ETV Bharat / city

ಆತ್ಮನಿರ್ಭರ್ ಭಾರತ ಪ್ಯಾಕೇಜ್​ನ ಪ್ರಯೋಜನ ಪಡೆಯಿರಿ..ಉದ್ಯಮಿಗಳಿಗೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಕರೆ - ಪೆಟ್ರೋ ರಾಸಾಯನಿಕ ಕ್ಷೇತ್ರ

ಸರ್ಕಾರಿ ಸಂಸ್ಥೆಗಳು 55 ರಾಸಾಯನಿಕಗಳ ದಾಸ್ತಾನಿನ ವೇಳೆ ಸ್ಥಳೀಯ ಉತ್ಪಾದಕರಿಗೆ ಆದ್ಯತೆ ನೀಡುವುದನ್ನು ಕಡ್ಡಾಯಗೊಳಿಸಿ ಸಾರ್ವಜನಿಕ ದಾಸ್ತಾನು ಆದೇಶಗಳ ಅಧಿಸೂಚನೆ ಹೊರಡಿಸಲಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದಗೌಡ ತಿಳಿಸಿದ್ದಾರೆ.

D.V. Sadananda Gowda Video Conference
ಆತ್ಮನಿರ್ಭರ್ ಭಾರತ ಪ್ಯಾಕೇಜ್​ನ ಪ್ರಯೋಜನ ಪಡೆಯಿರಿ..ಉದ್ಯಮಿಗಳಿಗೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಕರೆ
author img

By

Published : Jun 25, 2020, 11:21 PM IST

ನವದೆಹಲಿ/ಬೆಂಗಳೂರು: ರಾಸಾಯನಿಕ ಮತ್ತು ಪೆಟ್ರೋ ರಾಸಾಯನಿಕ ಕ್ಷೇತ್ರದಲ್ಲಿ ಅಪಾರ ಸಾಮರ್ಥ್ಯವಿದ್ದು, ಕೈಗಾರಿಕೆಗಳು, ಕೋವಿಡ್ -19ನಿಂದ ಬಾಧಿತವಾಗಿರುವ ಆರ್ಥಿಕತೆಗೆ ಪುನಶ್ಚೇತನ ನೀಡಲು ಪ್ರಕಟಿಸಲಾಗಿರುವ 20 ಲಕ್ಷ ಕೋಟಿ ರೂಪಾಯಿಗಳ ಆತ್ಮನಿರ್ಭರ್ ಭಾರತ ವಿಶೇಷ ಪ್ಯಾಕೇಜ್ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದಗೌಡ ಕರೆ ನೀಡಿದ್ದಾರೆ.

D.V. Sadananda Gowda Video Conference
ಆತ್ಮನಿರ್ಭರ್ ಭಾರತ ಪ್ಯಾಕೇಜ್​ನ ಪ್ರಯೋಜನ ಪಡೆಯಿರಿ..ಉದ್ಯಮಿಗಳಿಗೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಕರೆ

ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಗುರುವಾರ ರಾಸಾಯನಿಕ ಮತ್ತು ಪೆಟ್ರೋ ರಾಸಾಯನಿಕ ಸಲಹಾ ವೇದಿಕೆ ಸಭೆಯ ಅಧ್ಯಕ್ಷತೆ ವಹಿಸಿದ್ದ ಮಾತನಾಡಿದ ಸದಾನಂದಗೌಡ, ಭಾರತ ಸರ್ಕಾರ ಕಳೆದ 2014ರಿಂದಲೂ ದೇಶದಲ್ಲಿ ಸುಗಮ ವಾಣಿಜ್ಯ ನಡೆಸಲು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಇದರ ಫಲವಾಗಿ ವಿಶ್ವ ಬ್ಯಾಂಕ್ ವರದಿಯಲ್ಲಿ ಭಾರತ 2017ರಲ್ಲಿದ್ದ 130ನೇ ಸ್ಥಾನದಿಂದ 63ನೇ ಶ್ರೇಯಾಂಕ ಪಡೆದಿದೆ ಎಂದರು.

