರೋಪಿ ಮನೆ ಮೇಲೆ ಎನ್ಐಎ ರೇಡ್