ETV Bharat / city

ವಿಧಾನ ಪರಿಷತ್‌ನ 7 ಸ್ಥಾನಗಳಿಗೆ ಜೂನ್‌ 3ರಂದು ಮತದಾನ

ಜೂನ್ 14ರಂದು ವಿಧಾನಪರಿಷತ್​​ನ ಹಲವು ಸ್ಥಾನಗಳು ತೆರವಾಗಲಿದ್ದು, ಜೂನ್ 3ರಂದು ಆ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಹೇಳಿದೆ.

election for state upper house
ತೆರವಾಗಲಿರುವ ಮೇಲ್ಮನೆಯ ಏಳು ಸ್ಥಾನಗಳಿಗೆ ಜೂ.3ರಂದು ಮತದಾನ: ಚುನಾವಣಾ ಆಯೋಗ
author img

By

Published : May 10, 2022, 1:14 PM IST

Updated : May 10, 2022, 1:32 PM IST

ಬೆಂಗಳೂರು: ತೆರವಾಗಲಿರುವ ರಾಜ್ಯ ವಿಧಾನ ಪರಿಷತ್‌ನ ಏಳು ಸ್ಥಾನಗಳಿಗೆ ಜೂನ್ 3ರಂದು ಮತದಾನ ನಡೆಯಲಿದೆ. ಮೇ 17ರಂದು ಅಧಿಸೂಚನೆ ಹೊರಬೀಳಲಿದೆ. ನಾಮಪತ್ರ ಸಲ್ಲಿಕೆಗೆ ಮೇ 24 ಕೊನೆಯ ದಿನವಾಗಿರಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಲಕ್ಷ್ಮಣ ಸಂಗಪ್ಪ ಸವದಿ, ರಾಮಪ್ಪ ತಿಮ್ಮಾಪುರ್​, ಅಲ್ಲಂ ವೀರಭದ್ರಪ್ಪ, ಹೆಚ್​.ಎಂ.ರಮೇಶ್ ಗೌಡ, ವೀಣಾ ಅಚ್ಚಯ್ಯ, ನಾರಾಯಣ ಸ್ವಾಮಿ ಕೆ.ವಿ, ಲಹರ್ ಸಿಂಗ್ ಸಿರೋಯಾ ಜೂನ್ 14ರಂದು ವಿಧಾನಪರಿಷತ್​ನಿಂದ ನಿವೃತ್ತಿಯಾಗಲಿದ್ದಾರೆ.

ಅಧಿಸೂಚನೆ ದಿನಾಂಕ ಮೇ 17, ನಾಮಪತ್ರಗಳ ಸಲ್ಲಿಕೆಗೆ ಮೇ 24 ಕೊನೆಯ ದಿನವಾಗಲಿದೆ. ಮೇ 25 ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರಗಳನ್ನು ಹಿಂಪಡೆಯಲು ಮೇ 27 ಕೊನೆಯ ದಿನವಾಗಿದೆ. ಜೂನ್ 3ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 4ಗಂಟೆಯವರೆಗೆ ಚುನಾವಣೆ ನಡೆಯಲಿದೆ. ಅದೇ ದಿನ ಸಂಜೆ 5 ಗಂಟೆಗೆ ಮತ ಎಣಿಕೆ ನಡೆಯಲಿದೆ.

Last Updated : May 10, 2022, 1:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.