ETV Bharat / city

ಇ-ಫೈಲಿಂಗ್ ಬಳಕೆ ನಿರೀಕ್ಷಿತವಾಗಿಲ್ಲ; ವಕೀಲರ ನಡೆಗೆ ಹೈಕೋರ್ಟ್ ಬೇಸರ - ಇ-ಫೈಲಿಂಗ್

ರಾಜ್ಯದ ನ್ಯಾಯಾಲಯಗಳಲ್ಲಿ ಇ - ಫೈಲಿಂಗ್‌ ವ್ಯವಸ್ಥೆ ಜಾರಿ ಮಾಡಲಾಗಿದೆ. ಆದರೆ, ವಕೀಲರು ಈ ಸೌಲಭ್ಯವನ್ನು ಮಾತ್ರ ಉಪಯೋಗ ಮಾಡಿಕೊಳ್ಳುತ್ತಿಲ್ಲ. ಈ ಸಂಬಂಧ ಇಂದು ಅರ್ಜಿ ವಿಚಾರಣೆ ನಡೆಸಿರುವ ಹೈಕೋರ್ಟ್‌ ಇ-ಫೈಲಿಂಗ್ ಬಳಕೆ ನಿರೀಕ್ಷಿತವಾಗಿ ನಡೆಯುತ್ತಿಲ್ಲ ಎಂದು ವಕೀಲರ ನಡೆಗೆ ಬೇಸರ ವ್ಯಕ್ತಪಡಿಸಿದ್ದಾರೆ.

e-filing using is not safe; high court unsatisfied about lawyers
ಇ-ಫೈಲಿಂಗ್ ಬಳಕೆ ನಿರೀಕ್ಷಿತವಾಗಿಲ್ಲ; ವಕೀಲರ ನಡೆಗೆ ಹೈಕೋರ್ಟ್ ಬೇಸರ
author img

By

Published : Jun 21, 2021, 11:04 PM IST

ಬೆಂಗಳೂರು: ಹೈಕೋರ್ಟ್ ಹಾಗೂ ಜಿಲ್ಲಾ ನ್ಯಾಯಾಲಯಗಳಲ್ಲಿ ಅರ್ಜಿಗಳ ಸಲ್ಲಿಕೆಗೆ ಇ-ಫೈಲಿಂಗ್ ವ್ಯವಸ್ಥೆ ಜಾರಿ ಮಾಡಿ ಒಂದೂವರೆ ವರ್ಷವಾದರೂ ನಿರೀಕ್ಷಿತ ಪ್ರಮಾಣದಲ್ಲಿ ಸೌಲಭ್ಯ ಬಳಕೆಯಾಗುತ್ತಿಲ್ಲ ಎಂದು ಹೈಕೋರ್ಟ್ ಬೇಸರ ವ್ಯಕ್ತಪಡಿಸಿದೆ.

ಅರ್ಜಿಗಳ ವಿಚಾರಣೆ ವೇಳೆ ಲೈವ್ ಸ್ಟ್ರೀಮಿಂಗ್ ಕುರಿತು ಪ್ರಸ್ತಾಪಿಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ, ಹೆಚ್ಚಿನ ವಕೀಲರು ಇ - ಫೈಲಿಂಗ್ ಬಗ್ಗೆ ಆಸಕ್ತಿ ತೋರುತ್ತಿಲ್ಲ. ಆ ಬಗ್ಗೆ ಹಲವು ಬಾರಿ ಸೂಚಿಸಿದರೂ ವಕೀಲರು ಸೌಲಭ್ಯ ಬಳಕೆಗೆ ಮುಂದಾಗುತ್ತಿಲ್ಲ ಎಂದ ಪೀಠ, ಈವರೆಗೆ ಎಷ್ಟು ಪ್ರಕರಣ ಇ - ಫೈಲಿಂಗ್ ಮೂಲಕ ದಾಖಲಾಗಿದೆ ಎಂಬ ಬಗ್ಗೆ ವರದಿ ನೀಡುವಂತೆ ರಿಜಿಸ್ಟ್ರಾರ್ ಜನರಲ್ (ಕಂಪ್ಯೂಟರ್)ಗೆ ನಿರ್ದೇಶನ ನೀಡಿತು.

ಇನ್ನು, ರಾಜ್ಯದಲ್ಲಿ ನ್ಯಾಯಾಲಯಗಳ ಕಾರ್ಯ ಕಲಾಪವನ್ನು ಡಿಜಿಟಲೀಕರಣಗೊಳಿಸುವ ಕುರಿತು ಪ್ರಸಾಪಿಸಿದ ಸಿಜೆ, ದೇಶದಲ್ಲೇ ಮೊದಲ ಬಾರಿಗೆ ಹೈಬ್ರಿಡ್ ಮಾದರಿಯಲ್ಲಿ ವಿಡಿಯೋ ಕಾನ್ಫರೆನ್ಸ್ ಅಳವಡಿಸಿಕೊಂಡಿರುವ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಕರ್ನಾಟಕ ಹೈಕೋರ್ಟ್‌ಗೆ ಹೊಸ ಜವಾಬ್ದಾರಿ ವಹಿಸಿದೆ.

