ಬೆಂಗಳೂರು: ನಗರದಲ್ಲಿ ಕೊರೊನಾ ಸೋಂಕಿತರಿಗೆ ಬೆಡ್ ಸಮಸ್ಯೆ ಮುಂದುವರೆದಿದೆ. ಇದೀಗ ಆಸ್ಪತ್ರೆಗಳಲ್ಲಿ ಬೆಡ್ ಸಿಗದ ಕಾರಣ ಕೋವಿಡ್ ರೋಗಿಯ ಕುಟುಂಬದವರು ಸೋಂಕಿತನನ್ನು ಸಿಎಂ ಯಡಿಯೂರಪ್ಪರ ನಿವಾಸದ ಬಳಿಯೇ ಕರೆತಂದಿರುವ ಘಟನೆ ನಡೆದಿದೆ.
ಆಟೋದಲ್ಲಿ ಸೋಂಕಿತನನ್ನು ಸಿಎಂ ನಿವಾಸದ ಮುಂದೆ ಕರೆತರಲಾಗಿದ್ದು, ಆಟೋ ನಿಲ್ಲಿಸಲು ಪೊಲೀಸರು ಅವಕಾಶ ನೀಡಲಿಲ್ಲ. ಸಿಎಂ ನಿವಾಸದ ರಸ್ತೆಯಲ್ಲಿ ಬಿಗಿ ಭದ್ರತೆ ನಡುವೆಯೂ ರೋಗಿಯ ಕುಟುಂಬಸ್ಥರು ಸೋಂಕಿತನನ್ನು ಕರೆತಂದಿದ್ದರು. ಬಳಿಕ ಆತನನ್ನು ಪೊಲೀಸರು ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇದನ್ನೂ ಓದಿ: ರೆಮ್ಡಿಸಿವಿರ್, ಆಕ್ಸಿಜನ್, ಬೆಡ್ ಬ್ಲಾಕಿಂಗ್ ದಂಧೆ ಕುರಿತು ತೀವ್ರ ತನಿಖೆ: ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್
ಎರಡು ದಿನಗಳ ಹಿಂದೆಯಷ್ಟೇ ಆಕ್ಸಿಜನ್ ಬೆಡ್ ಸಿಗುತ್ತಿಲ್ಲವೆಂದು ಆಕ್ರೋಶಗೊಂಡ ಕುಟುಂಬಸ್ಥರು ಕೋವಿಡ್ ಸೋಂಕಿತ ವ್ಯಕ್ತಿಯನ್ನು ಸಿಎಂ ಮನೆ ಮುಂದೆಯೇ ಆ್ಯಂಬುಲೆನ್ಸ್ನಲ್ಲಿ ಕರೆತಂದಿದ್ದರು. ನಂತರ ಆಸ್ಪತ್ರೆಗೆ ಕರೆದೊಯ್ಯುವಾಗ ವ್ಯಕ್ತಿ ಸಾವನ್ನಪ್ಪಿದ್ದ.