ETV Bharat / city

ನೋಡಿ: ಕೆಸರುಗದ್ದೆಯಲ್ಲಿ ರೋಮಾಂಚಕ ಕಾರ್‌ ರೇಸ್ - bengaluru news

ಕಾರ್ ರೇಸ್ ಎಂಬುದು ಕೆಲವರ ಫ್ಯಾಷನ್. ಇಂತಹ ಫ್ಯಾಷನ್ ರೇಸ್‌ಪ್ರಿಯರ ಆಸೆಯನ್ನು ಈಡೇರಿಸುವುದಕ್ಕಾಗಿ ಚೇತನ್ ಶಿವರಾಮ್ ಮತ್ತು ಯುನೈಟೆಡ್ ಮೋಟಾರ್ ಸ್ಪೋರ್ಟ್ಸ್​​​ನವರು ಇಕೋ ಲೈಫ್​​ ಟೈಮ್ ಅಟ್ಯಾಕ್ - 2021 ಎಂಬ ಹೆಸರಿನಲ್ಲಿ ಆಫ್​​ರೋಡ್ ಟ್ರಾಕ್ ರೇಸ್ ಆಯೋಜಿಸಿದ್ದು, ನೋಡುಗರನ್ನು ರೋಮಾಂಚನಗೊಳಿಸಿದೆ.

Eco Track Lifetime Attack car race in Bengaluru
ನೋಡುಗರ ರೋಮಾಂಚನಗೊಳಿಸಿದ ಕಾರು ರೇಸ್
author img

By

Published : Aug 27, 2021, 12:17 PM IST

ಬೆಂಗಳೂರು: ನಗರದ ವರ್ತೂರು ಸಮೀಪದ ಗುಂಜೂರಿನಲ್ಲಿರುವ ಯುನೈಟೆಡ್ ಆಫ್​​ರೋಡ್ ಪಾರ್ಕ್​ನಲ್ಲಿ ಯುನೈಟೆಡ್ ಮೋಟಾರ್ ಸ್ಪೋರ್ಟ್ಸ್​​​ನವರು ಕಾರ್ ರೇಸ್ ಆಯೋಜಿಸಿದ್ದು, ನೋಡುಗರಲ್ಲಿ ರೋಚಕತೆ ಮೂಡಿಸಿತು.

ರೋಮಾಂಚನಗೊಳಿಸಿದ ಕಾರು ರೇಸ್

ಈ ಮೊದಲು ಪ್ರತಿ ತಿಂಗಳು ಇಂತಹ ರೇಸ್​ಗಳು ನಡೆಯುತ್ತಿದ್ದವು. ಆದರೆ ಕೋವಿಡ್ ಕಾರಣದಿಂದಾಗಿ ಈಗ ವರ್ಷಕ್ಕೆ ಎರಡು ಬಾರಿ ಮಾತ್ರ ನಡೆಯುತ್ತವೆ. ಕಳೆದ‌ ಎರಡು ದಿನಗಳಿಂದ ಇಕೊ ಲೈಫ್​​ ಟೈಮ್ ಅಟ್ಯಾಕ್ ಆಯೋಜಿಸಲಾಗಿದೆ.

ಇಕೊ ಲೈಫ್​​ ಟೈಮ್ ಅಟ್ಯಾಕ್​ನಲ್ಲಿ 1100cc, 1200cc, 1600cc, 2000cc ಸೇರಿದಂತೆ ಲೇಡಿಸ್ ಡ್ರೈವ್, ಎಸ್ಟೀಮ್, ರ್ಯಾಲಿ ಕ್ಲಾಸ್, ಜಿಪ್ಸಿ ಕ್ಲಾಸ್​​ನಂತಹ ಸ್ಪರ್ಧೆಗಳೂ ಇವೆ. ಗೆದ್ದರಿಗೆ ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸಲಾಗಿದೆ. ಫಾಸ್ಟೆಸ್ಟ್​ ರೈಡರ್ ಆಗಿ ಪ್ರಗತಿ ಗೌಡ ಹಾಗೂ ತರುಣ್ ಹೊರಹೊಮ್ಮಿದ್ದಾರೆ.

ಕೆಲವರಲ್ಲಿ ಬೈಕ್, ಕಾರ್​ಗಳನ್ನು ವೇಗವಾಗಿ ಚಲಾಯಿಸುವ ಕ್ರೇಜ್ ಇರುತ್ತದೆ. ಆದರೆ ಬೆಂಗಳೂರಿನ ಟ್ರಾಫಿಕ್​ನಲ್ಲಿ ಅದು ಸಾಧ್ಯವಾಗೋದಿಲ್ಲ. ಯುನೈಟೆಡ್ ಮೋಟಾರ್ ಸ್ಪೋರ್ಟ್ಸ್​​​​​ನವರು ಟೈಮ್ ಅಟ್ಯಾಕ್ 2021 ಆಯೋಜಿಸುವ ಮೂಲಕ ಅಂಥವರ ಆಸೆ ಈಡೇರಿಸಿದೆ.

ಇದನ್ನೂ ಓದಿ: ಬೆಂಗಳೂರಿನ ಯುವ ಚಿತ್ರಕಲಾವಿದನ ಅದ್ಭುತ ಪ್ರತಿಭೆಗೆ ಪ್ರಧಾನಿ ಮೋದಿ ಮೆಚ್ಚುಗೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.