ಸ್ಕ್ಯಾನಿಂಗ್ ಹಾಗೂ ಡಿಜಿಟಲೀಕರಣ ಪ್ರಾಯೋಗಿಕ ಯೋಜನೆಗೆ ಸುಪ್ರೀಂ ಕೋರ್ಟ್ ರಾಜ್ಯ ಹೈಕೋರ್ಟ್‌ನ್ನು ಆಯ್ಕೆ ಮಾಡಿದೆ. ಮ್ಯಾಸಿವ್ ಸ್ಕ್ಯಾನಿಂಗ್ ಮತ್ತು ಡಿಜಿಟಲೀಕರಣದ ಪ್ರಾಯೋಗಿಕ ಯೋಜನೆಯನ್ನು ಜಾರಿಗೊಳಿಸುವಂತೆ ಸುಪ್ರೀಂಕೋರ್ಟ್, ಕರ್ನಾಟಕ ಹೈಕೋರ್ಟ್‌ಗೆ ಕೋರಿತ್ತು. ಅದಕ್ಕೆ ಒಪ್ಪಿಗೆ ನೀಡಲಾಗಿದೆ, ಸುಮಾರು 200 ಕೋಟಿ ಪುಟಗಳ ಸ್ಕ್ಯಾನಿಂಗ್ ಆಗಬೇಕಾಗಿದೆ ಎಂದರು.

ಇದನ್ನೂ ಓದಿ: ಬೆಟ್ಟಗುಡ್ಡ ಕೊರೆದು ಕಾಮಗಾರಿ: ಪ್ರವಾಸಿಗರ ಸ್ವರ್ಗ ರಾಜಾಸೀಟ್​​ಗೆ ಎದುರಾಗಲಿದ್ಯಾ ಕಂಟಕ!

ಅಲ್ಲದೇ, ಈ ಕಾರ್ಯಕ್ಕಾಗಿ ಹೈಕೋರ್ಟ್‌ಗೆ ಹೆಚ್ಚಿನ ಸ್ಥಳಾವಕಾಶ ಅಗತ್ಯವಿದೆ. ಮುಂದಿನ ದಿನಗಳಲ್ಲಿ ಕೋರ್ಟ್‌ಗಳು ಕಾಗದ ರಹಿತವಾಗಲಿವೆ. ಲೈವ್ ಸ್ಟ್ರೀಮಿಂಗ್ ಸಂಬಂಧ ಕರಡು ನಿಯಮಗಳನ್ನು ಸುಪ್ರೀಂಕೋರ್ಟ್ ಪ್ರಕಟಿಸಿದ್ದು, ಅವುಗಳನ್ನು ಅಂತಿಮಗೊಳಿಸುವ ಕುರಿತು ಹೈಕೋರ್ಟ್‌ನಲ್ಲಿ ಸಮಾಲೋಚನೆಗಳು ನಡೆದಿವೆ. ಆದಷ್ಟು ಶೀಘ್ರ ನಿಯಮಗಳು ಅಂತಿಮಗೊಳ್ಳಲಿವೆ ಎಂದರು.

ಹೈಕೋರ್ಟ್‌ನ ತಳಮಹಡಿ ಹಾಗೂ ನೆಲಮಹಡಿಯಲ್ಲಿರುವ ಕಚೇರಿಗಳನ್ನು ತಾಂತ್ರಿಕ ಶಿಕ್ಷಣ ಇಲಾಖೆ ಕಚೇರಿಗೆ ಸ್ಥಳಾಂತರಿಸುವ ಸಂಬಂಧ ಹಾಗೂ ಕಟ್ಟಡವನ್ನು ಬಿಟ್ಟುಕೊಡುವ ಕುರಿತು 2 ವಾರಗಳಲ್ಲಿ ಸರ್ಕಾರ ನಿರ್ಧಾರ ಕೈಗೊಳ್ಳಬೇಕು. 1992ರಿಂದಲೂ ಹೈಕೋರ್ಟ್‌ನ ತಳಮಹಡಿಯಲ್ಲಿ ಕಚೇರಿಗಳು ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೆ ಸರ್ಕಾರವೂ ಹೊಣೆ. ಸದ್ಯ ಶೇ.70ರಷ್ಟು ಕಚೇರಿಗಳನ್ನು ಸ್ಥಳಾಂತರ ಮಾಡಲಾಗಿದ್ದು, ಇನ್ನುಳಿದ ಶೇ.30ರಷ್ಟು ಕಚೇರಿ ಸ್ಥಳಾಂತರ ಮಾಡುವ ಪ್ರಕ್ರಿಯೆ ನಡೆಯುತ್ತಿದೆ, ಇದಕ್ಕೆ ಸರ್ಕಾರ ಸಹಕಾರ ನೀಡಬೇಕು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.