ರಾಸಾಯನಿಕ ಮತ್ತು ಪೆಟ್ರೋ ರಾಸಾಯನಿಕ ಇಲಾಖೆ ಕಳೆದ ಒಂದು ವರ್ಷಗಳ ಅವಧಿಯಲ್ಲಿ ವಲಯದ ಕ್ರಮಬದ್ಧ ಅಭಿವೃದ್ಧಿಗೆ ಬೆಂಬಲ ನೀಡಲು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಬಿಐಎಸ್ ಮಾನದಂಡವನ್ನು 19 ರಾಸಾಯನಿಕ ಮತ್ತು 5 ಪೆಟ್ರೋ ರಾಸಾಯನಿಕಗಳಿಗೆ ಕಡ್ಡಾಯಗೊಳಿಸಲಾಗಿದೆ. ಸರ್ಕಾರಿ ಸಂಸ್ಥೆಗಳು 55 ರಾಸಾಯನಿಕಗಳ ದಾಸ್ತಾನಿನ ವೇಳೆ ಸ್ಥಳೀಯ ಉತ್ಪಾದಕರಿಗೆ ಆದ್ಯತೆ ನೀಡುವುದನ್ನು ಕಡ್ಡಾಯಗೊಳಿಸಿ ಸಾರ್ವಜನಿಕ ದಾಸ್ತಾನು ಆದೇಶಗಳ ಅಧಿಸೂಚನೆ ಹೊರಡಿಸಲಾಗಿದೆ. ಅತಿ ಹೆಚ್ಚಿನ ಮೌಲ್ಯ ರಾಸಾಯನಿಕ ಇತ್ಯಾದಿಗಳ ಮಾರಾಟಕ್ಕೆ ಪ್ರತ್ಯೇಕ ಎಚ್.ಎಸ್. ಕೋಡ್ ಪಡೆಯುವ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ವಿವರಿಸಿದರು.

ಸೂಕ್ತ ಪ್ರೋತ್ಸಾಹಕಗಳ ಮಿಶ್ರಣದೊಂದಿಗೆ ಈ ಕೈಗಾರಿಕಾ ಸಮೂಹಗಳ ತ್ವರಿತ ಬೆಳವಣಿಗೆಯನ್ನು ಬೆಂಬಲಿಸಲು ಇಲಾಖೆ ಪರಿಷ್ಕರಿಸಿದ ಪಿಸಿಪಿಐಆರ್ ನೀತಿಯನ್ನು ರೂಪಿಸುತ್ತಿದೆ ಎಂದು ಅವರು ತಿಳಿಸಿದರು. ಮತ್ತೊಂದೆಡೆ, ಕೈಗಾರಿಕೆಗಳು ತಮ್ಮ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಹೆಚ್ಚಿಸುವ ಚಟುವಟಿಕೆ ಮತ್ತು ವೆಚ್ಚದ ಹೆಚ್ಚಳವನ್ನು ಪರಿಗಣಿಸಬೇಕು ಎಂದರು.

ತ್ಯಾಜ್ಯ ಉತ್ಪತ್ತಿಯನ್ನು ಕಡಿಮೆ ಮಾಡಲು, ಸುರಕ್ಷಿತ ದ್ರಾವಣಗಳನ್ನು ಬಳಸಲು ಮತ್ತು ರಾಸಾಯನಿಕ ಮತ್ತು ಪೆಟ್ರೋ ರಾಸಾಯನಿಕಗಳ ಕ್ಷೇತ್ರವನ್ನು ಪರಿಸರಾತ್ಮಕವಾಗಿ ಸುಸ್ಥಿರ ವಲಯವಾಗಿ ಅಭಿವೃದ್ಧಿ ಮಾಡಲು, ಪುನರ್ಬಳಕೆಯ ಪೂರಕ ವಸ್ತು ಬಳಸಲು ಸುಸ್ಥಿರ ಕೆಮಿಸ್ಟ್ರಿ ಎಂದು ಕರೆಯಲಾಗುವ ಹಸಿರು ಕೆಮಿಸ್ಟ್ರಿಯನ್ನು ಕೈಗಾರಿಕೆಗಳು ಅಳವಡಿಸಿಕೊಳ್ಳುವ ಅಗತ್ಯವಿದೆ.

ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಹಾಯಕ ಸಚಿವ ಮನ್ಸುಖ್ ಮಾಂಡವೀಯ ಮಾತನಾಡಿ. ನಮ್ಮ ಉತ್ಪಾದನಾ ನೆಲೆಯನ್ನು ಬಲಪಡಿಸಲು ಮತ್ತು ಹೊಸ ಹೂಡಿಕೆಗಳನ್ನು ಆಕರ್ಷಿಸಲು ಪಿಸಿಪಿಐಆರ್​ಗಳ ಅಭಿವೃದ್ಧಿ ಪ್ರಮುಖ ಪೂರ್ವಾಪೇಕ್ಷಿತವಾಗಿದೆ ಎಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.