ಬೆಂಗಳೂರು : ಮೆಡಿಕಲ್ ಸೀಟ್ ಹಂಚಿಕೆ ವಿಷಯದಲ್ಲಿ ಲಕ್ಷಾಂತರ ರೂಪಾಯಿ ವಂಚಿಸಿರುವುದಾಗಿ ಆರೋಪಿಸಿ ಕಿಮ್ಸ್ ಆಡಳಿತ ಮಂಡಳಿ ಮಾಜಿ ಸದಸ್ಯರ ವಿರುದ್ಧ ವಿವಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಿಮ್ಸ್ ಆಸ್ಪತ್ರೆಯ ಸಿಇಒ ಸಿದ್ದರಾಮಯ್ಯ ಅವರು ದೂರು ನೀಡಿದ ಮೇರೆಗೆ, ಒಕ್ಕಲಿಗರ ಸಂಘದ ಮಾಜಿ ಚೇರ್ಮನ್ ಕಾಳೇಗೌಡ, ಮಾಜಿ ಅಧ್ಯಕ್ಷ ಅಪ್ಪಾಜಿಗೌಡ, ಮಾಜಿ ನಿರ್ದೇಶಕ ನರೇಂದ್ರ ಬಾಬು ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
2014-2018ರ ಅವಧಿಯಲ್ಲಿ ಮೆಡಿಕಲ್ ಸೀಟ್ ಹಂಚಿಕೆ ವಿಷಯದಲ್ಲಿ ಹಗರಣ ನಡೆದಿದೆ. ಮೆಡಿಕಲ್ ಸೀಟ್ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಹಣವನ್ನು ಕಿಮ್ಸ್ ವಿದ್ಯಾಸಂಸ್ಥೆಗೆ ನೀಡದೇ ವಂಚಿಸಿದ್ದಾರೆ. ₹70 ಲಕ್ಷಕ್ಕೂ ಹೆಚ್ಚು ಹಣವನ್ನು ವಂಚಿಸಿರುವುದಾಗಿ ಆರೋಪಿಸಿರುವುದಾಗಿ ಸಿದ್ದರಾಮಯ್ಯ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಮಾಜಿ ಶಾಸಕ ಸಂಜಯ್ ಪಾಟೀಲರ 'ರಾತ್ರಿ ಸಂಸ್ಕೃತಿ' ಹೇಳಿಕೆ.. ಸಿಲಿಕಾನ್ ಸಿಟಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ..